ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುದ್ದೇಗೌಡನದೊಡ್ಡಿ ಗ್ರಾಮದ ರೈತ ಪುಟ್ಟಸ್ವಾಮಿ ಆತ್ಮಹತ್ಯೆ

By ಮಳವಳ್ಳಿ ಪ್ರತಿನಿಧಿ
|
Google Oneindia Kannada News

ಮಳವಳ್ಳಿ, ಮೇ 15: ಸಾಲ ಮಾಡಿ ಬೆಳೆದ ಬೆಳೆ ನೀರಿಲ್ಲದೆ ನಾಶವಾಗಿದ್ದರಿಂದ ನೊಂದ ಯುವ ರೈತನೊಬ್ಬ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಮಳವಳ್ಳಿ ತಾಲೂಕಿನ ಮುದ್ದೇಗೌಡನದೊಡ್ಡಿ ಗ್ರಾಮದಲ್ಲಿ ಶನಿವಾರ ವರದಿಯಾಗಿದೆ.

ಗ್ರಾಮದ ಮುದ್ದೇಗೌಡ ಅವರ ಪುತ್ರ ಪುಟ್ಟಸ್ವಾಮಿ (27) ಆತ್ಮಹತ್ಯೆ ಮಾಡಿಕೊಂಡ ಯುವರೈತ. ಪುಟ್ಟಸ್ವಾಮಿ ಹೆಸರಿನಲ್ಲಿ 24 ಗುಂಟೆ ಜಮೀನಿದ್ದು, ತಂದೆ ಮುದ್ದೇಗೌಡರ ಹೆಸರಿನಲ್ಲಿದ್ದ 1 ಎಕರೆ ಹಾಗೂ ಬೇರೆಯವರಿಂದ 1 ಎಕರೆ ಜಮೀನನ್ನು ಗುತ್ತಿಗೆ ಪಡೆದು ರೇಷ್ಮೆ, ಟೊಮ್ಯಾಟೊ, ಸೌತೆಕಾಯಿ, ಹೂ ಕೋಸು ಬೆಳೆ ಬೆಳೆದಿದ್ದನಾದರೂ ಮಳೆ ಬಾರದ್ದರಿಂದ ನೀರಿಲ್ಲದೆ ಬೆಳೆ ನೆಲಕಚ್ಚಿತ್ತು. ಇದರಿಂದ ಹಾಕಿದ ಹಣವೂ ಬಾರದೆ ಹೋಯಿತು.[ಬರಿದಾದ ಕೆಆರ್‍ಎಸ್, ಮಂಡ್ಯದಲ್ಲಿ ಬತ್ತಿದ ನದಿ, ಕೆರೆಗಳು]

Puttaswamy

ಬೆಳೆ ಬೆಳೆಯಲು ಕೃಷಿ ಪತ್ತಿನ ಸಹಕಾರ ಬ್ಯಾಂಕಿನಲ್ಲಿ 40 ಸಾವಿರ ರೂ., 45 ಸಾವಿರ ರೂ. ಮೌಲ್ಯದ ಚಿನ್ನಾಭರಣ ಅಡವಿಟ್ಟಿರುವುದಲ್ಲದೆ, ಜಮೀನು ಆಧಾರಮಾಡಿ 3 ಲಕ್ಷ ರೂ., ಸ್ವಸಹಾಯ ಸಂಘಗಳಿಂದ 1.35 ಲಕ್ಷ ರೂ., ಖಾಸಗಿ ವ್ಯಕ್ತಿಗಳಿಂದ 95 ಸಾವಿರ ರೂ. ಸಾಕ ಪಡೆದಿದ್ದನು. [ಬಕ್ಕ ಬರಿದಾದ ಕೆಆರ್‌ಎಸ್, ಕೊಡಗಿನಲ್ಲಿ ಮಳೆ ಸಿಂಚನ]

ಆದರೆ, ಸಾಲಗಾರರಿಗೆ ಹಣ ನೀಡಲು ಸಾಧ್ಯವಿಲ್ಲ ಎಂದರಿತ ಪುಟ್ಟಸ್ವಾಮಿ ಬಿತ್ತನೆ ಬೀಜಕ್ಕೆ ಹಾಕಲು ತಂದಿದ್ದ ಕ್ರಿಮಿನಾಶಕವನ್ನು ಮನೆಯಲ್ಲೇ ಸೇವಿಸಿದ್ದಾನೆ. ಪರಿಣಾಮ ಅಸ್ವಸ್ಥನಾಗಿ ನರಳಾಡುತ್ತಿದ್ದನು. ವಿಷಯ ತಿಳಿದ ಮನೆಯವರು ಆತನನ್ನು ಪಕ್ಕದ ಮನೆಯವರ ಸಹಾಯದಿಂದ ಮಳವಳ್ಳಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಜಿಲ್ಲಾಸ್ಪತ್ರೆ ದಾಖಲು ಮಾಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತ ರೈತನಿಗೆ ಪತ್ನಿ, ಇಬ್ಬರು ಗಂಡು ಮಕ್ಕಳಿದ್ದಾರೆ. ಈ ಕುರಿತು ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
A 27 year old farmer Puttaswamy allegedly committed suicide by consuming pesticides at his resident in Muddegowdanadoddi, Malavalli Taluk, Mandya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X