ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿ : 8ನೇ ತರಗತಿ ವಿದ್ಯಾರ್ಥಿನಿ ನಾಪತ್ತೆ

|
Google Oneindia Kannada News

ಉಡುಪಿ, ನ. 19 : ಉಡುಪಿಯ ಕು೦ಜಿಬೆಟ್ಟುವಿನ ಹೆಸರಾ೦ತ ಶಾರದಾ ಇ೦ಗ್ಲೀಷ್ ಮೀಡಿಯ೦ ವಸತಿ ನಿಲಯ ಶಾಲೆಯಿ೦ದ 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ನಾಪತ್ತೆಯಾದ ಘಟನೆ ತಡವಾಗಿ ಬೆಳಕಿದೆ ಬಂದಿದೆ. ವಿದ್ಯಾರ್ಥಿನಿ ಪೋಷಕರು ಶಾಲೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

8ನೇ ತರಗತಿಯಲ್ಲಿ ಓದುತ್ತಿರುವ ಇಶಿಕಾ .ಎಸ್‌. ಶೆಟ್ಟಿ ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದಾಳೆ. ಇಶಿಕಾ ಶೆಟ್ಟಿ ನಾಪತ್ತೆಯಾಗಿರುವ ವಿಚಾರವನ್ನು ಶಾಲಾ ಆಡಳಿತ ಮಂಡಳಿ ಮನೆಯವರಿಗೆ ತಿಳಿಸದಿರುವ ಹಿನ್ನೆಲೆಯಲ್ಲಿ ಶಾಲೆಯ ಆಡಳಿತ ಮಂಡಳಿಯ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Udupi

ಶಾಲೆಯ ಮು೦ಭಾಗದಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಇದರಲ್ಲಿ ವಿದ್ಯಾರ್ಥಿನಿಯು ಹೊರಗೆ ಹೋಗಿರುವ ಬಗ್ಗೆ ಯಾವುದೇ ದೃಶ್ಯಗಳು ಸೆರೆಯಾಗಿಲ್ಲ. ಶಾಲೆಯ ಹಿ೦ಭಾಗದಿ೦ದ ಆಕೆ ಹೋಗಿರಬಹುದು ಎಂದು ಶಂಕಿಸಲಾಗಿದೆ. ಪೋಷಕರು ಮಗಳು ಅಪಹರಣವಾಗಿದ್ದಾಳೆ ಎಂದು ಆರೋಪಿಸುತ್ತಿದ್ದಾರೆ. [ತೀರ್ಥಹಳ್ಳಿಯಲ್ಲಿ ಅಪ್ರಾಪ್ತ ಬಾಲಕಿ ಕೊಲೆ]

ವಿದ್ಯಾರ್ಥಿನಿಯು ಚೀಟಿಯೊ೦ದರಲ್ಲಿ ಆತ್ಮಹತ್ಯೆಮಾಡಿಕೊಳ್ಳುವುದಾಗಿ ಬರೆದಿಟ್ಟಿದ್ದಾಳೆ೦ಬ ಸುದ್ದಿ ಹಬ್ಬಿದೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ಇಶಿಕಾ ಮುಲ್ಕಿ ಸಮೀಪದ ಕಿನ್ನಿಗೋಳಿಯ ನಿವಾಸಿಗಳ ಪುತ್ರಿಯಾಗಿದ್ದು, ತಂದೆ-ತಾಯಿ ಮಸ್ಕತ್‌ನಲ್ಲಿ ನೆಲೆಸಿದ್ದಾರೆ.

ಸಿನಿಮಾ ನಟಿಯಾಗುವ ಆಸೆ ಇತ್ತು : ಇಶಿಕಾ .ಎಸ್‌. ಶೆಟ್ಟಿ ತಾನು ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಬೇಕು ಎಂಬ ಆಸೆ ಹೊಂದಿದ್ದಳು, ಈ ಕುರಿತು ಸ್ನೇಹಿತೆಯರೊಂದಿಗೂ ಮಾತನಾಡಿದ್ದಳು ಎಂದು ತಿಳಿದುಬಂದಿದೆ. ಈ ಬಗ್ಗೆಯೂ ತನಿಖೆ ನಡೆಯುತ್ತಿದೆ.

English summary
8th standard girl missing form Sharada residential school, Kunjibettu Udupi district Karnataka. Parents staged a protest over the disappearance of a girl from the school. Eshika Shetty (13)reportedly went missing from the school's hostel premises on the evening of Saturday November 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X