ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರವಣಬೆಳಗೊಳ ಸಾಹಿತ್ಯ ಸಮ್ಮೇಳನ ಲಾಂಛನ ಬಿಡುಗಡೆ

|
Google Oneindia Kannada News

ಹಾಸನ, ಡಿ. 22 : ಶ್ರವಣಬೆಳಗೊಳದಲ್ಲಿ ನಡೆಯುವ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಭಾನುವಾರ ಬಿಡುಗಡೆ ಮಾಡಲಾಗಿದೆ. ಫೆಬ್ರುವರಿ 1ರಿಂದ 3ವರೆಗೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ದಲಿತ ಕವಿ ಡಾ. ಸಿದ್ದಲಿಂಗಯ್ಯ ಅವರು ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ.

ಭಾನುವಾರ ಶ್ರವಣಬೆಳಗೊಳದ ಚಾವುಂಡರಾಯ ಸಭಾ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರು ಲಾಂಛನ ಅನಾವರಣಗೊಳಿಸಿದರು. ಹಾಸನವು ಕೃಷಿ, ಬಾಹ್ಯಾಕಾಶ, ಶ್ರದ್ಧಾ ಕೇಂದ್ರ, ಪರಿಸರ, ಶಿಲ್ಪಕಲೆ ಹೀಗೆ ಹಲವು ರೀತಿಯಿಂದ ಪ್ರಮುಖ ಜಿಲ್ಲೆಯಾಗಿದ್ದು, ಲಾಂಛನದಲ್ಲಿ ಎಲ್ಲಾ ವಿಚಾರಗಳಿಗೂ ಗಮನ ನೀಡಲಾಗಿದೆ. [ಸಾಹಿತ್ಯ ಸಮ್ಮೇಳನಕ್ಕೆ ಕವಿ ಸಿದ್ದಲಿಂಗಯ್ಯ ಅಧ್ಯಕ್ಷ]

sahitya sammelana logo

ಹೇಗಿದೆ ಲಾಂಛನ : ಲಾಂಛನದ ತುತ್ತ ತುದಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬಾವುಟ, ಕೆಳಗೆ ಭುವನೇಶ್ವರಿ ಚಿತ್ರ, ಕನ್ನಡ ಬಾವುಟ, ಹೊಯ್ಸಳರ ಲಾಂಛನ, ಪಂಪನ ಧ್ಯೇಯವಾಕ್ಯ (ಮನುಷ್ಯಜಾತಿ ತಾನೊಂದೆ ವಲಂ) ಎಂದು ಬರೆಯಲಾಗಿದೆ. [ಶ್ರವಣಬೆಳಗೊಳದಲ್ಲಿ 81ನೇ ಕನ್ನಡ ಸಾಹಿತ್ಯ ಸಮ್ಮೇಳನ]

ಬಾಹುಬಲಿ ಪ್ರತಿಮೆ, ಹಲ್ಮಿಡಿ ಶಾಸನ, ಕಸಾಪ ಶತಮಾನೋತ್ಸವದ ಲಾಂಛನ, ಬಾಹ್ಯಾಕಾಶ ನಿಯಂತ್ರಣ ಕೇಂದ್ರ, ಸಕಲೇಶಪುರದ ಮುಂಜ್ರಾಬಾದ್‌ ಕೋಟೆ, ಕಾಫಿ, ತೆಂಗು, ಭತ್ತ, ಆಲೂಗೆಡ್ಡೆ, ಹೇಮಾವತಿ ಜಲಾಶಯ ಹೀಗೆ ಎಲ್ಲ ಚಿತ್ರಗಳನ್ನೂ ಲಾಂಛನದಲ್ಲಿ ಬಳಸಿಕೊಳ್ಳಲಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಲಾಂಛನವನ್ನು ಬಿಡುಗಡೆ ಮಾಡಿದರು. ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್‌, ಚಾರುಕೀರ್ತಿಭಟ್ಟಾರಕ ಸ್ವಾಮೀಜಿ, ಶಾಸಕರಾದ ಸಿ.ಎನ್‌. ಬಾಲಕೃಷ್ಣ, ಎಚ್‌.ಎಸ್‌. ಪ್ರಕಾಶ್‌ ಮುಂತಾದವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

English summary
The logo for the 81st Kannada Sahitya Sammelan was unveiled at Shravanabelagola, Hassan district on Sunday. The logo carries pictures that represent Halmidi inscription, which provides evidence for the long history of Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X