ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮನಗರ : ಸಾವನದುರ್ಗ ಬೆಟ್ಟದಲ್ಲಿ ವಿದ್ಯಾರ್ಥಿಗಳ ರಕ್ಷಣೆ

|
Google Oneindia Kannada News

ರಾಮನಗರ, ಮಾ. 22 : ಚಾರಣಕ್ಕೆ ಬಂದು ಸಾವನದುರ್ಗ ಬೆಟ್ಟದ ಕಂದಕದಲ್ಲಿ ಸಿಲುಕಿದ್ದ ಬೆಂಗಳೂರಿನ 5 ವಿದ್ಯಾರ್ಥಿಗಳನ್ನು ಸುಮಾರು 10 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಣೆ ಮಾಡಲಾಗಿದೆ. ಯುಗಾದಿ ರಜೆ ಕಳೆಯಲು ಬೆಂಗಳೂರಿನಿಂದ ಈ ವಿದ್ಯಾರ್ಥಿಗಳು ಬೆಟ್ಟಕ್ಕೆ ಆಗಮಿಸಿದ್ದರು.

ಬೆಂಗಳೂರಿನ ಪೀಣ್ಯ ಮೂಲದ 6 ಮಂದಿ ವಿದ್ಯಾರ್ಥಿಗಳು ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಮಾಗಡಿ ತಾಲೂಕಿನಲ್ಲಿರುವ ಸಾವನದುರ್ಗ ಬೆಟ್ಟಕ್ಕೆ ಮೂರು ಬೈಕ್‌ಗಳಲ್ಲಿ ಆಗಮಿಸಿದ್ದರು. ಬೃಹತ್ ಬೆಟ್ಟವನ್ನು ಆರು ಜನರು ಹತ್ತಿದ್ದರು. ಆದರೆ, ಚಾರಣದ ನಡುವೆ ಬೆಟ್ಟದ ಮಧ್ಯೆ ಇದ್ದ ಕಂದಕಕ್ಕೆ ಐವರು ಬಿದ್ದು, ಸಿಕ್ಕಿಹಾಕಿಕೊಂಡಿದ್ದರು.

Savandurga hills

ಸುಮಾರು 3 ಸಾವಿರ ಅಡಿ ಎತ್ತರದ ಬಿಳಿಕಲ್ಲು-ಕರಿಕಲ್ಲು ಬೆಟ್ಟವನ್ನು ಈ ಯುವಕರು ಹತ್ತಿದ್ದರು. ಎರಡು ಬೆಟ್ಟದ ನಡುವಿನ ಕಂದಕದ ನಡುವೆ ಇಳಿಯಲು ಪ್ರಯತ್ನ ಮಾಡಿದಾಗ ಐವರು ಸಿಕ್ಕಿಹಾಕಿಕೊಂಡಿದ್ದಾರೆ. ಪಾರಾಗಿ ಬಂದ ವಿದ್ಯಾರ್ಥಿ ಓಡಿಬಂದು ಸ್ಥಳೀಯರಿಗೆ ಈ ಬಗ್ಗೆ ಮಾಹಿತಿ ನೀಡಿದ್ದ. [ಶಿವಗಂಗೆ ಬೆಟ್ಟದಿಂದ ಹಾರಿದರೂ ಬದುಕುಳಿದ!]

Savandurga hills

ವಿದ್ಯಾರ್ಥಿಗಳ ಪರದಾಟ : ಕಂದಕದಲ್ಲಿ ಸಿಲುಕಿಕೊಂಡ ವಿದ್ಯಾರ್ಥಿಗಳು ಊಟ, ತಿಂಡಿ ನೀರಿಲ್ಲದೇ ರಕ್ಷಣೆಗೆ ಅಂಗಲಾಚಿದ್ದಾರೆ. ಯುವಕರ ಬಗ್ಗೆ ಮಾಹಿತಿ ತಿಳಿದ ಸ್ಥಳೀಯರು ಪೊಲೀಸರಿಗೆ ಮತ್ತು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಆದರೆ, ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಕಂದಕದಲ್ಲಿದ್ದ ವಿದ್ಯಾರ್ಥಿಗಳನ್ನು ರಕ್ಷಿಸಲು ಸಾಧ್ಯವಾಗಿಲ್ಲ.

Savandurga hills4

ಭಾನುವಾರ ಸಂಜೆಯ ವೇಳೆಗೆ ಸ್ಥಳಕ್ಕೆ ಬಂದ ಬೆಂಗಳೂರಿನ ಲಾಯ್ಡ್ ಮತ್ತು ಪ್ರವೀಣ್ ನೇತೃತ್ವದ ಸಾಹಸಿ ಚಾರಣಿಗರ ತಂಡ ರಾತ್ರಿಯೇ ಬೆಟ್ಟಹತ್ತಿದ್ದು, ಭಾನುವಾರ ಬೆಳಗ್ಗೆ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿದ್ದಾರೆ.

Savandurga hills6
English summary
Five students rescued from Savandurga hills, Ramanagaraa on Sunday, March 22, 2015 morning. Bengaluru Peenya based students comes for trucking for Savandurga on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X