ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2014 ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ

|
Google Oneindia Kannada News

ಬೆಂಗಳೂರು, ಮಾರ್ಚ್ 30 : ಕರ್ನಾಟಕ ಸಾಹಿತ್ಯ ಅಕಾಡೆಮಿ 2014ನೇ ಸಾಲಿನ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ಏ.29ರಂದು ಧಾರವಾಡದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.

ಅಕಾಡೆಮಿ ಅಧ್ಯಕ್ಷೆ ಪ್ರೊ.ಮಾಲತಿ ಪಟ್ಟಣ ಶೆಟ್ಟಿ ಅವರು ಮಂಗಳವಾರ 2014ನೇ ಸಾಲಿನ ಪ್ರಶಸ್ತಿಯನ್ನು ಘೋಷಣೆ ಮಾಡಿದರು. ಚಿಂತಕ ಡಾ.ಜಿ.ರಾಮಕೃಷ್ಣ, ಹಿರಿಯ ಸಂಶೋಧಕ ಷ.ಶೆಟ್ಟರ್, ಕವಿ ಸುಬ್ರಾಯ ಚೊಕ್ಕಾಡಿ, ಕವಯತ್ರಿ ಸವಿತಾ ನಾಗಭೂಷಣ ಮತ್ತು ಧಾರವಾಡದ ಪ್ರೊ.ಸುಕನ್ಯಾ ಮಾರುತಿ ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ. [2015ನೇ ಸಾಲಿನ ಪ.ಗೋ.ಪ್ರಶಸ್ತಿಗೆ ಚಂದ್ರಹಾಸ ಚಾರ್ಮಾಡಿ ಆಯ್ಕೆ]

subraya chokkadi

ಗೌರವ ಪ್ರಶಸ್ತಿಯು 10 ಸಾವಿರ ರೂ.ನಗದನ್ನು ಒಳಗೊಂಡಿದೆ. ಏ. 29ರಂದು ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಖ್ಯಾತ ಭಾಷಾಶಾಸ್ತ್ರಜ್ಞ ಡಾ.ಗಣೇಶ್‌ ದೇವಿ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. [ಬಜೆಟ್‌ನಲ್ಲಿ ಕನ್ನಡ ಭಾಷೆಗೆ ಸಿದ್ದರಾಮಯ್ಯ ಕೊಟ್ಟಿದ್ದೇನು?]

ದತ್ತಿನಿಧಿ ಬಹುಮಾನ : ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಜೊತೆ 2013ನೇ ಸಾಲಿನ ದತ್ತಿನಿಧಿ ಬಹುಮಾನವನ್ನು ಘೋಷಣೆ ಮಾಡಲಾಗಿದೆ. ಅದರ ವಿವರಗಳು ಇಲ್ಲಿವೆ... [ಕರ್ನಾಟಕ ಸಾಹಿತ್ಯ ಅಕಾಡೆಮಿ ವೆಬ್ ಸೈಟ್]

* ಚದುರಂಗ ದತ್ತಿನಿಧಿ : ಡಾ.ಸಿ.ಆರ್‌.ಪಾರ್ಥ ಸಾರಥಿ, ಅನಾವರಣ (ಕಾದಂಬರಿ)
* ಅಮೆರಿಕನ್ನಡ ದತ್ತಿನಿಧಿ : ದೀಪಾ ನಾಗೇಶ್, ಹಂಟ್ ಬ್ಯಾಗಲ್ ಕಮಿಲಿಯನ್
* ಪಿ.ಶ್ರೀನಿವಾಸರಾವ್‌ ದತ್ತಿನಿಧಿ : ಡಾ.ಬಸವರಾಜ ಸಬರದ, ಸಾಹಿತ್ಯ ಸಿಂಚನ (ವಿಮರ್ಶೆ)
* ಎಲ್‌.ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ : ಡಾ.ಅಶೋಕ್ ಕುಮಾರ್, ಕುರಿಂಜಿ ಜೇನು (ಅನುವಾದ)
* ಮಧುರಚೆನ್ನ ದತ್ತಿನಿಧಿ: ಪ್ರೊ.ರಮೇಶ ಮ.ಕಲ್ಲನಗೌಡರ, ಅಮೃತಕ್ಕೆ ಹಾರಿದ ಗರುಡ (ಮೊದಲ ಸ್ವತಂತ್ರ ಕೃತಿ)
* ಸಿಂಪಿ ಲಿಂಗಣ್ಣ ದತ್ತಿನಿಧಿ : ಎನ್‌.ಎಲ್‌.ಆನಂದ್‌/ಗುಂಡಪ್ಪ ದೇವಿಕೇರಿ. ನೆಲದೊಡಲ ಚಿಗುರು ಡಾ.ಎಲ್‌. ನಾರಾಯಣ ರೆಡ್ಡಿ (ಜೀವನ ಚರಿತ್ರೆ)

English summary
The Karnataka Sahitya Academy has announced its annual awards for 2014 on March 29, 2016. Subraya Chokkadi, Savitha Nagabhushan, Sukanya Maruthi have been chosen for the honorary award for 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X