ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಮಗಳೂರಿನಲ್ಲಿ 2 ಸಾವಿರ ರು ಖೋಟಾನೋಟು ಪತ್ತೆ

By Ananthanag
|
Google Oneindia Kannada News

ಚಿಕ್ಕಮಗಳೂರು, ನವೆಂಬರ್ 12 : ಚಿಕ್ಕಮಗಳೂರಿನಲ್ಲಿ 2 ಸಾವಿರ ರೂ ನೋಟಿನ ಖೋಟಾನೋಟು ಪತ್ತೆಯಾಗಿದ್ದು ಅದನ್ನು ಕತ್ತರಿಯಿಂದ ಕಟ್ ಮಾಡಲಾಗಿದೆ. ಈ ಖೋಟಾನೋಟು ಚಿಕ್ಕಮಗಳೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಸಿಕ್ಕಿದ್ದು ಜನರ ಆತಂಕಕ್ಕೆ ಕಾರಣವಾಗಿದೆ.

ಈರುಳ್ಳಿ ವ್ಯಾಪರಿ ಅಶೋಕ್ ಅವರ ಅಂಗಡಿ ಹುಡುಗನಿಗೆ ಯಾರೋ ಯಾಮಾರಿಸಿ ಈ ನೋಟು ಕೊಟ್ಟು ಹೋಗಿದ್ದಾರೆ. ಟೀ ಕುಡಿಯಲು ಅಶೋಕ್ ಹೊರಗೆ ಹೋಗಿದ್ದಾರೆ ಈ ವೇಳೆ ಘಟನೆ ನಡೆದಿದ್ದು, ಇದು ಹೊಸ ನೋಟಿನ ಕಲರ್ ಪ್ರಿಂಟಾ ಎಂಬ ಶಂಕೆ ವ್ಯಕ್ತವಾಗಿದೆ. ನಕಲಿ ನೋಟಿನಲ್ಲಿ ಕೊನೆ ಭಾಗದಲ್ಲಿ ಇರುವ ಐದುಗೆರೆಯನ್ನು ಇಲ್ಲ. ಹಾಗೆ ಅದನ್ನು ಕತ್ತರಿಯಿಂದ ಕಟ್ ಮಾಡಲಾಗಿದೆ. ಅಸಲಿ ನೋಟು ನಕಲಿ ನೋಟುಗಳಿಗೂ ಬಹಳಷ್ಟು ವ್ಯತ್ಯಾಸವಿರುವುದು ಸ್ಪಷ್ಟವಾಗಿದೆ.[ನಕಲಿ ನೋಟು ಜಾಲ ಮಟ್ಟಹಾಕಿದ ನರೇಂದ್ರ ಮೋದಿ]

nakali

ಜನರು ತಮ್ಮ ಬಳಿ ಇರುವ ಐನೂರು ಸಾವಿರ ರು ಹಳೇ ನೋಟುಗಳನ್ನು ಹೇಗೆ ಬದಲಾವಣೆ ಮಾಡುವುದು ಹೇಗೆ ಎಂದು ಯೋಚಿಸುತ್ತಿರುವ ವೇಳೆಯಲ್ಲಿ ಇದೊಂದು ಭಾರಿ ತಲೆನೋವು ಉಂಟುಮಾಡಿದೆ. ಜನರಿಗೆ ಕೇವಲ ಒಂದು ಬಾರಿಗೆ ವಹಿವಾಟಿಗೆ 2 ಸಾವಿರ ರು ಮಾತ್ರ ನೀಡುತ್ತಿರುವುದೇ ಕಷ್ಟದ ಸ್ಥಿತಿ. ಈ ಸಂದರ್ಭದಲ್ಲಿ ಕಿಡಿಗೇಡಿಗಳು ಹೊಸನೋಟನ್ನು ಪಡೆದು ಅದನ್ನು ಖೋಟಾನೋಟಾಗಿ ಪರಿವರ್ತಿಸುತ್ತಿರುವುದು ದೊಡ್ಡ ಪ್ರಮಾಣದ ಆರ್ಥಿಕ ಗಲಭೆಗೆ ಮುನ್ನುಡಿ ಎಂಬಂತಾಗಿದೆ.

ಈ ಸಂಬಂಧ ಅಶೋಕ್ ಯಾರಿಗೂ ದೂರು ನೀಡಿಲ್ಲ. ಹಾಗು ದೂರು ನೀಡುತ್ತೇನೆ ಎಂದು ಹೇಳಿದ್ದು, ವ್ಯಾಪಾರಸ್ಥರು ಎರಡು ಸಾವಿರು ರುಪಾಯಿಯನ್ನು ತೆಗೆದುಕೊಳ್ಳಬೇಕಾದರೆ ಒಂದಲ್ಲಾ ಎರಡು ಬಾರಿ ಪರಿಶೀಲನೆ ಮಾಡಿ ಎಂದಿದ್ದಾರೆ. ಹಾಗೆಯೇ ಬಡವರಿಗೆ ಈ ರೀತಿಯಾದರೆ ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಪೊಲೀಸರು ತನಿಖಾದಳ ರಚಿಸಿ ಪರಿಶೀಲನೆಗೆ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.[ಇನ್ನು ಎರಡು ವರ್ಷದಲ್ಲಿ ದೇಶದಲ್ಲೇ ಎಲ್ಲ ನೋಟು ಮುದ್ರಣ]

ಜನರ ನಿತ್ಯ ವ್ಯವಹಾರಕ್ಕೆ ಹಣದ ಕೊರತೆ, ಹಣ ಬದಲಾಯಿಸಲು ಇರುವ ತೊಂದರೆ, ಹೇಗಾದರೂ ಮಾಡಿ ತಮ್ಮ ಕಾಳಧನವನ್ನು ಉಳಿಸಿಕೊಳ್ಳಲು ಮಾಡಿರುವ ಪ್ರಯೋಗಗಳ ಜತೆಗೆ ಖೋಟಾ ನೋಟಿನ ಮಾರಿಯೂ ಸೇರಿಕೊಂಡಿದೆ. ಇದು ಚಿಕ್ಕಮಗಳೂರು ಒಂದರ ಕಥೆಯಲ್ಲ. ದೇಶದ ವಿವಿಧೆಡೆ ಈ ರೀತಿಯ ಮನೋವಿಕಾರ ಇಂತಹ ಕೆಲಸವನ್ನು ಮಾಡಿಸುತ್ತಿರುತ್ತದೆ.

English summary
2 thousand kota note found in chikkamagluru in APMC market.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X