ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೃತ್ ಯೋಜನೆಯಡಿ ಬೆಂಗಳೂರಿಗೆ ಹೆಚ್ಚು ಅನುದಾನ

|
Google Oneindia Kannada News

ಬೆಂಗಳೂರು, ಡಿಸೆಂಬರ್ 16 : ರಾಜಧಾನಿ ಬೆಂಗಳೂರು ಸೇರಿದಂತೆ ಅಮೃತ್ ಯೋಜನೆಗೆ ಆಯ್ಕೆಯಾಗಿರುವ ಕರ್ನಾಟಕದ 27 ನಗರಗಳಿಗೆ ಕೇಂದ್ರ ಸರ್ಕಾರ 1,258 ಕೋಟಿ ರೂ. ಮಂಜೂರು ಮಾಡಿದೆ. ಬೆಂಗಳೂರು ನಗರಕ್ಕೆ 173 ಕೋಟಿ ರೂ. ಮಂಜೂರಾಗಿದೆ.

ಅಟಲ್‌ ನಗರ ನವೀಕರಣ ಮತ್ತು ಕಾಯಕಲ್ಪ (ಅಮೃತ್‌) ಯೋಜನೆಯ ಅಡಿಯಲ್ಲಿ, 10 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ನಡೆಯುವ ಕಾಮಗಾರಿಗಳ ಯೋಜನಾ ವೆಚ್ಚದಲ್ಲಿ ಶೇ 50ರಷ್ಟನ್ನು ಕೇಂದ್ರ ಸರ್ಕಾರ ಭರಿಸಲಿದೆ. ಇದರ ಅನ್ವಯ ಕೇಂದ್ರ ನಗರಾಭಿವೃದ್ಧಿ ಇಲಾಖೆ ಅನುದಾನ ಮಂಜೂರು ಮಾಡಿದೆ. [ಸ್ಮಾರ್ಟ್ ಸಿಟಿ : ಕರ್ನಾಟಕಕ್ಕೆ 6 ಮಿಕ್ಕ ರಾಜ್ಯಕ್ಕೆ ಎಷ್ಟು?]

amruth project

ಬೆಂಗಳೂರು ಸೇರಿದಂತೆ ರಾಜ್ಯದ 27 ನಗರಗಳು ಅಮೃತ್ ಯೋಜನೆಗೆ ಆಯ್ಕೆಯಾಗಿವೆ. 1,258 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಒಟ್ಟು ಅನುದಾನದ ಪೈಕಿ, 552 ಕೋಟಿ ಮೊತ್ತವನ್ನು 27 ನಗರಗಳ ನೀರು ಪೂರೈಕೆಗೆ ಮೀಸಲಿಡಲಾಗಿದೆ. [ಸ್ಮಾರ್ಟ್ ಸಿಟಿಗೆ ಕನ್ನಡದ ಹೆಸರು ಸಮರ್ಥ ನಗರ]

613 ಕೋಟಿ ಒಳ ಚರಂಡಿ ಕಾಮಗಾರಿಗಳಿಗೆ, 49 ಕೋಟಿ ಮಳೆ ನೀರು ಚರಂಡಿ ನಿರ್ಮಾಣಕ್ಕೆ, 19 ಕೋಟಿ ಉದ್ಯಾನ ಮತ್ತು ಹಸಿರು ನಿರ್ಮಾಣಕ್ಕೆ, 18 ಕೋಟಿ ಅನುದಾನವನ್ನು ನಗರ ಸಾರಿಗೆ ಉದ್ದೇಶಕ್ಕೆ ನಿಗದಿಪಡಿಸಲಾಗಿದೆ. ನಗರಗಳ ಸ್ಥಳೀಯ ಆಡಳಿತಗಳು ಯೋಜನೆಯ ಒಟ್ಟು ವೆಚ್ಚದ ಪೈಕಿ ಶೇ 30 ರಿಂದ 47 ರಷ್ಟು ಮೊತ್ತವನ್ನು ಭರಿಸಬೇಕಾಗಿದೆ. [ಸ್ಮಾರ್ಟ್ ಸಿಟಿಯಾಗಲಿರುವ 98 ನಗರಗಳ ಪಟ್ಟಿ]

ಕೇಂದ್ರ ನೀಡಿರುವ ಅನುದಾನ ಪೈಕಿ ಬೆಂಗಳೂರಿಗೆ ಅತಿ ಹೆಚ್ಚು ಅಂದರೆ 173 ಕೋಟಿ ಹಣ ಮಂಜೂರಾಗಿದೆ. ಪಾಲಿಕೆ ಆಡಳಿತದ ಮೇಲೆ ಬೀಳುವ ಹಣಕಾಸಿನ ಹೊರೆಯನ್ನು ಕಡಿಮೆ ಗೊಳಿಸಲು ರಾಜ್ಯ ಸರ್ಕಾರ ತನ್ನ ಪಾಲಿನ ಮೊತ್ತವನ್ನು ಹೆಚ್ಚಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ಅಮೃತ್ ಯೋಜನೆಗೆ ಯಾವ ನಗರಗಳು : ರಾಜ್ಯದ ಚಿತ್ರದುರ್ಗ, ಭದ್ರಾವತಿ, ಕೋಲಾರ, ರಾಬರ್ಟ್‌ಸನ್‌ ಪೇಟೆ, ಉಡುಪಿ, ಹಾಸನ, ಚಿಕ್ಕಮಗಳೂರು, ಮಂಡ್ಯ, ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ-ಬೆಟಗೇರಿ, ರಾಣೆಬೆನ್ನೂರು, ಬೀದರ್‌, ಬಳ್ಳಾರಿ ಮುಂತಾದ ನಗರಗಳು ಅಮೃತ್ ಯೋಜನಗೆ ಆಯ್ಕೆಯಾಗಿವೆ.

ಪ್ರಸ್ತಾವನೆ ಸಲ್ಲಿಕೆ : ಕರ್ನಾಟಕ ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿರುವ ಬೆಳಗಾವಿ, ಹುಬ್ಬಳ್ಳಿ- ಧಾರವಾಡ, ದಾವಣಗೆರೆ, ಮಂಗಳೂರು, ಶಿವಮೊಗ್ಗ ಮತ್ತು ತುಮಕೂರು ಸೇರಿದಂತೆ ಆರು ನಗರಗಳ ಅಭಿವೃದ್ಧಿ ಯೋಜನೆಯ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಮಂಗಳವಾರ ಸಲ್ಲಿಸಿದೆ.

English summary
Central government has sanctioned Rs 1,258 core for Karnataka under the Atal Mission for Rejuvenation and Urban Transformation (AMRUT) project. 27 cities have been identified from state for funding under Amrut. City names listed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X