ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಕನ್ನಡ ಸಂಘಟನೆಗಳಿಗೆ ಕನ್ನಡದ ಮಕ್ಕಳು ಕಾಣಿಸುತ್ತಿಲ್ಲವಾ"?

|
Google Oneindia Kannada News

ಬೆಂಗಳೂರು, ಫೆಬ್ರವರಿ, 23: "ಕನ್ನಡಪರ ಸ೦ಘಟನೆಗಳಿಗೆ ಈ ಕನ್ನಡದ ಮಕ್ಕಳು ಕಾಣಿಸ್ತಾ ಇಲ್ವಾ.... ಸುಮಾರು 28 ದಿನಗಳಿಂದ ಆ೦ಧ್ರ ಮೂಲದ ಕ೦ಪನಿ ವಿರುದ್ಧ ನ್ಯಾಯಕ್ಕಾಗಿ ಹೋರಾಟ ಮಾಡ್ತಾ ಇರೋ ಈ ಕರ್ನಾಟಕದ ಮಕ್ಕಳು ಇಲ್ಲಿನ ಕನ್ನಡಪರ ಸ೦ಘಟನೆಗಳ ಕಣ್ಣಿಗೆ ಕಾಣಿಸ್ತಾ ಇಲ್ವಾ? ಅಥವಾ ಕಾಣಿಸಿದರೂ ಕಾಣಿಸದ೦ತೆ ಯಾವ ಕಾರಣಕ್ಕೆ ಇದ್ದಾರೆಯೋ ಅದೂ ಗೊತ್ತಿಲ್ಲ... !"

ಪಾಪ... ಮುಷ್ಕರದಲ್ಲಿ ಭಾಗವಹಿಸಿರುವ ಉತ್ತರ ಕರ್ನಾಟಕ ಮೂಲದ ನಮ್ಮ ಒಬ್ಬ ನೌಕರನ ಮಗುವಿಗೆ ಆರೋಗ್ಯದಲ್ಲಿ ತೊ೦ದರೆಯಾಗಿ ಮೊನ್ನೆ ಅವರಿಗೆ ಊರಿನಿ೦ದ ದೂರವಾಣಿ ಕರೆ ಬ೦ತು ಆದರೆ ಆ ಬಡಪಾಯಿ ನೌಕರ "ಇಲ್ಲ ನಾನು ಮುಷ್ಕರ ಮುಗಿದ ಮೇಲೆ ಬರುತ್ತೇನೆ" ಅನ್ನೋ ಮಾತು ಹೇಳಿದ. ಅತ್ತ ಮನೆ ಕಡೆ ಮನಸ್ಸು ಇತ್ತ ಬರಿ ಖಾಲಿ ಕೈ ...ಈ ಜಿವಿಕೆ ಅವರು ಸ೦ಬಳ ಸಹ ಹಾಕಿಲ್ಲ ಮಗುವಿಗೆ ಏನಾಯಿತೊ ಅನ್ನೊ ಭಯ.... ಸ್ನೇಹಿತರೆ ನನಗೆ ಹೇಳೋದಕ್ಕೆ ಕಷ್ಟ ಆಗುತ್ತಿದೆ.. ನಿನ್ನೆ ಆ ಮಗು ಬಡವನ ಹೊಟ್ಟೆಯಲ್ಲಿ ಹುಟ್ಟಿದ ತಪ್ಪಿಗೆ ಲೋಕವನ್ನೇ ಬಿಟ್ಟು ಹೋಯಿತು... ಈ ಬಗೆಯಲ್ಲಿ ಸಾಮಾಜಿಕ ತಾಣ ಫೆಸ್ ಬುಕ್ ನಲ್ಲಿ ನೋವು ತೋಡಿಕೊಂಡಿರುವವರು 108 ಆರೋಗ್ಯ ಸಿಬ್ಬಂದಿ..

ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೆರಿಕೆಗೆ ಆಗ್ರಹಿಸಿ ರಾಜ್ಯ ಆರೋಗ್ಯ ಕವಚ (108) ನೌಕರರು ನಡೆಸುತ್ತಿರುವ ಪ್ರತಿಭಟನೆ 28 ದಿನ ಕಾಲಿಟ್ಟಿದ್ದರೂ ಸರ್ಕಾರದಿಂದ ಯಾವ ಸ್ಪಂದನೆ ಸಿಕ್ಕಿಲ್ಲ.

ಒಟ್ಟು 3,500 ಚಾಲಕರು

ಒಟ್ಟು 3,500 ಚಾಲಕರು

ಜಿವಿಕೆ ಇಎಂಆರ್‌ಐ ಸಂಸ್ಥೆ ಅಡಿ 3,500 ಚಾಲಕರು ಮತ್ತು ಶುಶ್ರೂಷಕರು ಕೆಲಸ ಮಾಡುತ್ತಿದ್ದಾರೆ. ಸಿಬ್ಬಂದಿ ಪ್ರತಿದಿನ ನಾಲ್ಕು ಗಂಟೆ ಹೆಚ್ಚುವರಿ ಕೆಲಸ ಮಾಡುತ್ತಿದ್ದಾರೆ. ಆದರೆ, ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ ನೀಡುತ್ತಿಲ್ಲ. 8 ತಿಂಗಳಿನಿಂದ ಹೆಚ್ಚುವರಿ ವೇತನ ನೀಡಿಲ್ಲ. ನೌಕರಿಗೆ ಹೆಚ್ಚುವರಿ ವೇತನ ನೀಡುವಂತೆ ಸರ್ಕಾರ ಹಣ ಬಿಡುಗಡೆ ಮಾಡಿದೆ. ಆದರೆ, ಸಂಸ್ಥೆ ಮಾತ್ರ ಹಣ ನೀಡದೆ ವಂಚಿಸುತ್ತಿದೆ ಎಂಬುದು ಪ್ರತಿಭಟನಾಕಾರರ ಪ್ರಮುಖ ಆರೋಪ.

ಷರತ್ತುಗಳು ನಮಗೇಕೆ?

ಷರತ್ತುಗಳು ನಮಗೇಕೆ?

ನೌಕರರಿಗೆ ಹೆಚ್ಚುವರಿ ವೇತನ ಬಿಡುಗಡೆ ಮಾಡಲು ಸಂಸ್ಥೆಯು 9 ಷರತ್ತುಗಳನ್ನು ವಿಧಿಸಿದೆ. ಇದು ನಮ್ಮ ಹಕ್ಕು ಕಸಿದುಕೊಂಡಂತೆ ಆಗಿದೆ. ನೌಕರರ ಮೇಲೆ ಕಟ್ಟಳೆ ಹೇರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಅಡ್ಡಿಯಾದ ಚುನಾವಣೆ

ಅಡ್ಡಿಯಾದ ಚುನಾವಣೆ

ನಿಗದಿತಯಂತೆ ಆರೋಗ್ಯ ಸಚಿವ ಯುಟಿ ಖಾದರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನೌಕರರು ಮಂಗಳವಾರ ಭೇಟಿ ಮಾಡಿ ಮಾತುಕತೆ ನಡೆಸಬೇಕಿತ್ತು. ತಾಪಂ ಮತ್ತು ಜಿಪಂ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿಲ್ಲ ಎಂದು ರಾಮನಗರ ಘಟಕದ ರಾಘವೇಂದ್ರ ತಿಳಿಸಿದ್ದಾರೆ.

ಮಾಧ್ಯಮದವರ ಮೇಲೂ ಆಕ್ರೋಶ

ಮಾಧ್ಯಮದವರ ಮೇಲೂ ಆಕ್ರೋಶ

108 ಸಿಬ್ಬಂದಿ ಮಾದ್ಯಮದವರ ಮೇಲೂ ಆಕ್ರೋಶ ಹೊರ ಹಾಕಿದ್ದಾರೆ. ಬೇರೆ ಯಾವುದೋ ಪ್ರಕರಣಗಳಿಗೆ ಇಲ್ಲದ ಪ್ರಚಾರತ ನೀಡುವ ಮಾಧ್ಯಮಗಳು ನಮ್ಮ ನ್ಯಾಯಯುತ ಪ್ರತಿಭಟನೆಗೆ ತಕ್ಕದಾದ ಚಿತ್ರಣ ಒದಗಿಸಿಕೊಟ್ಟಿಲ್ಲ ಎಂದು ತುಸು ಕಟುವಾಗಿಯೇ ಹೇಳಿದ್ದಾರೆ.

English summary
Drivers and paramedics of the 108 ambulance service continued their protest against the management of GVK Emergency Management and Research Institute. GVK Emergency Management and Research Institute (GVK EMRI), which runs the 108 ambulance service, had threatened to fire 900 of its employees if they fail to sign an agreement and follow their terms and conditions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X