ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಪಾಳಕ್ಕೆ ತೆರಳಿದ ಕರ್ನಾಟಕದ 10 ವೈದ್ಯರ ತಂಡ

|
Google Oneindia Kannada News

ಬೆಂಗಳೂರು, ಏ. 27 : ನೇಪಾಳದಲ್ಲಿ ಭೂಕಂಪದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸಹಾಯ ಮಾಡಲು ಕರ್ನಾಟಕದ 10 ವೈದ್ಯರ ತಂಡ ತೆರಳಿದೆ. ಔಷಧಿ ಮತ್ತು ಜೀವರಕ್ಷಕ ಸಾಮಗ್ರಿಗಳೊಂದಿಗೆ ಸೋಮವಾರ ಬೆಳಗ್ಗೆ ವೈದ್ಯರು ಪ್ರಯಾಣಿಸಿದ್ದಾರೆ.

ನೇಪಾಳಕ್ಕೆ ತೆರಳುತ್ತಿರುವ ವೈದ್ಯರ ತಂಡವನ್ನು ಜಯಮಹಲ್‌ನಲ್ಲಿರುವ ತಮ್ಮ ನಿವಾಸದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಸೋಮವಾರ ಬೆಳಗ್ಗೆ ಆತ್ಮೀಯವಾಗಿ ಬೀಳ್ಕೊಟ್ಟರು. ಕೆಂಪೇಗೌಡ ವಿಮಾನ ನಿಲ್ದಾಣದ ಮೂಲಕ ಈ ತಂಡ ದೆಹಲಿಗೆ ತೆರಳಲಿದ್ದು, ಅಲ್ಲಿಂದ ಕಠ್ಮಂಡುಗೆ ಪ್ರಯಾಣಿಸಲಿದೆ. [ಭೂಕಂಪ ಪೀಡಿತರ ಕಣ್ಣೀರು ಭಾರತ ಒರೆಸಲಿದೆ]

nepal

ವೈದ್ಯರನ್ನು ಬೀಳ್ಕೊಟ್ಟು ಮಾತನಾಡಿದ ಸಚಿವ ಯು.ಟಿ.ಖಾದರ್, 'ಕಠ್ಮಂಡುವಿನಲ್ಲಿ ಸ್ಥಾಪಿಸಿರುವ ವೈದ್ಯರ ಶಿಬಿರಕ್ಕೆ ಆಗಮಿಸುವ ಕನ್ನಡಿಗರಿಗೆ ಮಾತ್ರವಲ್ಲದೆ, ನೇಪಾಳೀಯರು, ವಿದೇಶಿಯರು ಅಥವಾ ಯಾರಿಗೇ ಆಗಲಿ ಅವರಿಗೆ ಅತ್ಯಂತ ಆತ್ಮೀಯತೆಯಿಂದ ಚಿಕಿತ್ಸೆ ನೀಡಿ ರಾಜ್ಯಕ್ಕೆ ಉತ್ತಮ ಹೆಸರು ತನ್ನಿ' ಎಂದು ಕರೆ ನೀಡಿದರು. [ಭೂಕಂಪ: ಗೂಗಲ್ ಗುರು ಬಳಸಿ ನಿಮ್ಮವರ ಹುಡುಕಾಟ ನಡೆಸಿ]

ನೇಪಾಳಕ್ಕೆ ತೆರಳಿದ ವೈದ್ಯರ ತಂಡ
ಔಷಧ ತಜ್ಞರಾದ ಡಾ.ಶ್ರೀನಿವಾಸ್,
ಡಾ.ಮಂಜುನಾಥ್ (ಕೆ.ಸಿ.ಜನರಲ್ ಆಸ್ಪತ್ರೆ)
ಡಾ.ರಾಜೇಶ್, ಡಾ ಕಿರಣ್ ಕುಮಾರ್ (ಜಯನಗರ ಆಸ್ಪತ್ರೆ)
ಡಾ.ಆಶಾ (ಕೋನೇನ ಅಗ್ರಹಾರ ಪ್ರಾಧಮಿಕ ಆರೋಗ್ಯ ಕೇಂದ್ರ)
ಡಾ.ಜಯಂತಿ (ಗಾಣಿಗರಪೇಟೆ ಪ್ರಾಧಮಿಕ ಆರೋಗ್ಯ ಕೇಂದ್ರ)
ಡಾ.ಹೊನ್ನೇಗೌಡ (ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆಯ ಅಧ್ಯಕ್ಷರು)
ಡಾ.ವಾಣಿಕೋರಿ (ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆಯ ಉಪಾಧ್ಯಕ್ಷರು)
ಡಾ.ನಿರ್ಮಲ (ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆಯ ಸದಸ್ಯರು)
ಡಾ.ನಾಗೇಶ್ (ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆಯ ಸದಸ್ಯರು)

ನೇಪಾಳ ರಕ್ಷಣಾ ಕಾರ್ಯಚರಣೆ ವಿಡಿಯೋ

English summary
Bengaluru : 10 member team of Karnataka doctors with life saving drugs leaves for Nepal on Monday morning to treat patients in earthquake torn Nepal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X