ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಸ್ ಮುಷ್ಕರ: ಬೆಂಗಳೂರು, ಗುಲ್ಬರ್ಗಾ ವಿವಿ ವಿದ್ಯಾರ್ಥಿಗಳ ಗಮನಕ್ಕೆ

By Mahesh
|
Google Oneindia Kannada News

ಕಲಬುರಗಿ, ಜು.26: ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ವಿವಿಧ ಅಧ್ಯಯನ ವಿಭಾಗಗಳಲ್ಲಿ ಖಾಲಿಯಿರುವ ಸ್ನಾತಕೋತ್ತರ ಪದವಿ ಸೀಟುಗಳ ಪ್ರವೇಶಾತಿ ಕೌನ್ಸಲಿಂಗ್ ಮುಂದೂಡಲಾಗಿದೆ. ಇತ್ತ ಮಂಗಳವಾರ ನಡೆದ ಬೇಕಿದ್ದ ಬೆಂಗಳೂರು ವಿವಿಯ ಎಂಬಿಎ ಪರೀಕ್ಷೆಗಳು ಮುಂದೂಡಲಾಗಿದೆ.

ಬೆಂಗಳೂರಿನಲ್ಲಿ ಪಿಜಿ ಸಿಇಟಿ 2016ರ ದಾಖಲಾತಿ ಪರಿಶೀಲನೆ ಆಗಸ್ಟ್ 1 ರಿಂದ 9ರ ವರೆಗೆ ನಡೆಯಲಿದೆ. ಎಂಬಿಎ, ಎಂಸಿಎ, ಎಂಇ, ಎಂಟೆಕ್, ಎಂ ಆರ್ಕಿಟೆಕ್ಚರ್ ಕೋರ್ಸ್ ಗಳಿಗೆ ಬೆಂಗಳೂರು ಸೇರಿದಂತೆ 15 ಕೇಂದ್ರಗಳಲ್ಲಿ ಅಭ್ಯರ್ಥಿಗಳು ಹಾಜರಾಗಬಹುದು. ಎಲ್ಲಾ ವಿವರಗಳು (http://kea.kar.nic.in) ನಲ್ಲಿ ಲಭ್ಯ. [ಗ್ಯಾಲರಿ : ಬಸ್ ಇಲ್ಲದೆ ಜನರ ಪರದಾಟ]

KSRTC Bus Strike

ಕಲಬುರಗಿಯಲ್ಲಿರುವ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಜುಲೈ 26 ರಿಂದ 30ರವರೆಗೆ ಸ್ನಾತಕೋತ್ತರ ಪದವಿ ಸೀಟುಗಳ ಪ್ರವೇಶಾತಿ ಕೌನ್ಸಲಿಂಗ್ ಪ್ರಕ್ರಿಯೆಯನ್ನು ಆಯೋಜಿಸಲಾಗಿತ್ತು. [ಮುಷ್ಕರದ ಲಾಭ: ಆಟೋ ಚಾಲಕರಿಗೆ ಹಬ್ಬವೋ ಹಬ್ಬ]

ಈಗ ಬಸ್ ಮುಷ್ಕರದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಮುಂದೂಡಿ ಜುಲೈ 28 ರಿಂದ ಆಗಸ್ಟ್ 2ರವರೆಗೆ ಜರುಗಿಸಲಾಗುತ್ತದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ದಯಾನಂದ ಅಗಸರ್ ತಿಳಿಸಿದ್ದಾರೆ. [ಶಾಲೆ ಕಾಲೇಜಿಗೆ ರಜೆ]

ಪರಿಷ್ಕತ ಕೌನ್ಸೆಲಿಂಗ್ ವೇಳಾಪಟ್ಟಿಗಾಗಿ ವಿಶ್ವವಿದ್ಯಾಲಯದ www.gug.ac.in ವೆಬ್ ಸೈಟ್ ಸಂಪರ್ಕಿಸಲು ಕೋರಲಾಗಿದೆ.

ಶಾಲಾ, ಕಾಲೇಜು ರಜೆ: ಉಡುಪಿ, ದಕ್ಷಿಣ ಕನ್ನಡ, ಚಾಮರಾಜನಗರ, ತುಮಕೂರು, ಶಿವಮೊಗ್ಗದಲ್ಲಿ ರಜೆ ಘೋಷಿಸಿಲ್ಲ. ಹಾಸನದಲ್ಲಿ ಸೋಮವಾರ ರಜೆ ಇರಲಿಲ್ಲ. ಆದರೆ, ಮಂಗಳವಾರ ರಜೆ ಘೋಷಿಸಲಾಗಿದೆ.

ಪರಿಸ್ಥಿತಿ ಅವಲೋಕಿಸಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಅಜಯ್ ಸೇಟ್ ಹೇಳಿದ್ದಾರೆ.

ದಾವಣಗೆರೆ ವಿವಿ:
ದಾವಣಗೆರೆ ವಿವಿಯ 2016-17ನೇ ಸಾಲಿನ ಓಪನ್ ಮೆರಿಟ್ ಪ್ರವೇಶಾತಿ ಕೌನ್ಸಲಿಂಗ್ ಕಾರ್ಯಕ್ರಮವನ್ನು ಜುಲೈ 27ಕ್ಕೆ ಮುಂದೂಡಲಾಗಿದೆ.

English summary
KSRTC Bus Strike : Bangalore University MBA exams and Gulbarga varsity PG counselling for various subjected postponed due ongoing KSRTC bus strike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X