ಕಲಬುರಗಿ-ಹೈದರಾಬಾದ್ ರೈಲಿನ ಸಮಯ ಬದಲಾಯಿಸಿ

Subscribe to Oneindia Kannada

ಕಲಬುರಗಿ, ಆಗಸ್ಟ್ 10 : ಕಲಬುರಗಿ-ಹೈದರಾಬಾದ್ ನಡುವಿನ ಇಂಟರ್‌ಸಿಟಿ ರೈಲಿನ ಸಮಯವನ್ನು ಬದಲಾವಣೆ ಮಾಡಬೇಕು ಎಂಬ ಬೇಡಿಕೆ ಬಂದಿದೆ. ಕಲಬುರಗಿ ಮತ್ತು ಹೈದರಾಬಾದ್ ನಡುವೆ ಇಂಟರ್ ಸಿಟಿ ರೈಲು ಸಂಚಾರವನ್ನು ಆಗಸ್ಟ್ 8ರಿಂದ ಆರಂಭಿಸಲಾಗಿದೆ.

ಪ್ರಸ್ತುರ ಕಲಬುರಗಿ-ಹೈದರಾಬಾದ್ ನಡುವಿನ ರೈಲು ಬೆಳಗ್ಗೆ 10.15ಕ್ಕೆ ಕಲಬುರಗಿಯಿಂದ ಹೊರಟು, ಮಧ್ಯಾಹ್ನ 2.15ಕ್ಕೆ ಹೈದರಾಬಾದ್ ತಲುಪುತ್ತಿದೆ. ಸಂಜೆ 4 ಗಂಟೆಗೆ ಹೈದರಾಬಾದ್‌ನಿಂದ ಹೊರಡುವ ರೈಲು ರಾತ್ರಿ 9 ಗಂಟೆಗೆ ಕಲಬುರಗಿಗೆ ಆಗಮಿಸುತ್ತಿದೆ.[ಕಲಬುರಗಿ-ಹೈದರಾಬಾದ್ ಇಂಟರ್ ಸಿಟಿ ರೈಲು ಸೇವೆ ಮತ್ತೆ ಆರಂಭ]

Demand for change in Kalaburagi-Hyderabad inter-city express train

ಕಲಬುರಗಿಯಿಂದ ರೈಲು ಹೊರಡುವ ಸಮಯವನ್ನು ಬೆಳಗಿನ 10.15ರ ಬದಲಾಗಿ 6 ಅಥವಾ 6.30 ಹೊರಡುವಂತೆ ಬದಲಾವಣೆ ಮಾಡಬೇಕು. ಹೈದರಾಬಾದ್‌ಗೆ ಬೆಳಗ್ಗೆ 10.30ರೊಳಗೆ ತಲುಪುವಂತೆ ಮಾಡಬೇಕು ಎಂಬುದು ಬೇಡಿಕೆಯಾಗಿದೆ.[ರೈಲ್ವೆ ಶೌಚಾಲಯ ವಿನ್ಯಾಸಕ್ಕೆ ಪ್ರಶಸ್ತಿ ಪಡೆದ ಮಣಿಪಾಲ ವಿದ್ಯಾರ್ಥಿ]

ಈ ರೈಲು ಶಾಹಾಬಾದ್‌‌‌‌‌‌‌‌, ವಾಡಿ, ತಾಂಡೂರ, ವಿಕಾರಾಬಾದ್‌‌‌‌‌, ಲಿಂಗಪಲ್ಲಿ ರೈಲು ನಿಲ್ದಾಣಗಳಲ್ಲಿ ಈ ರೈಲು ನಿಲುಗಡೆಗೊಳ್ಳಲಿದೆ. ರೈಲು ಜಿಲ್ಲೆಯ ತಾಲೂಕು ಕೇಂದ್ರಗಳಾದ ಚಿತ್ತಾಪುರ ಮತ್ತು ಸೇಡಂಗಳಲ್ಲಿಯೂ ನಿಲುಗಡೆ ಮಾಡುವಂತೆಯೂ ಬೇಡಿಕೆ ಮುಂದಿಡಲಾಗಿದೆ.[ಕೋಟಿ ಲೂಟಿ ನಡೆದಾಗ ಭದ್ರತಾ ಸಿಬ್ಬಂದಿಯೇ ಇರಲಿಲ್ಲ!]

2016ರ ಫೆಬ್ರವರಿಯಲ್ಲಿ ಆರಂಭಿಸಲಾಗಿದ್ದ ಸೇವೆಯನ್ನು ಪ್ರಯಾಣಿಕರ ಕೊರತೆ ಕಾರಣದಿಂದಾಗಿ ಮಾರ್ಚ್‌ನಲ್ಲಿ ಸ್ಥಗಿತಗೊಳಿಸಲಾಗಿತ್ತು. ಆಗಸ್ಟ್‌ 8ರಿಂದ ರೈಲು ಸೇವೆ ಪುನಃ ಆರಂಭವಾಗಿದ್ದು, ರೈಲು ಸಂಖ್ಯೆ 11307, 11308 ಕಲಬುರಗಿ ಹೈದರಾಬಾದ್ ನಡುವೆ ಸಂಚಾರ ನಡೆಸುತ್ತಿವೆ.

English summary
People demanded to change of the Kalaburagi-Hyderabad inter-city express train timings. At present train will depart from Kalaburagi at 10.15 a.m. and reach Hyderabad at 2.50 p.m. and from Hyderabad it would start from 4 p.m. and reach Kalaburagi at 9 p.m.
Please Wait while comments are loading...