ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈಗಿನ ಪರಿಸ್ಥಿತಿಯಲ್ಲಿ ನೀರು ಬಿಡೋಕೆ ಆಗಲ್ಲ: ಸಿದ್ದರಾಮಯ್ಯ

By Mahesh
|
Google Oneindia Kannada News

ಕಲಬುರಗಿ, ಸೆ.27: ಕರ್ನಾಟಕದಲ್ಲಿ ಈಗ ಇರುವ ಪರಿಸ್ಥಿತಿಯಲ್ಲಿ ನೀರು ಬಿಡಲ್ಲ ಸಾಧ್ಯವೇ ಇಲ್ಲ. ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಇನ್ನೂ ಓದಿಲ್ಲ. ತೀರ್ಪು ಪೂರ್ತಿಯಾಗಿ ಪರಿಶೀಲಿಸಿದ ನಂತರ ಪ್ರತಿಕ್ರಿಯಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಕ್ಷಣದ ಪ್ರತಿಕ್ರಿಯೆ ನೀಡಿದ್ದಾರೆ.

ರಾಷ್ಟ್ರೀಯ ಜಲ ನೀತಿ ಪ್ರಕಾರ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು. ಕರ್ನಾಟಕದಲ್ಲಿ ಕುಡಿಯಲು ಕೂಡಾ ನೀರು ಸಾಲುತ್ತಿಲ್ಲ. ಮೂರು ದಿನಗಳ ಕಾಲ 18 ಕ್ಯೂಸೆಕ್ಸ್ ಹರಿಸುವುದು ಹೇಗೆ? ನೀರು ಇದ್ದಿದ್ದರೆ ಆದೇಶವನ್ನು ವಿಳಂಬ ಮಾಡುವ ಅಗತ್ಯವಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Can't release water now : CM Siddaramaiah on SC Verdict

ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ವಿಶೇಷ ವಿಮಾನದ ಮೂಲಕ ಮಂಗಳವಾರ ಮಧ್ಯಾಹ್ನ 1.25 ಗಂಟೆಗೆ ಬೀದರ್ ಏರ್ ಬೇಸ್ ಗೆ ಆಗಮಿಸಿ ನಂತರ ಹೆಲಿಕಾಪ್ಟರ್ ಮೂಲಕ ಬೀದರ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ವೈಮಾನಿಕ ಸಮೀಕ
್ಷೆ ನಡೆಸಿದರು.

ಭಾಲ್ಕಿ ತಾಲೂಕಿನ ಸಾಯಿಗಾಂವ ಗ್ರಾಮದ ಹೆಲಿಪ್ಯಾಡಿಗೆ ಬಂದಿಳಿದ ಸಿದ್ದರಾಮಯ್ಯ ಅವರನ್ನು ಸುಪ್ರೀಂಕೋರ್ಟ್ ನಿರ್ಣಯದ ಬಗ್ಗೆ ಪ್ರಶ್ನಿಸಿದಾಗ, ನೀರು ಬಿಡಲು ಸಾಧ್ಯವಿಲ್ಲ ಎಂದರು. ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಕಾನೂನು ತಜ್ಞರ ಜತೆ ಚರ್ಚಿಸಬೇಕಿದೆ. ಶಾಸಕಾಂಗ ಸಭೆಯಲ್ಲಿ ತೆಗೆದುಕೊಂಡ ನಿರ್ಣಯ, ಕರ್ನಾಟಕ ಸರ್ಕಾರದ ನಿರ್ಣಯ ಮಾತ್ರವಲ್ಲ. ಎಲ್ಲಾ ಪಕ್ಷಗಳ ಒಕೊರಲ ದನಿಯಾಗಿದೆ. ಇದು ಸುಪ್ರೀಂಕೋರ್ಟಿನ ಆದೇಶದ ಉಲ್ಲಂಘನೆಯಲ್ಲ ಎಂದರು.

English summary
Can't release water now. Will give a reaction after I get more details on the order, Chief Minister, Siddaramaiah
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X