ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಬೈ: ಕೇರಳದ ಎನ್ನಾರೈ ನಂ.1, ಡಾ. ಶೆಟ್ಟಿ ನಂ.4

By Mahesh
|
Google Oneindia Kannada News

ದುಬೈ, ಅ.7: ಕೇರಳ ಮೂಲದ ಅನಿವಾಸಿ ಭಾರತೀಯ ಉದ್ಯಮಿ ಯೂಸುಫ್ ಅಲಿ ಎಂಎ ಅವರು ಸತತ ನಾಲ್ಕನೇ ಬಾರಿಗೆ ಪ್ರಭಾವಿ ಭಾರತೀಯ ಉದ್ಯಮಿ ಎನಿಸಿದ್ದಾರೆ. ಯುಎಇನಲ್ಲಿ ಅತಿದೊಡ್ಡ ರೀಟೈಲ್ ಜಾಲವನ್ನು ಹೊಂದಿರುವ ಯೂಸುಫ್ ಅವರು ವಾರ್ಷಿಕ ಸುಮಾರು 4.5 ಬಿಲಿಯನ್ ಯುಎಸ್ ಡಾಲರ್ ಆದಾಯ ಹೊಂದಿದ್ದಾರೆ.

ಅರೇಬಿಯನ್ ಬಿಸಿನೆಸ್ ಮ್ಯಾಗಜೀನ್ 100 ಪ್ರಭಾವಿ ಉದ್ಯಮಿಗಳ ಪಟ್ಟಿ ಬಿಡುಗಡೆ ಮಾಡೀದ್ದು ಇದರಲ್ಲಿ ಕೇರಳ ಮೂಲದ ಯುಸುಫ್ ಅಗ್ರಸ್ಥಾನ ಗಳಿಸಿದ್ದಾರೆ. ಕರ್ನಾಟಕ ಮೂಲದ ಡಾ. ಬಿಆರ್ ಶೆಟ್ಟಿ ಅವರು ನಾಲ್ಕನೇ ಸ್ಥಾನದಲ್ಲಿದ್ದಾರೆ.

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ವಿವಿಧ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಟಾಪ್ ನೂರು ಮಂದಿ ಭಾರತೀಯ ಉದ್ಯಮಿಗಳ ಪಟ್ಟಿಯಲ್ಲೂ ಲುಲು ಸಮೂಹದ ಎಂ.ಎ. ಯೂಸುಫ್ ಅಲಿ ಅವರು ಈ ವರ್ಷದ ಪ್ರಥಮ ಸ್ಥಾನ ಗಳಿಸಿದ್ದರು. ಲ್ಯಾಂಡ್ ಮಾರ್ಕ್ ಸಮೂಹದ ಅಧ್ಯಕ್ಷ ಮಿಕಿ ಜಗತ್ಯಾನಿ ಹಾಗೂ ಎನ್ ಎಂಸಿ ಸಮೂಹದ ಬಿ.ಆರ್.ಶೆಟ್ಟಿ ಪಡೆದುಕೊಂಡಿದ್ದರು.

Dr BR Shetty at fifth place

ಈಗ ಬಿಸಿನೆಸ್ ಮ್ಯಾಗಜೀನ್ ಪಟ್ಟಿಯಲ್ಲಿ 2ನೇ ಸ್ಥಾನವನ್ನು ಫಿರೋಜ್ ಅಲ್ಲಾನಾ, 3ನೇ ಸ್ಥಾನವನ್ನು ವಿ. ಶಂಕರ್, 5ನೇ ಸ್ಥಾನವನ್ನು ರಘು ಕಟಾರಿಯಾ ಗಳಿಸಿದ್ದಾರೆ. ಅ.28ರಂದು ಉದ್ಯಮಿಗಳಿಗೆ ದುಬೈನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಾಗುತ್ತದೆ. ಖ್ಯಾತ ಕ್ರಿಕೆಟಿಗ ಸುನಿಲ್ ಗಾವಸ್ಕರ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಡಾ ಬಿ.ಆರ್ ಶೆಟ್ಟಿ ಸಾಧನೆ: ದುಬೈನಲ್ಲಿ ತಲೆ ಎತ್ತಿರುವ ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದ 100ನೇ ಮಹಡಿಯ ಮಾಲೀಕರಾಗಿದ್ದಾರೆ. ಜೊತೆಗೆ 141 ನೇ ಮಹಡಿಯಯಲ್ಲಿ ಸ್ವಂತ ಕಚೇರಿ ತೆರೆದ ಸಾಧನೆ ಮಾಡಿದ್ದಾರೆ. ಇದು ಕೇವಲ ಕನ್ನಡಿಗನೊಬ್ಬನ ಸಾಧನೆಯಲ್ಲ. ಕರ್ನಾಟಕ ಹೆಮ್ಮೆ ಪಡುವಂತ ಸಾಧನೆಯೂ ಹೌದು.

ಅಬುದಾಬಿಯಲ್ಲಿ ನೆಲೆಸಿರುವ ಶೆಟ್ಟಿ ನ್ಯೂ ಮೆಡಿಕಲ್ ಸೆಂಟರ್ ಸಮೂಹ ಅಸ್ಪತ್ರೆಗಳ ಸಂಸ್ಥಾಪಕರು. ಎಎಂಸಿ ಸಮೂಹದ ಮೂಲಕ ಪ್ರಸಿದ್ದಿ ಪಡೆದವರು. ಬಿ.ಆರ್ ಶೆಟ್ಟಿ ಮೂಲತಃ ಉಡುಪಿ ಜಿಲ್ಲೆ ಕಾಪು ಸಮೀಪದ ಬಾವಗತ್ ನವರು.

1972 ರಲ್ಲಿ ಕ್ಲಿನಿಕಲ್ ಫಾರ್ಮಸಿಯಲ್ಲಿ ಪದವಿ ಪಡೆದ ನಂತರ ಉದ್ಯೋಗ ಅರಸಿ ಅಬುದಾಬಿಗೆ ತೆರಳಿ ನ್ಯೂ ಮೆಡಿಕಲ್ ಸೆಂಟರ್ ಎಂಬ ಕ್ಲಿನಿಕ್ ಆರಂಭಿಸಿದ ಹಂತಹಂತವಾಗಿ ಶೆಟ್ಟಿ ಬೆಳೆಯುತ್ತಾ ಹೋದರು.

ಇದೀಗ ಶೆಟ್ಟಿ ದುಬೈ ಸರಕಾರದ ವಿತ್ತ ಇಲಾಖೆಯ ಸಲಹಾ ಮಂಡಳಿಯ ಸದಸ್ಯ ಕೂಡ. 2009ರ ಪದ್ಮಶ್ರೀ, ಕರ್ನಾಟಕ ರಾಜ್ಯೋತ್ಸವ, ಮಂಗಳೂರು ವಿವಿ ಡಾಕ್ಟರೇಟ್ ಪುರಸ್ಕಾರ ಸೇರಿದಂತೆ ನೂರಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಪತ್ನಿ ಚಂದ್ರಕುಮಾರಿ, ಒಬ್ಬ ಮಗ ಹಾಗೂ ಮೂವರು ಹೆಣ್ಣುಮಕ್ಕಳೊಂದಿಗೆ ಶೆಟ್ಟಿ ಸಂತೃಪ್ತಿ ಜೀವನ ನಡೆಸುತ್ತಿದ್ದಾರೆ.

English summary
NRI businessman Yusuffali MA, who runs the largest retail chain in the UAE, has topped the list of the most powerful Indians in the Gulf region for the 4th time in a row with an annual turnover of USD 4.5 billion. Dr B R Shetty is placed at forth spot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X