ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ 1 ಬಿ ಉಳ್ಳ ದಂಪತಿಗೆ ಮೇ. 26ರಿಂದ ವರ್ಕ್ ಪರ್ಮಿಟ್

By Mahesh
|
Google Oneindia Kannada News

ವಾಷಿಂಗ್ಟನ್, ಫೆ.26: ಅಮೆರಿಕದಲ್ಲಿ ಎಚ್-1ಬಿ ವೀಸಾ ಹೊಂದಿರುವ ದಂಪತಿಗೆ ಶುಭ ಸುದ್ದಿ ಸಿಕ್ಕಿದೆ. ಮೇ 26ರಿಂದ ಅನ್ವಯವಾಗುವಂತೆ ದಂಪತಿಗೆ ಉದ್ಯೋಗ ಪರವಾನಿಗೆಗಳನ್ನು ನೀಡಲಾಗುವುದು ಎಂದು ಅಮೆರಿಕ ಸರ್ಕಾರ ಪ್ರಕಟಿಸಿದೆ.

ಅಮೆರಿಕಕ್ಕೆ ಬಂದು ನೆಲೆಸಿ ಪತಿ ಅಥವಾ ಪತ್ನಿಯ ಅವಲಂಬಿತ ವೀಸಾದಲ್ಲಿದ್ದು, ಉದ್ಯೋಗ ನಿರ್ವಹಿಸಲು ಸಾಧ್ಯವಾಗದ ಸಾವಿರಾರು ಪ್ರತಿಭಾನ್ವಿತ ಭಾರತೀಯರಿಗೆ ಈ ಹೊಸ ನಿಯಮದಿಂದ ಭಾರೀ ಪ್ರಯೋಜನವಾಗಲಿದೆ.

ಎಚ್-1ಬಿ ವೀಸಾ ಹೊಂದಿರುವವರಲ್ಲಿ ಹೆಚ್ಚಿನವರು ಪತಿ-ಪತ್ನಿಯರ ಸಂಖ್ಯೆ ಹೆಚ್ಚಾಗಿದೆ. ಹಾಲಿ ಚಾಲ್ತಿಯಲ್ಲಿರುವ ಕಾನೂನಿನ ಪ್ರಕಾರ ಸಂಗಾತಿಗಳಿಬ್ಬರೂ ಉದ್ಯೋಗ ನಿರ್ವಹಿಸಲು ಅರ್ಹರೆಂದು ಪರಿಗಣಿಸಲಾಗುತ್ತಿಲ್ಲ.

Work permits for spouses of H-1B visa holders

ಅಮೆರಿಕದ ಪೌರತ್ವ ಹಾಗೂ ವಲಸೆ ಸೇವೆಗಳ ಇಲಾಖೆ(ಯುಎಸ್‌ಸಿಐಎಸ್)ಯು ಎಚ್-1ಬಿ ವೀಸಾ ಹೊಂದಿರುವ ಸಂಗಾತಿಗಳಿಂದ ಉದ್ಯೋಗ ಪರವಾನಿಗೆಗಳಿಗಾಗಿ ಮೇ 26ರಿಂದ ಅರ್ಜಿಗಳನ್ನು ಸ್ವೀಕರಿಸಲಿದೆ. ಇದರಿಂದ ಆರ್ಥಿಕ ಭದ್ರರೆ ಹಾಗೂ ಕೌಟುಂಬಿಕ ಜೀವನ ಮೌಲ್ಯ ಸುಧಾರಣೆಗೊಳ್ಳಲಿದೆ ಎಂದು ಡಿಪಾರ್ಟ್ಮೆಂಟ್ ಆಫ್ ಹೋಮ್ ಲ್ಯಾಂಡ್ ಸೆಕ್ಯುರಿಟಿ ಹೇಳಿದೆ.

ಒಂದು ಬಾರಿ ಯುಎಸ್‌ಸಿಐಎಸ್ 'ಫಾರ್ಮ್1-765'ಗೆ ಅಂಗೀಕಾರ ನೀಡಿದಲ್ಲಿ ಮತ್ತು ಎಚ್-4 ಅವಲಂಬಿತ ಸಂಗಾತಿಯು ಉದ್ಯೋಗ ದೃಢೀಕರಣ ಕಾರ್ಡ್ ಪಡೆದಲ್ಲಿ, ಆಕೆ ಅಥವಾ ಆತನು ಅಮೆರಿಕದಲ್ಲಿ ಉದ್ಯೋಗಕ್ಕೆ ಸೇರಿಕೊಳ್ಳಬಹುದಾಗಿದೆ.

ಯುಎಸ್‌ಸಿಐಎಸ್‌ನ ಅಂದಾಜಿನ ಪ್ರಕಾರ, ಹೊಸ ನಿಯಮದಡಿ ಉದ್ಯೋಗ ದೃಢೀಕರಣಕ್ಕಾಗಿ ಅರ್ಜಿ ಸಲ್ಲಿಸಲು ಅರ್ಹರಾಗಿರುವ ವ್ಯಕ್ತಿಗಳ ಸಂಖ್ಯೆಯು ಮೊದಲ ವರ್ಷದಲ್ಲಿ 1,79,600ರಷ್ಟಿದ್ದು, ಮುಂದೆ ವಾರ್ಷಿಕ ಸರಾಸರಿ 55 ಸಾವಿರದಷ್ಟಿರಬಹುದು ಎಂದು ತಿಳಿದು ಬಂದಿದೆ. ಭಾರತೀಯ ಅಮೆರಿಕನ್ನರು ಸರಕಾರದ ನೂತನ ಕ್ರಮವನ್ನು ಸ್ವಾಗತಿಸಿದ್ದಾರೆ.

ಎಚ್-1ಬಿ ವೀಸಾ ವಿಚಾರಗಳಿಗೆ ಸಂಬಂಧಿಸಿದಂತೆ ತನ್ನ ಆಡಳಿತವು ಭಾರತದೊಂದಿಗೆ ನಿರಂತರ ಸಂಪರ್ಕದಲ್ಲಿರಲಿದೆ ಎಂದು ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಪ್ರಧಾನಿ ಮೋದಿಯವರಿಗೆ ತಿಳಿಸಿದ್ದರು.

ಅಮೆರಿಕದಲ್ಲಿ ಉದ್ಯೋಗಾಧಾರಿತ ಖಾಯಂ ವಾಸ್ತವ್ಯ ಬಯಸುವ ಎಚ್-1ಬಿ ವಲಸೇತರರ ಎಚ್-4 ಅವಲಂಬಿತ ಸಂಗಾತಿಗಳಿಗೆ ಉದ್ಯೋಗ ದೃಢೀಕರಣ ಅರ್ಹತೆಯ ನಿಯಮಗಳನ್ನು ಸಡಿಲಿಸಲಾಗುವುದು ಎಂದು ಯುಎಸ್‌ಸಿಐಎಸ್ ಹೇಳಿದೆ.

ವಿದೇಶಾಂಗ ಇಲಾಖೆಯ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ 2013ರಲ್ಲಿ ಎಚ್-4 ಸ್ವಾನಮಾನ ಪಡೆದಿರುವವರಲ್ಲಿ ಶೇಕಡಾ 76ರಷ್ಟು ಮಂದಿ ದಕ್ಷಿಣ ಏಶ್ಯ ರಾಷ್ಟ್ರಗಳಿಗೆ ಸೇರಿದವರಾಗಿದ್ದಾರೆ ಎಂದು ಯುಎಸ್‌ಸಿಐಎಸ್ ಮುಖ್ಯಸ್ಥ ಲಿಯಾನ್ ರೋಡ್ರಿಗೇಜ್ ಹೇಳಿದ್ದಾರೆ.

English summary
The U.S. government has confirmed that effective May 26, 2015, some holders of the H-4 visa, who are spouses of high-skilled workers on the H-1B visa, will be eligible for work authorisation, a potential boon for approximately 179,600 individuals in the first year alone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X