ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಲ್ಫೀ ತೆಗೆಯಲು ಹೋಗಿ 60 ಅಡಿ ಎತ್ತರದಿಂದ ಬಿದ್ರೂ ಬದುಕಿದಳು!

|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 7: ಯುವ ಜನಾಂಗದ ಸೆಲ್ಫೀ ಹುಚ್ಚಿಗೆ ಈಗ ಮತ್ತೊಂದು ಬಲಿ ಬಿದ್ದಿದೆ. ಅಮೆರಿಕದಲ್ಲಿ ಅತಿ ಎತ್ತರದ ಸೇತುವೆಗಳಲ್ಲೊಂದಾದ ಫಾರೆಸ್ಟ್ ಸೇತುವೆಯ ಮೇಲಕ್ಕೆ ಹೋಗಿದ್ದ ಸೆಲ್ಫೀ ಕ್ಲಿಕ್ಕಿಸಲು ಹೋಗಿದ್ದ ಯುವತಿಯೊಬ್ಬಳು ಅಲ್ಲಿಂದ ಕೆಳಕ್ಕೆ ಬಿದ್ದರೂ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾಳೆ.

ಮಹಿಳೆಯ ಹೆಸರನ್ನು ಪೊಲೀಸರು ಬಹಿರಂಗೊಳಿಸಿಲ್ಲ. ಆದರೆ, ಇವರು ಕ್ಯಾಲಿಫೋರ್ನಿಯಾದ ಸ್ಯಾಂಕ್ರಾಮೆಂಟೋ ಪ್ರಾಂತ್ಯದವರು ಎಂದು ಅವರು ತಿಳಿಸಿದ್ದಾರೆ.

Woman Falls Off Tallest California Bridge While Taking Selfie

ಮೇಲಿನಿಂದ ಬಿದ್ದು ಆಕೆ ಬದುಕುಳಿದಿದ್ದಾಳಾದರೂ, ಆಕೆಯು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಳೆ. ದೇಹದ ಅನೇಕ ಮೂಳೆಗಳು ಮುರಿದಿವೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಆರಂಭಿಸಲಾಗಿದೆ. ಆಕೆಯ ಪರಿಸ್ಥಿತಿ ಗಂಭೀರವಾಗಿದ್ದರೂ ಬದುಕುಳಿಯುವ ಅವಕಾಶಗಳಿವೆ ಎಂದು ವೈದ್ಯರು ತಿಳಿಸಿರುವುದಾಗಿ ಮೂಲಗಳು ಹೇಳಿವೆ.

ತಮ್ಮ ಗೆಳೆಯ ಪಾಲ್ ಗೊಂಚುರಾಕ್ ಎಂಬುವನ ಜತೆಗೆ ಆಕೆ ಬಂದಿದ್ದಳು. ಈ ಸೇತುವೆಯ ಮಧ್ಯಭಾಗದ ಎತ್ತರ ಸುಮಾರು 177 ಅಡಿಗಳಷ್ಟಿದೆ. ಸೇತುವೆಯನ್ನು ಹತ್ತುತ್ತಿರುವಾಗ ಸುಮಾರು 60 ಅಡಿಯ ಎತ್ತರದಲ್ಲಿದ್ದಾಗಲೇ ಆಕೆ ಸೇತುವೆಯ ರಕ್ಷಣಾ ಗೋಡೆಯ ಮೇಲೆ ಹತ್ತಿ ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಮುಂದಾದಾಗ ಈ ಘಟನೆ ನಡೆದಿದೆ ಎಂದು ಆಕೆಯ ಗೆಳೆಯ ಪೊಲೀಸರಿಗೆ ತಿಳಿಸಿದ್ದಾನೆ.

English summary
A woman fell 60 feet from one of the US' tallest bridges while taking a selfie but miraculously survived. The Sacramento-area woman was expected to survive after she fell 60 feet off the restricted area of the Foresthill Bridge near Auburn, California, while trying to take a selfie.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X