ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆಯಾದವರ ದೇಹದ ತೂಕ ಏಕೆ ಹೆಚ್ಚಾಗುತ್ತದೆ?

|
Google Oneindia Kannada News

ಲಂಡನ್, ಜು, 06: 'ನೀವು ನಿಮ್ಮ ತೂಕವನ್ನು ಹೆಚ್ಚಿಸಿಕೊಳ್ಳಬೇಕೆ ಹಾಗಾದರೆ ಈ ವಿಳಾಸಕ್ಕೆ ನೋಂದಣಿ ಮಾಡಿ ಔಷಧಿಯನ್ನು ಕೂಡಲೇ ಬುಕ್ ಮಾಡಿ' ಈ ಬಗೆಯ ನೂರಾರು ಜಾಹೀರಾತುಗಳನ್ನು ಪ್ರತಿದಿನ ಟಿವಿ, ಪತ್ರಿಕೆ, ಅಂತರ್ಜಾಲ ತಾಣ ಅಷ್ಟೇ ಏಕೆ ಸಾಮಾಜಿಕ ಜಾಲತಾಣಗಳಲ್ಲೂ ನೋಡುತ್ತಲೇ ಇರುತ್ತೇವೆ. ಕೆಲವರು ಬುಕ್ ಮಾಡಿ ಹಣ ಕಳೆದಿಕೊಂಡಿದ್ದಾರೆ ವಿನಃ ತೂಕ ಹೆಚ್ಚಿಗೆ ಮಾಡಿಕೊಂಡಿಲ್ಲ.

ಹಾಗಾದರೆ ತೂಕ ಹೆಚ್ಚಳ ಮಾಡಿಕೊಳ್ಳಲು ಏನು ಮಾಡಬೇಕು? ಉತ್ತರ ಬಹಳ ಸರಳ, ಮದುವೆಯಾಗಬೇಕು(ಈಗಾಗಲೇ ಮದುವೆಯಾಗಿ ತೂಕ ಕಡಿಮೆ ಇದ್ದವವರಿಗೆ ಅನ್ವಯಿಸಲ್ಲ!). ಮದುವೆಯಾದರೆ ದಪ್ಪವಾಗುತ್ತಾರೆಯೇ? ಹಾಗಾದರೆ ಇದಕ್ಕೆ ನೈಜ ಕಾರಣವೇನು? ನಿಮ್ಮ ತಲೆಯಲ್ಲಿ ನೂರಾರು ವಿಚಾರಗಳು ಹರಿದಾಡುತ್ತಿರಬಹುದು. ಆದರೆ ಅಸಲಿ ಕಾರಣ ಬೇರೆಯೇ ಇದೆ.[ಜೀವನದಲ್ಲಿ ನಾವು ಎಷ್ಟು ಸೈಕಲ್ ಹೊಡೆದರೂ ಸಾಲದು!]

marriage

ಮದುವೆಯಾದವರು ಏಕೆ ದಪ್ಪವಾತ್ತಾರೆ ಎಂಬ ಸಂಗತಿಯನ್ನು ಇಟ್ಟುಕೊಂಡು ಸಮೀಕ್ಷೆ ನಡೆಸಿದ ಬಾಸೆಲ್ ನ ವಿಶ್ವವಿದ್ಯಾಲಯ ಅನೇಕ ವಿಚಾರಗಳನ್ನು ಪಟ್ಟಿಮಾಡಿದೆ.

ಮದುವೆ ಆರೋಗ್ಯದ ಮತ್ತು ಮನಸ್ಸಿನ ಮೇಲೆ ಸಕಾರಾತ್ಮಕ ಪ್ರಭಾವ ಉಂಟುಮಾಡುತ್ತದೆ. ಜೀವನ ಕ್ರಮ ಮತ್ತು ಆಹಾರ ಪದ್ಧತಿಯಲ್ಲಿ ಮಹತ್ತರ ಬದಲಾವಣೆ ಆಗುವುದೇ ತೂಕ ಹೆಚ್ಚಳಕ್ಕೆ ಕಾರಣ ಎಂದು ಹೇಳಿದೆ. ತೂಕ ಹೆಚ್ಚಬಹುದೇ ವಿನಃ ಆರೋಗ್ಯದಲ್ಲಿ ವೃದ್ಧಿಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಲು ವಿವಿ ಮರೆತಿಲ್ಲ. [ಲೈಂಗಿಕ ತೃಪ್ತಿ, ಜಾಗತಿಕ ಸಮೀಕ್ಷೆಯ ಫಲಿತಾಂಶ ಪ್ರಕಟ]

ಇದರ ಜತೆಗೆ ಮತ್ತಷ್ಟು ವಿವರಗಳನ್ನು ಕಲೆಹಾಕಿದೆ
* ಮದುವೆಯಾದ ನಂತರ ಹೆಚ್ಚಿನ ಪೌಷ್ಟಿಕಾಂಶಯುಕ್ತ ಆಹಾರ ದೇಹ ಸೇರುತ್ತದೆ
* ಮದುವೆಗೆ ಮುಂಚೆ ಇದ್ದ ಕ್ರೀಡಾ ಚಟುವಟಿಕೆ ಮದುವೆ ನಂತರ ಮರೆಯಾಗುತ್ತದೆ.
* ದೇಹದ ದೃವ್ಯರಾಶಿಯಲ್ಲಿ ಅನಿಯಮಿತ ಏರಿಕೆ ಏರಿಕೆ ಕಂಡುಬರುತ್ತದೆ.
* ಏಕಾಏಕಿ ದೇಹದ ತೂಕ ಹೆಚ್ಚಳ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹೃದಯ ಸಂಬಂಧಿ ಸಮಸ್ಯೆಗೂ ಕಾರಣವಾಗಬಹುದು.

ಸಮೀಕ್ಷೆ ನಡೆದಿದ್ದು ಹೇಗೆ?
ಆಸ್ಟ್ರೀಯಾ, ಫ್ರಾನ್ಸ್, ಜರ್ಮನಿ, ಇಟಲಿ, ನೆದರ್ ಲ್ಯಾಂಡ್, ಪೋಲೆಂಡ್, ರಷ್ಯಾ, ಮತ್ತು ಇಂಗ್ಲೆಂಡ್ ನ 10,226 ಜನರನ್ನು ಸಮೀಕ್ಷೆಗೆ ಒಳಪಡಿಸಿ ಮಾಹಿತಿ ಕಲೆ ಹಾಕಲಾಗಿತ್ತು.

ಇದರ ಫಲಿತಾಂಶವೇ ಮದುವೆಯಾದವರ ದೇಹದ ತೂಕ ಹೆಚ್ಚಳವಾದ್ದನ್ನು ಪ್ರತಿನಿಧಿಸುತ್ತಿತ್ತು. ಮದುವೆಯಾದವರು ಸಾಂಪ್ರದಾಯಿಕ ಆಹಾರ ಪದ್ಧತಿಗೂ ಒತ್ತು ನೀಡುತ್ತಿದ್ದಾರೆ ಎಂಬ ಸಂಗತಿಯೂ ಬಹಿರಂಗಗೊಂಡಿತ್ತು.

ಆರೋಗ್ಯ ಮತ್ತು ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದ ಇಂಗ್ಲೆಂಡಿನ ಪತ್ತಿಕೆಯೊಂದು ಇಂಥ ವರದಿ ಪ್ರಕಟ ಮಾಡಿದೆ. ನೀವು ತೂಕ ಹೆಚ್ಚಳ ಮಾಡಿಕೊಳ್ಳಬೇಕು ಎಂದಿದ್ದೀರಾ, ಹಾಗಾದರೆ ಮದುವೆಗೆ ಸಿದ್ಧತೆ ಮಾಡಿಕೊಳ್ಳಿ....(ಸ್ಥೂಲಕಾಯರಾಗಿ ರೋಗಕ್ಕೆ ಬಲಿಯಾದರೆ ನಾವು ಜವಾಬ್ದಾರರಲ್ಲ*)

English summary
If marriage has a positive influence on health and life expectancy, as generally assumed, then why do couples gain weight after tying the knot? Blame it on their lifestyle. According to a study spanning across nine European countries, researchers have found that married couples on average eat better than singles, but weigh significantly more and do less sport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X