ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದೊಳಗೆ ಭಯೋತ್ಪಾದನೆ, ಭಯೋತ್ಪಾದಕರು ತೂರುತ್ತಿರುವುದು ಎಲ್ಲಿಂದ?

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜನವರಿ 31: ಇರಾನ್, ಇರಾಕ್, ಸಿರಿಯಾ, ಸೂಡಾನ್, ಲಿಬಿಯಾ, ಯೆಮೆನ್ ಮತ್ತು ಸೊಮಾಲಿಯಾ- ಈ ಏಳು ರಾಷ್ಟ್ರಗಳ ಪ್ರಜೆಗಳಿಗೆ ಅಮೆರಿಕಾ ಪ್ರವೇಶಕ್ಕೆ ನಿರ್ಬಂಧ ಹೇರಿ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಜನವರಿ 27ರಂದೇ ಆದೇಶ ಹೊರಡಿಸಿದ್ದಾರೆ. ಆದರೆ ಈ ರೀತಿ ನಿರ್ಬಂಧಕ್ಕೆ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ.

ಆಸಕ್ತಿಕರ ಸಂಗತಿ ಏನೆಂದರೆ, 9/11ರ ದಾಳಿ ನಂತರ ಯಾವುದೇ ದಾಳಿಕೋರರು ಈ ದೇಶಗಳಿಂದ ಬಂದವರಲ್ಲ. ಅಂಕಿಗಳೇ ಹೊರಹಾಕಿರುವ ಮಾಹಿತಿ ಪ್ರಕಾರವೇ ನೋಡೋದಾದರೆ, 9/11ರ ದಾಳಿ ಮಾಡಿದವರು ಕೂಡ ಸೌದಿ ಅರೇಬಿಯಾ, ಈಜಿಪ್ಟ್ ಅಥವಾ ಪಾಕಿಸ್ತಾನಕ್ಕೆ ಸೇರಿದವರು.[ಟ್ರಂಪ್ ಐತಿಹಾಸಿಕ ನಿರ್ಧಾರ: 7 ಮುಸ್ಲಿಂ ರಾಷ್ಟ್ರಗಳಿಗೆ ವೀಸಾ ರದ್ದು]

Where are America's terrorists coming from?

ಅಮೆರಿಕದಲ್ಲಿ ಹದಿಮೂರು ಪ್ರಮುಖ ದಾಳಿಗಳಾಗಿವೆ. 9/11ರ ದಾಳಿ ಮಾಡಿದವರು 19 ಮಂದಿ. ಅದರಲ್ಲಿ ಹದಿನೈದು ಜನ ಸೌದಿ ಅರೇಬಿಯಾದವರು. ಇಬ್ಬರು ಯುಎಇ, ತಲಾ ಒಬ್ಬರು ಈಜಿಪ್ಟ್ ಮತ್ತು ಲೆಬನಾನ್ ನವರು. ಇನ್ನು 9/11ರ ದಾಳಿ ನಂತರ ಯುಎಸ್ ನಲ್ಲಿ ನದೆದ ದಾಳಿಗಳಲ್ಲಿ ವಿವಿಧ ದೇಶದವರು ಭಾಗವಹಿಸಿದ್ದಾರೆ.

ಮೂವರು ಆಫ್ರಿಕನ್-ಅಮೆರಿಕನ್ನರು, ಮೂವರ ಕುಟುಂಬಗಳ ಮೂಲ ಪಾಕಿಸ್ತಾನದ್ದು. ಒಂದು ಪ್ಯಾಲೇಸ್ತೀನ್, ಎರಡು ರಷ್ಯಾ, ಒಂದು ಈಜಿಪ್ಟ್ ಮತ್ತು ತಲಾ ಒಬ್ಬೊಬ್ಬರು ಆಫ್ಘಾನಿಸ್ತಾನ, ಕುವೈತ್ ಗೆ ಸೇರಿದವರು. ಆದರೆ ಟ್ರಂಪ್ ಗುರಿ ಮಾಡುತ್ತಿರುವ ಇಸ್ಲಾಮಿಕ್ ಸ್ಟೇಟ್ ಮತ್ತು ಅಲ್ ಖೈದಾ ಎಂಬುದು ಸ್ಪಷ್ಟವಾಗುತ್ತದೆ.[ನನ್ನ ಬಂಧನಕ್ಕೆ ಮೋದಿ-ಟ್ರಂಪ್ ಗೆಳೆತನವೇ ಕಾರಣ: ಹಫೀಜ್ ಸಯೀದ್]

Where are America's terrorists coming from?

ಇರಾಕ್ ನಲ್ಲಿ ಐಎಸ್ ಪ್ರಬಲ, ಅಲ್ ಖೈದಾಗೆ ಯೆಮೆನ್ ಭದ್ರ ಕೋಟೆ. ಐಎಸ್ ಮತ್ತು ಅಲ್ ಖೈದಾ, ತನ್ನ ಪ್ರಾಬಲ್ಯ ಹೆಚ್ಚಾಗಿರುವ ದೇಶಗಳಿಂದ ಭಯೋತ್ಪಾದಕರನ್ನು ಕಳಿಸಿಯೇ ಇಲ್ಲ. ಇರಾಕ್ ಮತ್ತು ಸಿರಿಯಾದಲ್ಲಿರುವ ಐಎಸ್ ಭಯೋತ್ಪಾದಕರು ಮೂಲತಃ ಸೌದಿ ಅರೇಬಿಯಾ, ಮೊರೊಕ್ಕೊ, ರಷ್ಯಾ ಮತ್ತು ಈಜಿಪ್ಟ್ ನವರು.[ಪಾಕ್ ವಲಸಿಗರಿಗೆ ಯುಎಸ್ ನಿಂದ ನಿಷೇಧ: ಭಾರತ ಸ್ವಾಗತ]

ಈ ಯಾವ ರಾಷ್ಟ್ರಗಳು ಸಹ ನಿಷೇಧ ಪಟ್ಟಿಯಲ್ಲಿಲ್ಲ. ಈ ದೇಶಗಳಿಂದ ಯುಎಸ್ ಗೆ ತನ್ನ ಗುಂಪಿನ ಭಯೋತ್ಪಾದಕರನ್ನು ಸುಲಭವಾಗಿ ಐಎಸ್ ಕಳುಹಿಸಬಹುದು. ಇತರ ದೇಶಗಳ ಕಡೆಗೆ ಕಣ್ಣಿಟ್ಟಿರುವ ಟ್ರಂಪ್, ಅಮೆರಿಕದಲ್ಲೇ ಬೇರೊಡೆಯುತ್ತಿರುವ ಭಯೋತ್ಪದನೆ ಬಗ್ಗೆಯೂ ನಿಗಾ ವಹಿಸಬೇಕಿದೆ. ತಜ್ಞರ ಪ್ರಕಾರ, ಅಮೆರಿಕದ ಒಳಗೇ ಭಯೋತ್ಪಾದನೆಯ ವಿಷ ಬೀಜ ಬಿತ್ತುವವರ ಬಗ್ಗೆ ಎಚ್ಚರ ವಹಿಸಬೇಕು.

English summary
On January 27, President of the United States of America, issued an executive order banning entry from several majority Muslim countries- Iran, Iraq, Syria, Sudan, Libya, Yemen and Somalia. While this ban has got mixed reactions, there is some interesting data to suggest that none of the deadly attackers since 9/11 have come from this country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X