ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಮಾರುಕಟ್ಟೆಗೆ ಡೆಂಗ್ಯೂ ಲಸಿಕೆ ಯಾವಾಗ ಬರುತ್ತದೆ?

By Vanitha
|
Google Oneindia Kannada News

ಬೆಂಗಳೂರು, ಡಿಸೆಂಬರ್ 11 : ಡೆಂಗ್ಯೂ ಹೆಸರು ಕೇಳಿದ ಕೂಡಲೆ ಮೈಯಲ್ಲಿ ರಕ್ತ ಬಸಿದಂತಹ ಅನುಭವವಾಗುತ್ತದೆ. ಜಗತ್ತಿನಾದ್ಯಂತ ದಾಂಗುಡಿ ಇಟ್ಟಿರುವ ಈ ಮಹಾಮಾರಿ ಯಾವ ದೇಶವನ್ನೂ ಬಿಟ್ಟಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತದಲ್ಲಿ ಡೆಂಗ್ಯೂಗೆ ತುತ್ತಾದವರ ಸಂಖ್ಯೆ ದ್ವಿಗುಣಿತವಾಗಿದೆ. ಸೊಳ್ಳೆಯ ಕಡಿತದಿಂದ ಬರುವ ಈ ಜ್ವರಕ್ಕೆ ಭಾರತದಲ್ಲಷ್ಟೇ ಏಕೆ ಯಾವ ದೇಶದಲ್ಲೂ ನಿಖರವಾದ ಔಷಧಿ ಇಲ್ಲ.

ಆದರೆ, ದಕ್ಷಿಣ ಅಮೆರಿಕಾದ ಮೆಕ್ಸಿಕೋ ಮಾರುಕಟ್ಟೆಯಲ್ಲಿ ಡೆಂಗ್ಯೂ ಜ್ವರಕ್ಕೆ ಲಸಿಕೆ ಲಭ್ಯವಿದೆ ಎಂಬ ಸುದ್ದಿ ಭಾರತದಲ್ಲಿಯೂ ಆಶಾಕಿರಣ ಮೂಡಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿವರ್ಷ 400 ಮಿಲಿಯನ್ ಜನರು ಡೆಂಗ್ಯೂಗೆ ತುತ್ತಾಗುತ್ತಿದ್ದಾರೆ. ಭಾರತದ ಔಷಧ ಅಂಗಡಿಗಳಲ್ಲಿಯೂ ಈ ಲಸಿಕೆ ದೊರೆಯುವಂತಾದರೆ ಅದಕ್ಕಿಂತ ಸಂತಸದ ಸುದ್ದಿ ಮತ್ತೊಂದಿಲ್ಲ. ಆದರೆ, ಎಂದು? ಸದ್ಯಕ್ಕೆ ಈ ಪ್ರಶ್ನೆಗೆ ಉತ್ತರವಿಲ್ಲ.[ರಾಜ್ಯದಲ್ಲಿ ಎಲ್ಲೆಲ್ಲಿ ಎಷ್ಟೆಷ್ಟು ಡೆಂಗ್ಯೂ ಪೀಡಿತರು?]

When is the dengue vaccine coming to Indian market?

ಡೆಂಗ್ಯೂ ಜ್ವರ ಹೋಗಲಾಡಿಸುವ ಲಸಿಕೆಯಾದ 'ಡೆಂಗ್ ವ್ಯಾಕ್ಸಿಯಾ' ಲಸಿಕೆಯನ್ನು ಫ್ರಾನ್ಸ್ ದೇಶದ 'ಸನೊಫಿಯಾ ಫಾರ್ಮಸ್ಯೂಟಿಕಲ್ ಕಂಪನಿ' ಕಂಡು ಹಿಡಿದಿದ್ದು, ಭಾರತದ ಮಂದಿಗೆ ಈ ಔಷಧಿ ಅವಶ್ಯಕವಾಗಿದ್ದಲ್ಲಿ ಭಾರತದ ಮಾರುಕಟ್ಟೆಗೆ ಡೆಂಗ್ಯೂ ನಿವಾರಣಾ ಔ‍ಷಧಿ ಶೀಘ್ರವೇ ತಲುಪಲಿದೆ ಎಂದು ಫ್ರಾನ್ಸ್ ಕಂಪನಿ ಹೇಳಿದೆ.[ಸೊಳ್ಳೆ ಒದ್ದೋಡಿಸುವ ಗಿಡಗಳ ನೆಟ್ಟ ಹಿರಿಯ ನಾಗರಿಕರು]

'ಡೆಂಗ್ ವ್ಯಾಕ್ಸಿಯಾ' ಲಸಿಕೆ ಕಂಡು ಹಿಡಿದ ಫ್ರಾನ್ಸ್ ಕಂಪನಿ ಔ‍ಷಧಿ ಮಾರಾಟಕ್ಕೆ ಮಾರುಕಟ್ಟೆ ನೀಡಬೇಕೆಂದು ಏಷ್ಯಾ, ಲ್ಯಾಟೀನ್ ಅಮೆರಿಕಾ ಸೇರಿದಂತೆ ಒಟ್ಟು 20 ದೇಶಗಳಿಗೆ ತನ್ನ ಮನವಿಯನ್ನು ಕಳುಹಿಸಿತ್ತು. ಅದರಲ್ಲಿ ಮೆಕ್ಸಿಕೋ ಸರ್ಕಾರ ಫ್ರಾನ್ಸ್ ಕಂಪನಿಯ ಮನವಿಯನ್ನು ಮಾನ್ಯತೆ ಮಾಡಿದ್ದು, ಅಧಿಕೃತ ಒಪ್ಪಿಗೆ ಸೂಚಿಸಿದೆ.

ಜನರಿಗೆ ಡೆಂಗ್ ವ್ಯಾಕ್ಸಿಯಾ ಲಸಿಕೆಯನ್ನು ಉಚಿತವಾಗಿ ನೀಡುವಂತೆ ಮೆಕ್ಸಿಕೋ ನ್ಯಾಷನಲ್ ವ್ಯಾಕ್ಸಿನೇಷನ್ ಕೌನ್ಸಿಲ್ ಸಂಸ್ಥೆ ನಿರ್ಧರಿಸಿದ್ದು, ಸರ್ಕಾರವನ್ನು ಶೀಘ್ರವೇ ಭೇಟಿ ಮಾಡಲಿದೆ ಎಂದು ಮೆಕ್ಸಿಕೋ ಆರೋಗ್ಯ ಸಂಸ್ಥೆಯ ಮೈಕೆಲ್ ಆರಿಯೋಲ್ ತಿಳಿಸಿದ್ದಾರೆ.[ಡೆಂಗ್ಯೂ ತಡೆಗೆ ಯಾವ ಮುಂಜಾಗ್ರತಾ ಕ್ರಮ ಬೇಕು?]

ಈ ಲಸಿಕೆಯಿಂದ ಒಂದು ವರ್ಷದಲ್ಲಿ 8,000 ಡೆಂಗ್ಯೂ ಪೀಡಿತರನ್ನು ಜ್ವರ ಮುಕ್ತ ಗೊಳಿಸುತ್ತದೆ ಹಾಗೂ ಸಾವು ಬದುಕಿನ ನಡುವೆ ಹೋರಾಡುವ 104 ಮಂದಿಯನ್ನು ಪ್ರಾಣಾಪಾಯದಿಂದ ಪಾರು ಮಾಡುತ್ತದೆ ಎಂದು ಮಾಹಿತಿ ನೀಡಿದ್ದಾರೆ.

English summary
The world's first dengue vaccine Dengvaxia hit Mexico market. This vaccine manufactured by French Pharmaceutical giant Sanofi. Well, when will this vaccine be made available in my country, India? More than 20 thousand people in India were infected by this fever, which spreads through mosquito bite, in 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X