ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

100 ಕೋಟಿ ರು ಮೌಲ್ಯದ ಬಂಗಲೆಯಲ್ಲಿ ಮಲ್ಯ ನೆಲೆ

By Mahesh
|
Google Oneindia Kannada News

ಲಂಡನ್, ಏಪ್ರಿಲ್ 25: ಭಾರತೀಯ ಪಾಸ್ ಪೋರ್ಟ್ ಕಳೆದುಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಅವರು ಮುಂದೆ ಯಾವ ನಡೆ ಇಡಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಮಲ್ಯ ಅವರ ಬ್ರಿಟಿಷ್ ನಿವಾಸದ ವಿವರ ಸಿಕ್ಕಿದೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

ಭಾರತದ ಬ್ಯಾಂಕುಗಳಿಂದ ಪಡೆದಿರುವ 9,400 ಕೋಟಿ ರು ಸಾಲವನ್ನು ಹಿಂತಿರುಗಿಸಲು ಮಲ್ಯ ಅವರು ಕಾಲಾವಕಾಶ ಕೇಳಬಹುದು. ಆದರೆ, ಭಾರತಕ್ಕೆ ಹಿಂತಿರುಗುವುದು ಕಷ್ಟಸಾಧ್ಯ. ವಿಜಯ ಮಲ್ಯರ ಹೆಸರು ಬ್ರಿಟನ್‌ನ ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ ಎಂದು ಸಂಡೇ ಟೈಮ್ಸ್ ವರದಿ ಮಾಡಿದೆ.[ಪಾಸ್ ಪೋರ್ಟ್ ಕಳೆದುಕೊಂಡ ಮಲ್ಯ ಮುಂದಿರುವ ಆಯ್ಕೆಗಳು?]

60 ವರ್ಷ ವಯಸ್ಸಿನ ಮಲ್ಯ ಅವರು ಸದ್ಯ ಉತ್ತರ ಲಂಡನ್‌ನಿಂದ ಸುಮಾರು ಒಂದು ಗಂಟೆ ರಸ್ತೆ ಪ್ರಯಾಣವಿರುವ ಹರ್ಟ್‌ಫೋರ್ಡ್‌ಶೈರ್ ನ ಟೆವಿನ್ ಎಂಬ ಗ್ರಾಮದಲ್ಲಿ 'ಲೇಡಿವಾಕ್' ಎಂಬ ಮೂರು ಅಂತಸ್ತಿನ ಬಂಗಲೆಯೊಂದರಲ್ಲಿ ವಾಸಿಸುತ್ತಿದ್ದಾರೆ. ಅವರ ಇದೇ ವಿಳಾಸ ಮತದಾರರ ಪಟ್ಟಿಯಲ್ಲಿ ದಾಖಲಾಗಿದೆ. [ಮಲ್ಯ ಒಡೆತನದಲ್ಲಿದ್ದ 6 ಕಂಪನಿಗಳ ಸ್ಥಿತಿ ಗತಿ ಏನಾಗಿದೆ?]

Mallya appears on UK electoral rolls: Report

''ಬ್ರಿಟನ್‌ನಲ್ಲಿ ನನ್ನ ಅಧಿಕೃತ ವಿಳಾಸ ಲೇಡಿವಾಕ್'' ಎಂಬುದಾಗಿ ಮಲ್ಯ ಖಚಿತಪಡಿಸಿದ್ದಾರೆ ಎಂದು 'ದ ಸಂಡೇ ಟೈಮ್ಸ್' ವರದಿ ಮಾಡಿದೆ. ಇದೇ ವಿಳಾಸವನ್ನು ತಾನು ಭಾರತೀಯ ಅಧಿಕಾರಿಗಳಿಗೆ ನೀಡಿರುವುದಾಗಿಯೂ ಅವರು ಹೇಳಿದ್ದಾರೆ.[ಮಲ್ಯ ಏನ್ಮಾಡ್ಬೇಕು? ನೀವೇ ಮತ ಹಾಕಿ ತಿಳಿಸಿ, ಕ್ಲಿಕ್ ಮಾಡಿ]

11.5 ಮಿಲಿಯನ್ ಪೌಂಡ್ ಮೌಲ್ಯದ (ಸುಮಾರು 108 ಕೋಟಿ ರೂಪಾಯಿ) ಬೆಲೆಯ ಬಂಗಲೆಯನ್ನು ಬ್ರಿಟಿಷ್ ಫಾರ್ಮುಲಾ ವನ್ ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್‌ ಅವರ ತಂದೆಯಿಂದ ಮಲ್ಯ ಖರೀದಿಸಿದ್ದಾರೆ.

ಬ್ರಿಟಿಷ್ ನಿವಾಸಿ: 'ಲೇಡಿವಾಕ್‌ನ ಮಾಲಕತ್ವ ಸರಣಿ ಕಾನೂನುಬದ್ಧವಾಗಿದೆ' ಎಂದಿರುವ ಮಲ್ಯ, 1992ರಿಂದಲೂ ತಾನು ಬ್ರಿಟನ್ ನಿವಾಸಿ ಎಂದು ಘೋಷಿಸಿಕೊಂಡಿದ್ದಾರೆ.

ಆದರೆ, ಮನೆಯ ಮಾಲಕತ್ವ ದಾಖಲೆಗಳಲ್ಲಿ ಎಲ್ಲೂ ಮಲ್ಯರ ಹೆಸರಿಲ್ಲ. ಕೆರಿಬಿಯನ್‌ನ ತೆರಿಗೆ ವಂಚಕರ ಸ್ವರ್ಗಗಳಾದ ಸೇಂಟ್ ಕಿಟ್ಸ್ ಮತ್ತು ನೆವಿಸ್ ಎಂಬ ದೇಶಗಳಲ್ಲಿ ಎರಡು ಕಂಪೆನಿಗಳ ಹೆಸರುಗಳಲ್ಲಿ ಅವರ ಮಾಲಕತ್ವ ದಾಖಲಾಗಿದೆ.

ಮನೆ ಮೇಲೆ ಸಾಲವನ್ನು ಸ್ವಿಟರ್ಲೆಂಡ್ ನ ಎಡ್ಮಂಡ್ ಡಿ ರೊಥ್ಸ್ ಚೈಲ್ಡ್ ಖಾಸಗಿ ಬ್ಯಾಂಕಿನಿಂದ ಪಡೆಯಲಾಗಿದೆ. ಇಂಥ ಬಂಗಲೆಗಳ ಮಾಲೀಕತ್ವ ಬಗ್ಗೆ ಮುಂದಿನ ತಿಂಗಳು ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರು ಸಭೆ ನಡೆಸುವ ಸುದ್ದಿ ಬಂದಿದೆ. (ಪಿಟಿಐ)

English summary
Indian liquor baron Vijay Mallya, whose Kingfisher Airlines has been accused of having defaulted on loans of over Rs 9,400 crore and faces legal proceedings, appears on the electoral rolls in the UK with his country home in Britain as his recorded address, a media report said
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X