ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ವಿಡಿಯೋ: ಹುಲಿಗೆ ಆಹಾರವಾದ ಕಾರಿನಿಂದ ಇಳಿದ ಮಹಿಳೆ

By Mahesh
|
Google Oneindia Kannada News

ಬೀಜಿಂಗ್, ಜುಲೈ 26: ಹುಲಿಗಳ ರಕ್ಷಿತಾರಣ್ಯದಲ್ಲಿ ಕಾರು ನಿಲ್ಲಿಸಿ ಕೆಳಗಿಳಿದು, ಎಡ ಬದಿಯಿಂದ ಬಲಬದಿಯ ಸೀಟಿಗೆ ಬರುವಷ್ಟರಲ್ಲಿ ಮಹಿಳೆಯೊಬ್ಬರು ಹುಲಿಗೆ ಆಹಾರವಾದ ಸುದ್ದಿ ತಿಳಿದಿರಬಹುದು. ಈಗ ಈ ಸುದ್ದಿಯನ್ನು ಸೆರೆ ಹಿಡಿದ ಕೆಲ ಸೆಕೆಂಡುಗಳ ವಿಡಿಯೋ ತುಣುಕು ವೈರಲ್ ಆಗಿದೆ.

ಚೀನಾದ ಬಾದಲಿಂಗ್ ರಾಷ್ಟ್ರೀಯ ಅಭಯಾರಣ್ಯದಲ್ಲಿ ನಡೆದ ಘಟನೆ ನೋಡಿದರೆ ಎಂಥವರ ಎದೆಯು ಒಮ್ಮೆ ನಡುಗುತ್ತದೆ. ಕಾರಿನಿಂದ ಕೆಳಗಿಳಿದ ಮಹಿಳೆಯೊಬ್ಬಳನ್ನು ಭಾರಿ ಗಾತ್ರದ ಹುಲಿಯೊಂದು ಎಳೆದೊಯ್ಯುತ್ತದೆ. ಆಕೆಯನ್ನು ರಕ್ಷಿಸಲು ಬಂದ ಮತ್ತೊಬ್ಬ ಮಹಿಳ ತೀವ್ರವಾಗಿ ಗಾಯಗೊಂಡಿದ್ದಾರೆ.[ಥಾಯ್ಲೆಂಡಿನ ಹುಲಿ ದೇಗುಲದಲ್ಲಿ 40 ಹುಲಿ ಮರಿಗಳ ಮೃತದೇಹ ಪತ್ತೆ]

Video : Tiger mauls woman to death in Beijing wildlife park

ಚೀನಾದ ಬಾದಲಿಂಗ್ ರಾಷ್ಟ್ರೀಯ ಅಭಯಾರಣ್ಯದಲ್ಲಿ ಸ್ವಂತ ವಾಹನದಲ್ಲಿ ತೆರಳುವ ಅವಕಾಶ ನೀಡಲಾಗುತ್ತದೆ. ಯಾವುದೇ ರಕ್ಷಣೆ ಇಲ್ಲದೆ ಅರಣ್ಯದೊಳಗೆ ತೆರಳಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ತಿಳಿದಿದ್ದರೂ ಚೀನಿಯರು ಈ ಮಾರ್ಗದಲ್ಲಿ ಸವಾರಿ ಮಾಡಬಯಸುತ್ತಾರೆ. ಹೀಗೆ ತೆರಳಿದ ಪ್ರವಾಸಿಗರ ಪೈಕಿ ಈ ಮಹಿಳೆ ಕಾರಿನ ಒಂದು ಬದಿಯಿಂದ ಮತ್ತೊಂದು ಬದಿಗೆ ತೆರಳುವಷ್ಟರಲ್ಲಿ ಈ ದುರ್ಘಟನೆ ನಡೆದಿದೆ.

ಈ ಘಟನೆ ಬಳಿಕ ಹುಲಿಧಾಮದಲ್ಲಿ ವಾಹನ ಬಿಟ್ಟು ಕೆಳಗಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಈ ಹಿಂದೆ 2014 ರಲ್ಲಿ ಅರಣ್ಯ ಭದ್ರತಾ ಪಡೆ ಸಿಬ್ಬಂದಿ ಹುಲಿ ದಾಳಿಗೆ ತುತ್ತಾಗಿ ಮೃತಪಟ್ಟಿದ್ದ ಘಟನೆ ನಡೆದಿತ್ತು. ಆದರೂ, ಇಲ್ಲಿ ಹೆಚ್ಚಿನ ನಿರ್ಬಂಧ ಹೇರಿಲ್ಲ.

English summary
A Siberian tiger pounced on one of the women after she got out of a private car in which she was touring the Beijing Badaling Wildlife World
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X