ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಸ್ ವೀಸಾ: ಭಾರತಕ್ಕೆ ಶೇ. 28 ಹೆಚ್ಚಳ, ಪಾಕ್ ಗೆ ಶೇ. 40 ಖೋತ

ಅಮೆರಿಕದ ಈ ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ಆಡಳಿತದಲ್ಲಿ ನೀಡಲಾಗುತ್ತಿದ್ದ ವೀಸಾಗಳಿಗೆ ಹೋಲಿಸಿದರೆ, ಪಾಕಿಸ್ತಾನಕ್ಕೆ ಈ ಬಾರಿ ವೀಸಾ ನೀಡಿಕೆ ಸಂಖ್ಯೆಯಲ್ಲಿ ಗಣನೀಯ ಇಳಿಮುಖವಾಗಿದೆ.

|
Google Oneindia Kannada News

ನವದೆಹಲಿ, ಮೇ 29: ವಿಶ್ವದ ನಾನಾ ದೇಶಗಳ ಪ್ರಜೆಗಳಿಗೆ ಅಮೆರಿಕ ಸರ್ಕಾರದಿಂದ ವಾರ್ಷಿಕವಾಗಿ ನೀಡಲಾಗುವ 'ನಾನ್ ಇಮಿಗ್ರಂಟ್ ವೀಸಾ' ನಿಯಮಗಳಡಿ ಭಾರತಕ್ಕೆ ಸಿಗುತ್ತಿದ್ದ ಪಾಲಿನಲ್ಲಿ ಸುಮಾರು ಶೇ. 28ರಷ್ಟನ್ನು ಹೆಚ್ಚಿಗೆ ಮಾಡಿರುವ ಅಮೆರಿಕ, ಪಾಕಿಸ್ತಾನಕ್ಕೆ ಈವರೆಗೆ ನೀಡುತ್ತಿದ್ದ ವಾರ್ಷಿಕ ಕೋಟಾದಲ್ಲಿ ಶೇ. 40ರಷ್ಟು ಕಡಿತ ಮಾಡಿ ಆದೇಶ ಹೊರಡಿಸಿದೆ.

ಅಮೆರಿಕದಲ್ಲಿ ಡೊನಾಲ್ಟ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ, ವಿಶ್ವ ಏಳು ಮುಸ್ಲಿಂ ರಾಷ್ಟ್ರಗಳಿಗೆ ವೀಸಾ ನಿರಾಕರಿಸುವ ಮಹತ್ವದ ಆದೇಶಕ್ಕೆ ಸಹಿಹಾಕಿದ್ದರು. ಸಿರಿಯಾ, ಇರಾನ್, ಸುಡಾನ್, ಲಿಬಿಯಾ, ಸೋಮಾಲಿಯಾ, ಯೆಮನ್ ಮತ್ತು ಇರಾಕ್ ರಾಷ್ಟ್ರಗಳ ಪ್ರಜೆಗಳಿಗೆ ವೀಸಾ ನಿರ್ಬಂಧ ವಿಧಿಸಲಾಗಿತ್ತು. ಪಾಕಿಸ್ತಾನ ಈ ಪಟ್ಟಿಯಲ್ಲಿ ಇಲ್ಲದಿದ್ದರೂ, ಆ ದೇಶಕ್ಕೆ ನೀಡಲಾಗುತ್ತಿದ್ದ ವೀಸಾ ಪ್ರಮಾಣದಲ್ಲಿ ಶೇ. 40ರಷ್ಟು ಕಡಿತಗೊಳಿಸಿರುವುದು ಗಮನಾರ್ಹ.[ಎಚ್ 1ಬಿ ವೀಸಾ ಬಗ್ಗೆ ಮೋದಿಗೆ ಫೋನ್ ಮೂಲಕ ವಿವರಿಸಿದ ಟ್ರಂಪ್]

US visa grants: 28 per cent increase for India, 40 per cent decline for Pak

ಈ ಹೊಸ ನಿಯಮವು ಇದೇ ವರ್ಷ ಮಾರ್ಚ್ ತಿಂಗಳಿಂದಲೇ ಜಾರಿಗೆ ಬಂದಿದೆಯೆಂದು ಅಮೆರಿಕ ಸರ್ಕಾರ ತಿಳಿಸಿದೆ. ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ (ಒಬಾಮ ಆಡಳಿತ ಇದ್ದ ಕಾಲದಲ್ಲಿ) ಸುಮಾರು 78,637 ವೀಸಾಗಳನ್ನು ಪಾಕಿಸ್ತಾನಕ್ಕೆ ನೀಡಲಾಗಿತ್ತು. ಈ ಬಾರಿಯ ಮಾರ್ಚ್ ನಲ್ಲಿ ಕೇವಲ 3,973 ವೀಸಾಗಳನ್ನು ನೀಡಲಾಗಿದೆ.[ಟ್ರಂಪ್ ಐತಿಹಾಸಿಕ ನಿರ್ಧಾರ: 7 ಮುಸ್ಲಿಂ ರಾಷ್ಟ್ರಗಳಿಗೆ ವೀಸಾ ರದ್ದು]

ಭಾರತೀಯರಿಗೆ,ಇದೇ ವರ್ಷದ ಮಾರ್ಚ್ ಅವಧಿಯಲ್ಲಿ 97,925 ವೀಸಾಗಳು ಸಿಕ್ಕಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 72,082 ವೀಸಾಗಳು ಲಭ್ಯವಾಗಿದ್ದವು.

English summary
Pakistan has had a significant 40 per cent drop in the number of American visas granted to its nationals under the new Trump administration despite not being on the list of the US President’s travel ban countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X