ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಕಟದಲ್ಲಿದ್ದವನಿಗೆ ವೆಂಕಟರಮಣನಾದ ಟ್ವಿಟ್ಟರ್!

By Prasad
|
Google Oneindia Kannada News

ಲಂಡನ್, ಅ. 18 : ಕ್ಷಣಾರ್ಧದಲ್ಲಿ ಸುದ್ದಿಯನ್ನು ವಿಶ್ವವ್ಯಾಪಿ ಮಾಡುವ, ಲಕ್ಷಾಂತರ ನೆಟ್ಟಿಗರ ದಿನನಿತ್ಯದ ಸುದ್ದಿಮೂಲವಾಗಿರುವ ಟ್ವಿಟ್ಟರ್ ಸಂಕಷ್ಟದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಪಾರುಮಾಡಲು ಹೇಗೆ ಸಹಾಯ ಮಾಡಿತು, ಅರ್ಥಾತ್ ಆತ ಪಾರಾಗಲು ಟ್ವಿಟ್ಟರ್ ಹೇಗೆ ಬಳಸಿಕೊಂಡ ಎಂಬ ರೋಚಕ ಕಥಾನಕ ಇಲ್ಲಿದೆ.

ಟೆಕ್ಸಾಸ್‌ನ ಡಲ್ಲಾಸ್ ನಿವಾಸಿ ಡೇವಿಡ್ ವಿಲ್ಲಿಸ್ ಎಂಬುವವರು ಲಂಡನ್ ನಲ್ಲಿರುವ ವಾಟರ್‌ಸ್ಟೋನ್ಸ್ ಪುಸ್ತಕ ಮಳಿಗೆಗೆ ಗುರುವಾರ ಭೇಟಿ ನೀಡಿದ್ದರು. ಆಗ ಸಮಯ ಹೆಚ್ಚೂಕಡಿಮೆ ಸಂಜೆ 9 ಗಂಟೆ. ಪುಸ್ತಕ ಮಳಿಗೆ ಬಂದಾಗುವ ಸಮಯ. ಆಗ, ಉಚಿತ ವೈಫೈ ಬಳಸೋಣವೆಂಬ ಆಸೆಯಿಂದ ಮೇಲಿನ ಮಹಡಿಗೆ ಡೇವಿಡ್ ಹೋಗಿದ್ದಾರೆ.

US tourist locked in bookstore tweets himself to freedom

ಸ್ವಲ್ಪ ಹೊತ್ತಿಗೆ ಕೆಳಗಿಳಿದುಬಂದಾಗ ಪುಸ್ತಕ ಮಳಿಗೆಯಲ್ಲಿ ಪುಸ್ತಕಗಳ ಹೊರತಾಗಿ ಎಲ್ಲರೂ ಜಾಗ ಖಾಲಿ ಮಾಡಿದ್ದರು. ಎಲ್ಲ ದಿನದ ವಹಿವಾಟು ಮುಗಿಸಿ ಶಟರ್ ಎಳೆದು ಅಂಗಡಿ ಮಾಲಿಕರು ತೆರಳಿದ್ದರು. ಏನು ಮಾಡಬೇಕೆಂದು ತೋಚುತ್ತ ಕುಳಿತಿದ್ದಾಗ ಡೇವಿಡ್ ಗೆ ಒಂದು ಐಡಿಯಾ ಹೊಳೆದಿದೆ. ರಾತ್ರಿ 10.11ರ ಸುಮಾರಿಗೆ ತಮ್ಮದೇ ಇನ್‌ಸ್ಟಾಗ್ರಾಮ್ ಚಿತ್ರ ತೆಗೆದು ಟ್ವೀಟ್ ಮಾಡಿದ್ದಾರೆ.

ಮತ್ತೂ ಸ್ವಲ್ಪ ಹೊತ್ತಿಗೆ @Waterstones ಎಂದು ಹ್ಯಾಂಡಲ್ ಹಾಕಿ, ತಾವು ಟ್ರಾಫಲ್ಗರ್ ಸ್ಕ್ವೇರ್ ಬುಕ್ ಸ್ಟೋರ್ ನಲ್ಲಿ ಸಿಲುಕಿಕೊಂಡಿದ್ದೇನೆ. ನನ್ನನ್ನು ಹೊರಗೆ ಕರೆತನ್ನಿ ಎಂದು ಮತ್ತೊಮ್ಮೆ ಟ್ವೀಟ್ ಮಾಡಿದ್ದಾರೆ.


ಶುಕ್ರವಾರ ಚುಮುಚುಮು ಬೆಳಗಾಗುವ ಹೊತ್ತಿಗೆ #waterstonestexan ಎಂಬ ಹ್ಯಾಶ್ ಟ್ಯಾಗ್ ಇದ್ದ ಅವರ ಟ್ವೀಟ್ 11 ಸಾವಿರ ಬಾರಿ ರಿಟ್ವೀಟ್ ಆಗಿತ್ತು. ಕೆಲವರು ಈ ವಿದ್ಯಮಾನದ ಬಗ್ಗೆ ನಿರ್ಲಿಪ್ತತೆ ತೋರಿದರೆ, ಕೆಲ ತುಂಟರು ಹೀಗೆ ಸಿಲುಕಿದಾಗ ಯಾವ್ಯಾಗ ಪುಸ್ತಕಗಳನ್ನು ಓದಿ ಕಾಲ ಕಳೆಯಬೇಕು ಎಂದು ಪುಗಸಟ್ಟೆ ಸಲಹೆ ನೀಡಿದ್ದಾರೆ.

ಇಲಿಗೆ ಚೆಲ್ಲಾಟ ಬೆಕ್ಕಿಗೆ ಪ್ರಾಣ ಸಂಕಟ ಎನ್ನುವ ಹಾಗೆ, ವಿಲ್ಲಿಸ್ ಪರಿಸ್ಥಿತಿಯನ್ನು ನೋಡಿ ಕೆಲವರು ಗಹಗಹಿಸಿ ನಕ್ಕಿದ್ದಾರೆ ಕೂಡ. ಕೊನೆಗೆ ಅಲಾರಾಂ ಗಂಟೆಯನ್ನು ಒತ್ತಿ ಪೊಲೀಸರಿಗೆ ಕೂಡ ವಿಲ್ಲಿಸ್ ಕರೆ ಮಾಡಿದ್ದಾರೆ. ಕೊನೆಗೆ ಪುಸ್ತಕ ಮಳಿಗೆಯ ನೌಕರನೊಬ್ಬ ಈ ಟ್ವೀಟನ್ನು ನೋಡಿದ ಮೇಲೆಯೇ ವಿಲ್ಲಿಸ್ ಬಂಧಮುಕ್ತರಾಗಿದ್ದಾರೆ.

ಇಡೀ ರಾತ್ರಿ ನಾನು ಮಲಗಿಲ್ಲ. ತುಂಬಾ ಸುಸ್ತಾಗಿದ್ದೇನೆ. ಆದರೆ, ಈ ಅನುಭವ ಕೂಡ ಒಂದು ರೀತಿ ತಮಾಷೆಯಾಗಿತ್ತು ಎಂದು ಡೇವಿಡ್ ವಿಲ್ಲಿಸ್ ಲಂಡನ್ ನ ಟಿವಿ ಚಾನಲ್ಲಿಗೆ ಹೇಳಿದ್ದಾರೆ. ಕೊನೆಗೂ ಅವರು ವಿಲ್ಲಿಸ್ ಬಂಧಮುಕ್ತನಾಗಲು ಸಹಾಯವಾಗಿದ್ದಕ್ಕೆ ವಾಟರ್‌ಸ್ಟೋನ್ಸ್ ಬುಕ್ ಸ್ಟೋರ್ ಟ್ವಿಟ್ಟರಿಗೆ ಥ್ಯಾಂಕ್ಸ್ ಹೇಳಿದೆ.


ಇದೇ ಸಂದರ್ಭವನ್ನು ತನ್ನ ಪ್ರಚಾರಕ್ಕೆ ಬಳಸಿಕೊಂಡ ಬುಕ್ ಸ್ಟೋರ್, ನಿಮಗೆ ಹೀಗೆ ಎರಡು ಗಂಟೆ ಸಮಯ ಸಿಕ್ಕಾಗ ಎಂತೆಂಥ ಪುಸ್ತಕಗಳನ್ನು ಓದಬೇಕು ಎಂದು ಟ್ವೀಟ್ ಮಾಡಿದೆ.

ಸ್ಪರ್ಧೆಯಲ್ಲಿ ಬಿದ್ದಿರುವ ಉಳಿದ ಪುಸ್ತಕ ಮಳಿಗೆಗಳು ಸುಮ್ಮನಿರಬೇಕಲ್ಲ? ಖ್ಯಾತ ಪುಸ್ತಕ ಮಳಿಗೆ ಫಾಯ್ಲಸ್, ಅಸ್ತಿಪಂಜರದ ಚಿತ್ರ ಟ್ವಿಟ್ಟರ್ ಮೂಲಕ ಪ್ರಕಟಿಸಿ ವಾಟರ್‌ಸ್ಟೋರ್ಸ್ ಬುಕ್ ಸ್ಟೋರ್‌ನ ಕಾಲೆಳೆದಿದೆ.

English summary
US tourist locked in a bookstore in London tweets himself to freedom. The tourist David Willis found himself accidentally locked in London bookstore Waterstones. He used twitter to spread word and eventually freed himself.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X