ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾ ಚುನಾವಣೆಗೆ ಬಾಹ್ಯಾಕಾಶದಿಂದಲೇ ಮತದಾನ!

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ವಾಷಿಂಗ್ಟನ್, ನವೆಂಬರ್ 8: ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯ ಕೌತುಕದ ಸಂಗತಿಯೊಂದು ನಿಮ್ಮ ಗಮನಕ್ಕೆ ಇರಲಿ. ಅಮೆರಿಕಾದ ಇಬ್ಬರು ಗಗನಯಾನಿಗಳು ಗಂಟೆಗೆ ಹದಿನೇಳು ಸಾವಿರ ಮೈಲು ವೇಗದಲ್ಲಿ ಭೂಮಿಯನ್ನು ಸುತ್ತುತ್ತಿದ್ದು, ನಭದಿಂದಲೇ ತಮ್ಮ ಮತವನ್ನು ಚಲಾಯಿಸಿದ್ದಾರೆ.

ನಾಸಾ ಮೂಲಗಳ ಪ್ರಕಾರ, ಗಗನಯಾತ್ರಿ ಶೇನ್ ಕಿಮ್ ಬ್ರಾಗ್ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ತಮ್ಮ ಮತವನ್ನು ಹಾಕಿಯಾಗಿದೆ. ಮತ್ತೊಬ್ಬ ಗಗನಯಾತ್ರಿ ಕೇಟ್ ರೂಬಿನ್ಸ್ ಬುವಿಗೆ ಹಿಂತಿರುಗುವ ಮೊದಲೇ ಕಳೆದ ವಾರ ಮತ ಹಾಕಿದ್ದಾರೆ. ಈ ರೀತಿ ತಾಂತ್ರಿಕವಾಗಿ ಮತ ಹಾಕುವುದಕ್ಕೆ ಟೆಕ್ಸಾಸ್ ನಲ್ಲಿ 1997ರಲ್ಲಿ ಮಸೂದೆಯೊಂದನ್ನು ತರಲಾಗಿತ್ತು.

US astronauts cast vote from space

ಈ ಇಬ್ಬರೂ ಗಗನಯಾತ್ರಿಗಳು ಜಾನ್ಸನ್ ಬಾಹ್ಯಾಕಾಶ ಕೇಂದ್ರವಿರುವ ಹ್ಯೂಸ್ಟನ್ ನವರು. ಗಗನಯಾತ್ರಿಗಳಿಗೆ ವರ್ಷದ ಮೊದಲೇ ಮತದಾನದ ಪ್ರಕ್ರಿಯೆ ಶುರುವಾಗುತ್ತೆ. ಬಾಹ್ಯಾಕಾಶದಲ್ಲಿರುವಾಗ ಯಾವ ಚುನಾವಣೆಯಲ್ಲಿ (ಸ್ಥಳೀಯ, ರಾಜ್ಯ, ದೇಶ) ಪಾಲ್ಗೊಳ್ಳಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಚುನಾವಣೆಯ ಆರು ತಿಂಗಳ ಮೊದಲೇ ಅವರಿಗೆ ಒಂದು ಅರ್ಜಿ ನೀಡಲಾಗುತ್ತದೆ.

ಅದನ್ನು 'ವೋಟರ್ ರಿಜಿಸ್ಟ್ರೇಷನ್ ಅಂಡ್ ಆಬ್ಸೆಂಟಿ ಬಾಲೆಟ್ ರಿಕ್ವೆಸ್ಟ್-ಫೆಡರಲ್ ಪೋಸ್ಟ್ ಕಾರ್ಡ್ ಅಪ್ಲಿಕೇಷನ್' ಅಂತಾರೆ. ಈ ರೀತಿ ಬಾಹ್ಯಾಕಾಶದಿಂದಲೇ ಮೊದಲ ಬಾರಿಗೆ ಮತ ಹಾಕಿದ್ದು 1997ರಲ್ಲಿ. ರಷ್ಯಾದ ಮಿರ್ ಬಾಹ್ಯಾಕಾಶ ಕೇಂದ್ರದಲ್ಲಿದ್ದ ಡೇವಿಡ್ ವೂಲ್ಫ್ ಬಾಹ್ಯಾಕಾಶದಿಂದ ಮತ ಹಾಕಿದ ಮೊದಲ ಅಮೆರಿಕನ್ನರು.

ಇಷ್ಟುದ್ದ ಸರತಿಯಲ್ಲಿ ನಿಂತು ಮತ ಹಾಕುವ ರಾಮಾಯಣ ಈ ಗಗನ ಯಾತ್ರಿಗಳಿಗೆ ಇಲ್ಲ ಅನ್ನೋದು ನಿಜವಾದರೂ ಅವರು ಮತ್ತೊಂದು ಅವಕಾಶದಿಂದ ತಪ್ಪಿಸಿಕೊಳ್ತಾರೆ. ಅಮೆರಿಕಾದಲ್ಲಿ 'ಐ ವೋಟೆಡ್' ಸ್ಟಿಕರ್ ಗೆ ಭಾರೀ ಗೌರವ. ಮತ ಚಲಾಯಿಸಿದವರಿಗೆ ಅದು ಸಿಗುತ್ತೆ. ಅದರೆ ಇದು ಗಗನಯಾತ್ರಿಗಳಿಗೆ ಸಿಗಲ್ಲ.

English summary
America presidential election voting today. Two American astronauts Shane Kimbrough, Kate Rubins have already cast their votes from space.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X