ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮೋದಿ ಯೋಗ ದಿನಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ'

|
Google Oneindia Kannada News

ವಾಷಿಂಗ್ ಟನ್, ಡಿ. 12 : ಜೂನ್‌ 21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಬೇಕು ಎಂದು ವಿಶ್ವಸಂಸ್ಥೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದ ನರೇಂದ್ರ ಮೋದಿ ಮಾತಿಗೆ ಮನ್ನಣೆ ಸಿಕ್ಕಿದೆ. ಗುರುವಾರ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ವಿಶ್ವಸಂಸ್ಥೆ ಆಡಳಿತ ಮಂಡಳಿ ಜೂನ್‌ 21ಕ್ಕೆ ಅಂತಾರಾಷ್ಟ್ರೀಯ ಯೋಗ ದಿನದ ಮಾನ್ಯತೆ ನೀಡಿದೆ.

ನರೇಂದ್ರ ಮೋದಿ ಮೂರು ತಿಂಗಳ ಹಿಂದೆ ಈ ಪ್ರಸ್ತಾಪ ಮುಂದಿಟ್ಟಿದ್ದರು. ಆಗ ಸುಮಾರು 50 ದೇಶಗಳು ಒಪ್ಪಿಗೆ ಸೂಚಿಸಿದ್ದವು. ವಿಶ್ವಸಂಸ್ಥೆ ಯೋಗ ದಿನದ ಮಾನ್ಯತೆ ನೀಡಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಮೋದಿ ಟ್ವಿಟ್ಟರ್ ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.[ಯೋಗಕ್ಕೆ ಮೋದಿ ಮಣೆ : ಸಿಕ್ಕಿತು ಜಾಗತಿಕ ಮನ್ನಣೆ]

yoga

ಭಾರತದ ಪರವಾಗಿ ಅಸೋಕೆ ಮುಖರ್ಜಿ ಯೋಗ ದಿನದ ಪ್ರಸ್ತಾವನೆಯನ್ನು ವಿಶ್ವಸಂಸ್ಥೆ ಮುಂದಿಟ್ಟರು. ತಕ್ಷಣ 177ನ ದೇಶಗಳು ಇದಕ್ಕೆ ಒಪ್ಪಿಗೆ ಸೂಚಿಸಿದವು. ವಿಶ್ವಸಂಸ್ಥೆಯಲ್ಲಿ ನಿರ್ಣಯವೊಂದಕ್ಕೆ ಈ ರೀತಿಯ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು ಇದೇ ಮೊದಲು.

ಈ ರೀತಿಯ ಬೆಂಬಲ ಕಂಡು ನನಗೆ ಆಶ್ಚರ್ಯವಾಯಿತು. ಇದು ಭಾರತದ ಗೌರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ಏರಿಸಿದೆ ಎಂದು ಮುಖರ್ಜಿ ಹೇಳಿದರು.

ಸಪ್ಟೆಂಬರ್ 26ರಂದು ವಿಶ್ವಸಂಸ್ಥೆಯಲ್ಲಿ ಮಾತನಾಡಿದ್ದ ಮೋದಿ ತಮ್ಮ ಭಾಷಣದಲ್ಲಿ ಭಾರತದ ಪುರಾತನ ಪರಂಪರೆ ಯೋಗದ ಮಹತ್ವ ವಿವರಿಸಿದ್ದರು. ಅಲ್ಲದೇ ಜೂ. 21ನ್ನು ವಿಶ್ವ ಯೋಗ ದಿನವನ್ನಾಗಿ ಆಚರಿಸಬೇಕು ಎಂಬ ಅಂಶ ಮುಂದಿಟ್ಟಿದ್ದರು. ಈಗ ಅದಕ್ಕೆ ಮಾನ್ಯತೆ ಸಿಕ್ಕಂತರಾಗಿದೆ.

English summary
Less than three months after Prime Minister Narendra Modi proposed the idea, the UN general assembly on Thursday adopted an India-led resolution declaring June 21 as 'International Day of Yoga', recognizing that "Yoga provides a holistic approach to health and well-being."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X