ದಾವೂದ್ ಮನೆ ವಿಳಾಸ: 9 ರಲ್ಲಿ 6 ಮಾತ್ರ ಸರಿಯಿದೆ : ಯುಎನ್

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 23: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಅಡಗಿಕೊಂಡಿರುವ ಪಾಕಿಸ್ತಾನದ ವಿಳಾಸದ ಪಟ್ಟಿಯನ್ನು ವಿಶ್ವಸಂಸ್ಥೆಗೆ ಪರಿಶೀಲನೆಗಾಗಿ ಭಾರತ ಸಲ್ಲಿಸಿತ್ತು. ಈ ಪೈಕಿ 9 ವಿಳಾಸಗಳಲ್ಲಿ 3 ವಿಳಾಸಗಳು ತಪ್ಪು ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಮಿತಿ ತಿಳಿಸಿದೆ. ಹಾಗೂ ಆ ಮೂರು ವಿಳಾಸಗಳನ್ನು ಪಟ್ಟಿಯಿಂದ ಕೈ ಬಿಡಲಾಗಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಮಿತಿಯು ನಡೆಸಿದ ಪರಿಶೀಲನೆಗೆ ಕಳಿಸಲಾದ ವಿಳಾಸಗಳ ಪೈಕಿ ಕೈ ಬಿಟ್ಟಿರುವ ಒಂದು ವಿಳಾಸ ವಿಶ್ವಸಂಸ್ಥೆಯ ಪಾಕಿಸ್ತಾನದ ರಾಯಭಾರಿ ಮಲೇಹಾ ಲೋಧಿ ಅವರಿಗೆ ಸೇರಿದ್ದು ಎಂದು ಸಮಿತಿ ತಿಳಿಸಿದೆ. ಆದರೆ ಉಳಿದ 6 ವಿಳಾಸಗಳನ್ನು ಯಾವುದೇ ತಿದ್ದುಪಡಿ ಮಾಡಿ ಪಟ್ಟಿಯಲ್ಲಿ ಉಳಿಸಲಾಗಿದೆ. [ಕರಾಚಿಯ ಕ್ಲಿಫ್ಟನ್ ಉಪನಗರದಲ್ಲೇ ದಾವೂದ್ ನೆಲೆ]

UN: 3 of 9 addresses of Dawood Ibrahim in Pak incorrect

ಯಾವ ವಿಳಾಸ ತಪ್ಪು: ಕರಾಚಿಯ ಮಾರ್ಗಲ್ಲಾ ರೋಡ್​ನ ಎಫ್-6/2, 22ನೇ ರಸ್ತೆ, ಮನೆ ನಂ 07 ವಿಳಾಸವು ಮಲೇಹಾ ಲೋಧಿ ಅವರಿಗೆ ಸೇರಿದೆ. ಜತೆಗೆ ಕರಾಚಿಯ ಕ್ಲಿಫ್ಟನ್​ನ ತಲ್ವಾರ್ ಪ್ರದೇಶದ ಪರದೇಸಿ ಮನೆ ನಂ. 3, ಮೆಹ್ರಾನ್ ಚೌಕ, 8ನೇ ಮಹಡಿಯ ಮನೆ ಮತ್ತು 6/ಎ, ಜೌಬಮ್ ತಾಂಜೀಮ್ 5 ನೇ ಹಂತ, ರಕ್ಷಣಾ ವಸತಿ ಸಂಕೀರ್ಣ, ಕರಾಚಿ ಈ ವಿಳಾಸಗಳೂ ಸಹ ತಪ್ಪು ಎಂದು ವಿಶ್ವಸಂಸ್ಥೆ ತಿಳಿಸಿದೆ. [ದಾವೂದ್ ಕರೆ ಸ್ವೀಕರಿಸಿದ ಮಹಾರಾಷ್ಟ್ರದ ರಾಜಕಾರಣಿಗೆ ಯಾರು?]

ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿದ್ದಾನೆ ಎಂಬುದಕ್ಕೆ ಸಾಕ್ಷಿರೂಪವಾಗಿ ಮನೆ ವಿಳಾಸವನ್ನು ಕಳೆದ ವರ್ಷ ಆಗಸ್ಟ್​ನಲ್ಲಿ ವಿಶ್ವಸಂಸ್ಥೆಗೆ ಭಾರತವು ಸಲ್ಲಿಸಿತ್ತು. ಅದರಲ್ಲಿ 9 ವಿಳಾಸಗಳನ್ನು ಪಟ್ಟಿ ಮಾಡಿ ದಾವೂದ್ ಇಬ್ರಾಹಿಂ ಈ ವಿಳಾಸಗಳಲ್ಲಿ ನಿರಂತರವಾಗಿ ತನ್ನ ವಾಸ್ತವ್ಯವನ್ನು ಬದಲಿಸುತ್ತಿರುತ್ತಾನೆ ಎಂದು ತಿಳಿಸಲಾಗಿತ್ತು. ಆದರೆ, ಪಾಕಿಸ್ತಾನ ಮಾತ್ರ ದಾವೂದ್ ಇಬ್ರಾಹಿಂ ತನ್ನ ದೇಶದಲ್ಲಿ ಇಲ್ಲ ಎಂದು ವಿಶ್ವಸಂಸ್ಥೆಯಲ್ಲಿ ನಿರಂತರವಾಗಿ ವಾದಿಸುತ್ತಾ ಬಂದಿದೆ. (ಪಿಟಿಐ)

English summary
Three of the nine places cited by India as addresses of underworld don Dawood Ibrahim in Pakistan have been found incorrect by a UN committee, which has removed these from its list.
Please Wait while comments are loading...