ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ್ಯರನ್ನು ಗಡಿಪಾರು ಮಾಡಲು ಸಾಧ್ಯವಿಲ್ಲ: ಯುಕೆ

By Mahesh
|
Google Oneindia Kannada News

ಲಂಡನ್, ಮೇ 11: ಮನಿಲಾಂಡ್ರಿಂಗ್ ಪ್ರಕರಣದ ಆರೋಪಿಯಾಗಿರುವ ಉದ್ಯಮಿ ವಿಜಯ್ ಮಲ್ಯರನ್ನು ಇಂಗ್ಲೆಂಡಿನಿಂದ ಗಡಿಪಾರು ಮಾಡಲು ಸಾಧ್ಯವಿಲ್ಲ ಎಂದು ಬ್ರಿಟಿಷ್ ಸರ್ಕಾರ ಬುಧವಾರ ಪ್ರಕಟಿಸಿದೆ. ಆದರೆ, ಕಾನೂನು ಪ್ರಕಾರ ಪ್ರಕರಣದ ವಿಚಾರಣೆಗೆ ಭಾರತಕ್ಕೆ ಕಳಿಸಿಕೊಡಲು ಅಭ್ಯಂತರವಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಉದ್ಯಮಿ ಮಲ್ಯರನ್ನು ಗಡಿಪಾರು ಮಾಡುವಂತೆ ಯುಕೆ ರಾಯಭಾರಿ ಕಚೇರಿಗೆ ವಿದೇಶಾಂಗ ಸಚಿವಾಲಯ ಪತ್ರ ರವಾನಿಸಿತ್ತು. ಇದಕ್ಕೆ ಉತ್ತರವಾಗಿ ಗಡಿಪಾರು ಸಾಧ್ಯವಿಲ್ಲ ಎಂದು ಯುಕೆ ಸರ್ಕಾರ ಹೇಳಿದೆ. [ಮಲ್ಯ ಮುಂದಿರುವ ನಾಲ್ಕು ಆಯ್ಕೆಗಳು?]

UK refuses deport Mallya, ready to assist in 'extradition'

ಮಲ್ಯ ಅವರು ಮಾರ್ಚ್ 2ರಂದು ಲಂಡನ್​ಗೆ ಹಾರಿದ್ದು, ಮನಿಲಾಂಡ್ರಿಂಗ್, ಬ್ಯಾಂಕ್ ಸಾಲ ಸೇರಿದಂತೆ ಅನೇಕ ಆರ್ಥಿಕ ಅವ್ಯವಹಾರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ವಿಚಾರಣೆಗಾಗಿ ಕೋರ್ಟ್ ಕಳಿಸಿದ ಸಮನ್ಸ್, ನೋಟಿಸ್ ಹಾಗೂ ರೆಡ್ ಕಾರ್ನರ್ ನೋಟಿಸ್ ಗಳಿಗೆ ಮಲ್ಯ ಅವರು ಸರಿಯಾಗಿ ಉತ್ತರಿಸಿಲ್ಲ. [ಮಲ್ಯ ಒಡೆತನದಲ್ಲಿದ್ದ 6 ಕಂಪನಿಗಳ ಸ್ಥಿತಿ ಗತಿ ಏನಾಗಿದೆ?]

ಮನಿ ಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಯ ಅವರ ಪಾಸ್ ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳುವಂತೆ ವಿದೇಶಾಂಗ ಸಚಿವಾಲಯಕ್ಕೆ ಜಾರಿ ನಿರ್ದೇಶನಾಲಯ ಏಪ್ರಿಲ್ 15ರಂದು ಮನವಿ ಸಲ್ಲಿಸಿತ್ತು.ಅದರಂತೆ ಮಲ್ಯ ಅವರ ಪಾಸ್ ಪೋರ್ಟ್ ರದ್ದಾಗಿತ್ತು.

English summary
Liquor baron Vijay Mallya who is embroiled in money laundering charges, remained elusive to India as the United Kingdom has informed the government that they cannot comply with their request to deport him, but are ready to consider the option of Mallya's extradition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X