ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವೂದ್ ಇಬ್ರಾಹಿಂನ 15 ಸಾವಿರ ಕೋಟಿ ಆಸ್ತಿ ವಶಪಡಿಸಿಕೊಂಡ ಯುಎಇ

|
Google Oneindia Kannada News

ಅಬುಧಾಬಿ, ಜನವರಿ 4: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ವಿರುದ್ಧ ತೆಗೆದುಕೊಂಡ ಪ್ರಮುಖ ಕ್ರಮದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಸರಕಾರ ಅತನ ಆಸ್ತಿಯನ್ನು ವಶಪಡಿಸಿಕೊಂಡಿದೆ. ಎಬಿಪಿ ನ್ಯೂಸ್ ನ ಪ್ರಕಾರ, ಯುಎಇ ಸರಕಾರದ ಮೂಲಗಳು ಈ ವಿಷಯವನ್ನು ಖಚಿತಪಡಿಸಿದೆ. ದಾವೂದ್ ಇಬ್ರಾಹಿಂಗೆ ಸೇರಿದ 15 ಸಾವಿರ ಕೋಟಿ ಮೌಲ್ಯದ ಆಸ್ತಿಗಳನ್ನು ಮಂಗಳವಾರ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಇದಕ್ಕೂ ಮುನ್ನ ಗೃಹ ಸಚಿವ ರಾಜ್ ನಾಥ್ ಸಿಂಗ್ ಹೇಳಿಕೆ ನೀಡಿದ್ದರು. ದಾವೂದ್ ಇಬ್ರಾಹಿಂನನ್ನು ಹೆಡೆಮುರಿ ಕಟ್ಟಿ ಭಾರತಕ್ಕೆ ಕರೆತರುವುದಕ್ಕೆ ಸರಕಾರ ಎಲ್ಲ ಪ್ರಯತ್ನ ಮುಂದುವರಿಸಿದೆ ಎಂದು ಹೇಳಿದ್ದರು. ಕಳೆದ ವರ್ಷ ಕೂಡ ಗೃಹ ಸಚಿವರು ಖಚಿತ ಧ್ವನಿಯಲ್ಲಿ ಹೇಳಿದ್ದರು. ಮೋಸ್ಟ್ ವಾಂಟೆಡ್ ಪಾತಕಿ ದಾವೂದ್ ಇಬ್ರಾಹಿಂನನ್ನು ಹಿಡಿದು, ಭಾರತಕ್ಕೆ ಕರೆತರುವುದಾಗಿ ತಿಳಿಸಿದ್ದರು.[ದಾವೂದ್ ಬೇಟೆಗೆ, 'ಡಿ ಕಂಪೆನಿ' ಸರ್ವನಾಶಕ್ಕೆ ಸ್ಪೆಷಲ್ 50 ಟೀಮ್]

Dawood Ibrahim

ಭಯೋತ್ಪಾದಕ ಎಂಬ ಪಟ್ಟ ಹೊಂದಿರುವ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಇದ್ದಾನೆ ಎಂಬುದನ್ನು ಅಮೆರಿಕ ಖಚಿತಪಡಿಸಿತ್ತು. ಎರಡು ದಿನದ ಹಿಂದಷ್ಟೇ ನಿರ್ದೇಶಕ ವಿಶಾಲ್ ಮಿಶ್ರಾ ಹಾಗೂ ನಿರ್ಮಾಪಕ ವಿನೋದ್ ರಮಣಿ ದೂರು ದಾಖಲಿಸಿದ್ದರು. ತಮ್ಮ ಹೊಸ ಸಿನಿಮಾ 'ಕಾಫಿ ವಿಥ್ ಡಿ'ಯಲ್ಲಿ ದಾವೂದ್ ಬಗ್ಗೆ ಇರುವ ತಮಾಷೆ ದೃಶ್ಯವೊಂದನ್ನು ತೆಗೆದುಹಾಕುವಂತೆ ಅವರಿಗೆ ಬೆದರಿಕೆ ಕರೆ ಬಂದಿತ್ತು.[ಬುಲೆಟ್ ಪ್ರೂಫ್ ವಾಹನ ಶಾಪಿಂಗ್ ಮಾಡಿದ ದಾವೂದ್ ಇಬ್ರಾಹಿಂ!]

ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ದಾವೂದ್ ಇಬ್ರಾಹಿಂನ ಬಂಟ ಛೋಟಾ ಶಕೀಲ್ ನಿಂದ ಸಿನಿಮಾ ತಂಡಕ್ಕೆ ಬೆದರಿಕೆ ಕರೆಗಳು ಬಂದಿವೆ.

English summary
In a major action against the underworld don Dawood Ibrahim, the United Arabs Emirates had seized properties of the crime lord. According to an ABP News flash, UAE government sources had confirmed that assets worth Rs 15,000 crore, belonging to Dawood, had been seized.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X