ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಪಾನ್: ಭಾರೀ ಭೂಕಂಪದ ನಂತರ ಸುನಾಮಿ ಎಚ್ಚರಿಕೆ

|
Google Oneindia Kannada News

ಟೊಕೊಯೋ, ಏಪ್ರಿಲ್, 16: ತೀವ್ರ ಭೂಕಂಪಕ್ಕೆ ತುತ್ತಾಗಿರುವ ಜಪಾನ್‌ನ ನೈರುತ್ಯ ಭಾಗಕ್ಕೆ ಇದೀಗ ಸುನಾಮಿ ಭಯ ಎದುರಾಗಿದೆ.

ಶುಕ್ರವಾರ ಮುಂಜಾನೆ ಕ್ಯೂಶು ದ್ವೀಪ ಪ್ರದೇಶದಲ್ಲಿ ಸಂಭವಿಸಿದ 7.0 ತೀವ್ರತೆಯ ಭೂಕಂಪದ ಪರಿಣಾಮ 9 ಮಂದಿ ಸಾವನ್ನಪ್ಪಿದ್ದರು. ಇದೀಗ ಸುನಾಮಿ ಮುನ್ನೆಚ್ಚರಿಕೆಯನ್ನು ಯು ಎಸ್ ಹವಾಮಾನ ಸಂಸ್ಥೆ ನೀಡಿದೆ. [ಮಯನ್ಮಾರ್‌ನಲ್ಲಿ ಪ್ರಬಲ ಭೂಕಂಪ, ನಡುಗಿದ ಕೋಲ್ಕತಾ, ಪಾಟ್ನಾ]

japan

ಭೂಕಂಪದ ನಂತರ ಅನೇಕ ಕಡೆ ಅಗ್ನಿ ಅವಘಡಗಳು ಸಂಭವಿಸಿದ್ದವು. ಸಾವಿರಕ್ಕೂ ಅಧಿಕ ಮಂದಿ ವಸತಿ ಕಳೆದುಕೊಂಡಿದ್ದರು. ಪ್ರಬಲ ಭೂಕಂಪದ ನಂತರ ಸಂಜೆಯಿಂದ 100ಕ್ಕೂ ಅಧಿಕ ಸಣ್ಣ ಸಣ್ಣ ಬಾರಿ ಕಂಪನಗಳಾಗಿವೆ. ಇದೀಗ ಜಪಾನ್ ಹವಾಮಾನ ಇಲಾಖೆ ಸಹ ಭೂಕಂಪದ ಎಚ್ಚರಿಕೆ ನೀಡಿದ್ದು ಆತಂಕ ಹೆಚ್ಚು ಮಾಡಿದೆ.[ಬೆಂಗಳೂರು ಭೂಕಂಪದ ಆತಂಕದಿಂದ ಮುಕ್ತವಲ್ಲ!]

ಕ್ಯೂಶು ದ್ವೀಪದ ಪಶ್ಚಿಮ ಕರಾವಳಿ ಸುನಾಮಿ ಭಯಕ್ಕೆ ಸಿಲುಕಿದೆ. ಭೂಕಂಪದ ಕೇಂದ್ರ ಸಮುದ್ರದ ಒಳಗೆ ಇದ್ದು ಇದೀಗ ಸುನಾಮಿ ಭೀತಿಯನ್ನು ತಂದಿದೆ. ಮೊದಲು ಪಾಕಿಸ್ತಾನ, ಅಪಘಾನಿಸ್ತಾನ ಮತ್ತು ನೇಪಾಳದಲ್ಲಿ ಭೂಕಂಪನವಾಗಿತ್ತು. ಇದಾದ ಮೇಲೆ ಮಯನ್ಮಾರ್ ನಲ್ಲಿ ಸಹ ಭೂಕಂಪನವಾಗಿತ್ತು. ಈ ಕಂಪನದ ಪರಿಣಾಮ ಉತ್ತರ ಭಾರತದ ಕೆಲ ರಾಜ್ಯಗಳು ಕಂಪಿಸಿದ್ದವು

English summary
Total 9 people were confirmed dead on Saturday after a powerful quake measuring 7.0 on the Richter Scale jolted Japan's Kumamoto Prefecture, a media report said. The powerful temblor followed a 6.5-magnitude earthquake that hit the Kyushu region late on Thursday and left nine people dead and over 1,000 people injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X