ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಭಾರತ್ ಮಾತಾ ಕೀ ಜೈ' ಉದ್ಘೋಷದ ನಡುವೆ ಅಮೆರಿಕಾಗೆ ತಲುಪಿದ ಮೋದಿ

By ವಿಕಾಸ್ ನಂಜಪ್ಪ
|
Google Oneindia Kannada News

ವಾಷಿಂಗ್ಟನ್, ಜೂನ್ 25: ಮೂರು ದೇಶಗಳ ಪ್ರವಾಸಕ್ಕೆ ಹೊರಟಿರುವ ಪ್ರಧಾನಿ ನರೇಂದ್ರ ಮೋದಿ ಅಮೆರಿಕಾ ರಾಜಧಾನಿ ವಾಷಿಂಗ್ಟನ್ ತಲುಪಿದ್ದಾರೆ. ಇಂದು ಅಮೆರಿಕಾದ ಜಾಯಿಂಟ್ ಬೇಸ್ ಆಡ್ರೂಸ್ ವಿಮಾನ ನಿಲ್ದಾಣ ತಲುಪಿದ ಮೋದಿಯನ್ನು ಸ್ಥಳೀಯ ಭಾರತೀಯರು ಸ್ವಾಗತಿಸಿದರು. ಈ ವೇಳೆ 'ಮೋದಿ.. ಮೋದಿ' ಮತ್ತು 'ಭಾರತ್ ಮಾತಾ ಕೀ ಜೈ' ಎಂದು ಭಾರತೀಯರು ಕೂಗುತ್ತಿದ್ದುದು ಕಂಡು ಬಂತು.

ಈ ಹಿಂದೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನರೇಂದ್ರ ಮೋದಿಯನ್ನು ಶ್ವೇತ ಭವನಕ್ಕೆ ಆಹ್ವಾನಿಸಿದ್ದರು. ತನ್ನ ನೈಜ ಗೆಳೆಯನ ಜತೆ ಹಲವಾರು ವಿಷಯಗಳನ್ನು ಚರ್ಚೆ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಅವರು ಹೇಳಿದ್ದರು.

ಮೋದಿ ಅಮೆರಿಕಾ ಅಧ್ಯಕ್ಷರನ್ನು ಸೋಮವಾರ ಭೇಟಿಯಾಗಲಿದ್ದಾರೆ. ಇದು ಟ್ರಂಪ್ ಹಾಗೂ ನರೇಂದ್ರ ಮೋದಿ ನಡುವಿನ ಮೊದಲ ಭೇಟಿಯಾಗಿದೆ.

ಮೋದಿ ಮತ್ತು ಟ್ರಂಪ್ ನಡುವೆ ಮುಖಾಮುಖಿ ಮಾತುಕತೆ, ನಂತರ ನಿಯೋಗ ಮಟ್ಟದ ಮಾತುಕತೆಗಳು ನಡೆಯಲಿವೆ. ಇದಾದ ಬಳಿಕ ಔತಣಕೂಟದಲ್ಲಿ ಉಭಯ ನಾಯಕರು ಪಾಲ್ಗೊಳ್ಳಲಿದ್ದಾರೆ.

ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಶ್ವೇತ ಭವನದಲ್ಲಿ ವಿದೇಶಿ ಗಣ್ಯರಿಗೆ ಹಮ್ಮಿಕೊಂಡ ಮೊದಲ ಔತಣಕೂಟ ಇದಾಗಿದೆ.

English summary
Prime Minister Narendra Modi has arrived at the Joint Base Andrews, Washington DC on the second leg of his three nation visit. Ahead of his visit, several Indians had gathered at the Base and chanted, 'Modi Modi' and 'Bharat Mata ki jai.'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X