ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ವಲಸೆ ನೀತಿ : 3 ಲಕ್ಷ ಭಾರತೀಯ ಅಮೆರಿಕನ್ನರಿಗೆ ಕುತ್ತು

By Mahesh
|
Google Oneindia Kannada News

ವಾಷಿಂಗ್ಟನ್, ಫೆಬ್ರವರಿ 23: ಅಮೆರಿಕದಲ್ಲಿ ಅಕ್ರಮ ವಲಸೆಗಾರರನ್ನು ಗಡಿಪಾರು ಮಾಡಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧರಿಸಿದ್ದು ತಿಳಿದಿರಬಹುದು, ಟ್ರಂಪ್ ಅವರ ವಲಸೆ ನೀತಿಯ ಪರಿಣಾಮವಾಗಿ ಸುಮಾರು 3 ಲಕ್ಷ ಭಾರತೀಯ ಅಮೆರಿಕನ್ನರು ಸೇರಿ 11 ಮಿಲಿಯನ್ ಮಂದಿ ಗಂಟು ಮೂಟೆ ಕಟ್ಟಬೇಕಾಗಿದೆ.

ಲಕ್ಷಾಂತರ ಸಂಖ್ಯೆಯಲ್ಲಿ ಅಕ್ರಮ ವಲಸಿಗರ ಗಡಿಪಾರು ಪ್ರಕ್ರಿಯೆಯ ಬಗ್ಗೆ ಪ್ರಾಥಮಿಕ ರೂಪುರೇಷೆ ಸಿದ್ದಗೊಳಿಸಲು ಟ್ರಂಪ್ ಸೂಚಿಸಿದ್ದಾರೆ., ವಲಸೆ ಕಾನೂನು ಜಾರಿಗೊಳಿಸುವ ಕುರಿತಂತೆ ಹೊಸ ಮಾರ್ಗದರ್ಶಿ ಸೂತ್ರವನ್ನು ಜಾರಿಗೊಳಿಸಲಾಗಿದೆ. ಇಲಾಖೆಯು ಇನ್ನು ಮುಂದೆ ಗಡಿಪಾರು ಮಾಡಬಹುದಾದ ವಿದೇಶಿಯರನ್ನು ವರ್ಗ ಅಥವಾ ಗುಂಪುಗಳ ಆಧಾರದಲ್ಲಿ ವಿನಾಯಿತಿಗೆ ಪರಿಗಣಿಸುವುದಿಲ್ಲ ಎಂದು ಭದ್ರತಾ ಇಲಾಖೆ ಕಳುಹಿಸಿರುವ ಕಡ್ಡಾಯ ಜ್ಞಾಪನಾ ಪತ್ರದಲ್ಲಿ ತಿಳಿಸಲಾಗಿದೆ.

Trump's immigration plan will hit 3 lakh Indian-Americans

ವಲಸೆ ನೀತಿ ಉಲ್ಲಂಘಿಸಿದ್ದಾನೆ ಎಂದು ಓರ್ವ ವಿದೇಶಿ ವ್ಯಕ್ತಿಯ ಬಗ್ಗೆ ವಲಸೆ ಅಧಿಕಾರಿಗೆ ನಂಬಲರ್ಹ ಪುರಾವೆ ಸಿಕ್ಕಿದರೆ ಆತನನ್ನು ವಶಕ್ಕೆ ಪಡೆಯಲು ಅಥವಾ ಬಂಧಿಸಲು ಅಧಿಕಾರಿಗೆ ಪೂರ್ಣ ಅಧಿಕಾರವಿದೆ ಎಂದು ಜ್ಞಾಪನ ಪತ್ರ(ಮೆಮೊ)ದಲ್ಲಿ ತಿಳಿಸಲಾಗಿದೆ. ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ಕುರಿತಂತೆ ದೇಶೀಯ ಭದ್ರತಾ ಇಲಾಖೆ ಎರಡು ಕಡ್ಡಾಯ ಮೆಮೊಗಳನ್ನು ಜಾರಿಗೊಳಿಸಿದ್ದು ಇದು ಇತರ ವಿಷಯಗಳ ಜೊತೆಗೆ, ಗಡಿಪಾರು ಪ್ರಕ್ರಿಯೆಯನ್ನು ಇನ್ನಷ್ಟು ಬಿಗಿಗೊಳಿಸಿದೆ.

ವಶಕ್ಕೆ ಪಡೆದುಕೊಳ್ಳಲಾದ ಅಕ್ರಮ ವಿದೇಶಿಯರು ಮುಂದೆ ಮತ್ತೊಮ್ಮೆ ಅಕ್ರಮ ಪ್ರವೇಶಿಸುವ ಅಪಾಯ ಇಲ್ಲ ಎಂದು ಖಚಿತವಾದರೆ ಅವರನ್ನು ಅವರು ಎಲ್ಲಿಂದ ಬಂದರೋ ಅದೇ ರಾಷ್ಟ್ರಕ್ಕೆ ವಾಪಾಸು ಕಳಿಸುವ ಮೂಲಕ , ಸರಕಾರದ ನ್ಯಾಯತೀರ್ಮಾನ ಸಂಪನ್ಮೂಲವನ್ನು ಇತರ ಪ್ರಮುಖ ವಿದೇಶಿಯರತ್ತ ಗಮನ ಹರಿಸಲು ಸಾಧ್ಯವಾಗಿಸಬೇಕು ಎಂದು ಮೆಮೊದಲ್ಲಿ ತಿಳಿಸಲಾಗಿದೆ.

English summary
With US President Donald Trump laying the groundwork for deporting millions of undocumented immigrants, nearly 3 lakh Indian-Americans are likely to be hit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X