ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿರಿಯಾ ವಿರುದ್ಧ ವೈಮಾನಿಕ ದಾಳಿ, 60 ಕ್ಷಿಪಣಿ ಉಡಾಯಿಸಿದ ಅಮೆರಿಕ

ತಾಯಿಯೇ ಮಕ್ಕಳ ಕತ್ತು ಹಿಸುಕಿ ಕೊಂದರೆ ಏನು ಮಾಡಬೇಕು? ಸಿರಿಯಾ ಸರಕಾರ ರಾಸಾಯನಿಕ ಅಸ್ತ್ರ ಬಳಸಿ ಅಲ್ಲಿನ ನಾಗರಿಕರನ್ನು ಕೊಂದಿದೆ. ಆ ಕ್ರಮಕ್ಕೆ ವಿರುದ್ಧವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿರಿಯಾ ಮೇಲಿನ ದಾಳಿಗೆ ಆದೇಶಿಸಿದ್ದಾರೆ

By ವಿಕಾಸ್ ನಂಜಪ್ಪ
|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 7: ನಾಗರಿಕರ ವಿರುದ್ಧ ರಾಸಾಯನಿಕ ಅಸ್ತ್ರ ಬಳಸಿದ್ದ ಸಿರಿಯಾ ಸರಕಾರದ ವಿರುದ್ಧ ಅಮೆರಿಕ ಸೇನಾ ಕಾರ್ಯಾಚರಣೆ ಆರಂಭಿಸಿದೆ. ಸಿರಿಯಾದ ವಾಯು ನೆಲೆ ಮೇಲೆ ಡಜನ್ ಗಟ್ಟಲೆ ಕ್ಷಿಪಣಿ ದಾಳಿ ನಡೆಸಲಾಗಿದೆ. ಡೊನಾಲ್ಡ್ ಟ್ರಂಪ್ ಆದೇಶದ ಪ್ರಕಾರ ಈ ದಾಳಿ ನಡೆದಿದ್ದು, 50ಕ್ಕಿಂತ ಹೆಚ್ಚು ಕ್ಷಿಪಣಿ ಉಡಾಯಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಸಾಯನಿಕ ದಾಳಿ ನಡೆಸಲು ಸಿರಿಯಾ ಸರಕಾರ ಯಾವ ವಾಯು ನೆಲೆಯಿಂದ ಯುದ್ಧ ವಿಮಾನವನ್ನು ಬಳಸಿತೋ ಅದರ ಮೇಲೆ ಕನಿಷ್ಠ 50 ಟೊಮಹಾಕ್ ಕ್ಷಿಪಣಿಗಳನ್ನು ಉಡಾಯಿಸಲಾಗಿದೆ. ರನ್ ವೇ, ಇಂಧನ ಕೇಂದ್ರ ಹಾಗೂ ವಿಮಾನಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ ಎಂದು ಅಮೆರಿಕದ ಸೇನಾ ಮೂಲಗಳು ತಿಳಿಸಿವೆ.[ಸಿರಿಯಾದಲ್ಲಿ ವಿಷಕಾರಿ ಅನಿಲ ದಾಳಿಗೆ 58 ಸಾವು]

Trump blasts Assad's airbase in Syria with 60 Tomahawk cruise missiles

ಪೂರ್ವ ಮೆಡಿಟರೇನಿಯನ್ ನ ಯುದ್ಧ ನೌಕೆಗಳಿಂದ ಕ್ಷಿಪಣಿ ಉಡಾಯಿಸಲಾಗಿದೆ. ಮುಂದಿನ ತೀರ್ಮಾನ ಕೈಗೊಳ್ಳುವವರೆಗೆ ದಾಳಿ ಮುಂದುವರಿಯಲಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಜತೆಗೆ ಔತಣ ಕೂಟದ ಸಭೆ ನಡೆಸುವ ಮುನ್ನ ಅಧ್ಯಕ್ಷ ಟ್ರಂಪ್ ಅಮೆರಿಕದ ರಾಷ್ಟ್ರೀಯ ಭದ್ರತಾ ತಂಡದ ಜತೆ ಸಭೆ ನಡೆಸಿದ್ದಾರೆ. ಅಲ್ಲಿ ಸಿರಿಯಾ ಮೇಲಿನ ದಾಳಿಯ ನಿರ್ಣಯ ಕೈಗೊಳ್ಳಲಾಗಿದೆ. ಟ್ರಂಪ್ ಅಧ್ಯಕ್ಷರಾದ ನಂತರ ನಡೆಯುತ್ತಿರುವ ಮೊದಲ ಸೇನಾ ಕಾರ್ಯಾಚರಣೆ ಇದು.[ಸಿರಿಯಾದಲ್ಲಿ ಕಾರ್ ಬಾಂಬ್ ಸ್ಫೋಟ : ಕನಿಷ್ಠ 14 ಸಾವು]

Trump blasts Assad's airbase in Syria with 60 Tomahawk cruise missiles

ಜತೆಗೆ ಅಮೆರಿಕವು ಸಿರಿಯಾ ನಾಯಕತ್ವದ ವಿರುದ್ಧ ನಡೆಸುತ್ತಿರುವ ಮೊದಲ ನೇರ ಸೇನಾ ಕಾರ್ಯಾಚರಣೆ. 2014ರಿಂದಲೂ ಅಮೆರಿಕವು ಸಿರಿಯಾದಲ್ಲಿ ವಾಯು ದಾಳಿ ನಡೆಸುತ್ತಿದೆ. ಆದರೆ ಅವು ಅಲ್ಲಿನ ಭಯೋತ್ಪಾದಕರ ಗುಂಪುಗಳ ವಿರುದ್ಧವಾಗಿತ್ತು. ಇದು ಸಿರಿಯಾ ಸರಕಾರದ ವಿರುದ್ಧದ ಮೊದಲ ದಾಳಿ.

"ಸಿರಿಯಾ ತನ್ನ ಮಿತಿಯನ್ನು ಮೀರಿದೆ. ಇಂತಹ ಸನ್ನಿವೇಶದಲ್ಲಿ ಸ್ಪಂದಿಸುವುದು ನಮ್ಮ ಜವಾಬ್ದಾರಿ" ಎಂದು ರಾಸಾಯನಿಕ ಅಸ್ತ್ರದ ದಾಳಿ ನಂತರ ಟ್ರಂಪ್ ಹೇಳಿದ್ದರು. ಅಸಾದ್ ಹಾಗೂ ಸಿರಿಯಾ ಬಗ್ಗೆ ನನಗಿದ್ದ ಅಭಿಪ್ರಾಯ ಬದಲಾಗಿದೆ ಎಂದು ಕೂಡ ಹೇಳಿದ್ದರು.

ರಕ್ತಪಿಪಾಸು ಕಸಾಯಿಖಾನೆಯಂತಿರುವ ಸಿರಿಯಾದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಅಮೆರಿಕ ಜತೆಗೆ ಇತರ ದೇಶಗಳು ಕೈ ಜೋಡಿಸಬೇಕು ಎಂದು ಟ್ರಂಪ್ ಮನವಿ ಮಾಡಿದ್ದಾರೆ.

English summary
The United States of America has launched a military strike on the Syrian government in retaliation for the chemical weapon attack on civilians earlier this week. Officials said that the US launched dozens of cruise missiles on on an airbase in Syria.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X