ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಡನ್ ನಲ್ಲಿ ಬಸವೇಶ್ವರ ಪ್ರತಿಮೆಗೆ ಗೌರವ ಸಲ್ಲಿಸಿದ ಗೃಹಸಚಿವ ಪರಮೇಶ್ವರ

|
Google Oneindia Kannada News

ಲಂಡನ್, ಮಾರ್ಚ್ 13: ರಾಜ್ಯದ ಗೃಹಸಚಿವ ಡಾ.ಜಿ.ಪರಮೇಶ್ವರ ಮಾರ್ಚ್ 12ರ ಭಾನುವಾರ ಲಂಡನ್ ನ ಥೇಮ್ಸ್ ನದಿ ತೀರಲ್ಲಿರುವ ಬಸವೇಶ್ವರ ಪ್ರತಿಮೆ ಹಾಗೂ ಅಂಬೇಡ್ಕರ್ ಉಳಿದುಕೊಂಡಿದ್ದ ಮನೆಗೆ ತೆರಳಿ ಗೌರವ ಸಲ್ಲಿಸಿದರು. ಈ ಕಾರ್ಯಕ್ರಮವನ್ನು ಯುಕೆನಲ್ಲಿರುವ ಬಸವೇಶ್ವರ ಫೌಂಡೇಷನ್ ಆಯೋಜಿಸಿತ್ತು.

ಅಲ್ಲಿನ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್, ಕನ್ನಡ ಒಕ್ಕೂಟಗಳ ಅಧ್ಯಕ್ಷ ರಮೇಶ್ ಬಾಬು ಬ್ರಿಟಿಷ್ ಭಾರತೀಯ ಸಮುದಾಯದ ಪರವಾಗಿ ಪರಮೇಶ್ವರ ಅವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ವಿವಿಧ ಕನ್ನಡ ಒಕ್ಕೂಟಗಳ ಸದಸ್ಯರು ಭಾಗವಹಿಸಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಆಯೋಜಿಸಿದ ಕನ್ನಡ ಕಲಿಕೆ ಕಾರ್ಯಕ್ರಮ ಪೂರ್ಣಗೊಳಿಸಿದವರಿಗೆ ಪರಮೇಶ್ವರ ಪ್ರಮಾಣ ಪತ್ರ ವಿತರಿಸಿದರು.

Tribute to Basaveshwara statue & Ambedkar House in London by Home Minister Dr G Parameshwara

ಬಸವೇಶ್ವರ ಹಾಗೂ ಅಂಬೇಡ್ಕರ್ ಇಬ್ಬರೂ ಭಾರತೀಯ ಸಮಾಜದಲ್ಲಿ ಜಾತಿ ನಿರ್ಮೂಲನೆ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದವರು. ದುರದೃಷ್ಟ ಎಂದರೆ ಭಾರತದಲ್ಲಿ ಈಗಲೂ ಜಾತಿ, ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಒಡಕಿದೆ. ಅದು ಕೊನೆಯಾಗಬೇಕು ಎಂದು ಡಾ.ಪಾಟೀಲ್ ಹೇಳಿದರು.[ಲಂಡನ್: ಬಸವಣ್ಣನ ಪ್ರತಿಮೆಗೆ ಮಹಾರಾಷ್ಟ್ರ ಮಂತ್ರಿ ಪುಷ್ಪ ನಮನ]

Tribute to Basaveshwara statue & Ambedkar House in London by Home Minister Dr G Parameshwara

ಬಸವೇಶ್ವರರ ಪ್ರತಿಮೆಗೆ ಗೌರವ ಸಲ್ಲಿಸಿದ ನಂತರ ಮಾತನಾಡಿದ ಸಚಿವ ಪರಮೇಶ್ವರ, ಈ ಪ್ರತಿಮೆಯನ್ನು ಹಾಗೂ ಅಂಬೇಡ್ಕರ್ ವಾಸವಿದ್ದ ಮನೆಯನ್ನು ನೋಡುವುದಕ್ಕೆ ಹೆಮ್ಮೆ ಅನಿಸುತ್ತದೆ ಎಂದು ಹೇಳಿದರು.

English summary
Home Minister of Karnataka Dr G Parameshwara paid tribute to Basaveshwara statue and Ambedkar house in London on Sunday, March 12th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X