ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರ ಸುದ್ದಿ: ಬ್ರಿಸ್ಬೇನ್ ನಲ್ಲಿ ಮೋದಿ ಬಾಂಧವ್ಯ, ಬೆಸುಗೆ

By Mahesh
|
Google Oneindia Kannada News

ಬ್ರಿಸ್ಬೇನ್, ನ.16: ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ವಿಶೇಷ ಬಾಂಧವ್ಯ ಬೆಸುಗೆ ಇದೆ. ಉಭಯ ದೇಶಗಳ ಬಾಂಧವ್ಯ ವೃದ್ಧಿಗೆ ರಾಜ್ಯಗಳು, ನಗರಗಳ ನಡುವೆ ಅಂತಾರಾಷ್ಟ್ರೀಯ ಒಪ್ಪಂದಗಳು ಏರ್ಪಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಭಿಪ್ರಾಯಪಟ್ಟರು. ಭಾರತದ ಸಂಶೋಧನಾ ಹಾಗೂ ಸಂಪನ್ಮೂಲ ಅಭಿವೃದ್ಧಿಗೆ ಕ್ವೀನ್ಸ್ ಲ್ಯಾಂಡ್ ಕೊಡುಗೆಯನ್ನು ಮೋದಿ ಸ್ಮರಿಸಿದರು.

ಆಸ್ಟ್ರೇಲಿಯಾದ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬ್ರಿಸ್ಬೇನ್‌ನಲ್ಲಿ ಮಾತನಾಡುತ್ತಾ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ವೀನ್ಸ್ ಲ್ಯಾಂಡ್ ಬೆಳವಣಿಗೆ ಮಾದರಿಯಾಗಿದೆ. ಹೈದರಾಬಾದ್ ಗೆ ಸೈಬರಾಬಾದ್ ಎಂಬ ಹೆಸರಿದೆ ಎರಡು ನಗರಗಳು ಸೋದರ ಸಂಬಂಧ ಹೊಂದುವುದು ಅವಶ್ಯಕ ಎಂದರು.

ಇದಕ್ಕೂ ಮುನ್ನ ರೋಮಾ ಸ್ಟ್ರೀಟ್, ಪಾರ್ಕ್ ಲ್ಯಾಂಡ್ ನಲ್ಲಿ ಮಹಾತ್ಮಾ ಗಾಂಧೀಜಿ ಪ್ರತಿಮೆಯನ್ನು ಅನಾವರಣಗೊಳಿಸಿದರು. ಜಿ-20 ಶೃಂಗ ಸಭೆಯಲ್ಲಿ ಭಾಗವಹಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ನೇರವಾಗಿ ರೋಮ್ ಸ್ಟ್ರೀಟ್ ಪಾರ್ಕ್‌ಲ್ಯಾಂಡನಲ್ಲಿ ಗಾಂಧಿ ಪ್ರತಿಮೆಯನ್ನು ಅನಾವರಣಗೊಳಿಸಲು ಆಗಮಿಸಿದರು. ಬ್ರಿಸ್ಬೇನ್ ನಲ್ಲಿ ಮೋದಿ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿತು. ಬ್ರಿಸ್ಬೇನ್ ನಲ್ಲಿ ಮೋದಿ ಮೋಡಿ ಚಿತ್ರಗಳು ಮುಂದಿವೆ

ಗಾಂಧಿ ಪ್ರತಿಮೆ ಅನಾವರಣಕ್ಕೆ ಬಂದ ಮೋದಿ

ಗಾಂಧಿ ಪ್ರತಿಮೆ ಅನಾವರಣಕ್ಕೆ ಬಂದ ಮೋದಿ

ಆಸ್ಟ್ರೇಲಿಯಾದಲ್ಲಿ ಪ್ರವಾಸದಲ್ಲಿ ಇದು ಮರೆಯಲಾಗದ ಕ್ಷಣ. ಗಾಂಧಿ ಪ್ರತಿಮೆ ನಿರ್ಮಿಸಲು ಅವಕಾಶ ನೀಡಿದ್ದಕ್ಕೆ ಇಲ್ಲಿನ ಅಧಿಕಾರಿಗಳಿಗೆ ನನ್ನ ಅಭಿನಂದನೆ ಎಂದರು

ಗಾಂಧಿ ತತ್ವ ಇಂದಿಗೂ ಪ್ರಸ್ತುತ ಹೇಗೆ?

ಗಾಂಧಿ ತತ್ವ ಇಂದಿಗೂ ಪ್ರಸ್ತುತ ಹೇಗೆ?

ಗಾಂಧಿ ಪ್ರಕೃತಿಯ ಪ್ರೇಮಿಯಾಗಿದ್ದರು. ಅದೇ ರೀತಿ ಪ್ರಕೃತಿಯ ರಕ್ಷಣೆಗೆ ಮುಂದಾಗಿದ್ದರು. ನೀರನ್ನು ವ್ಯರ್ಥ ಮಾಡಬಾರದು ಎಂದು ಗಾಂಧಿ ಕರೆ ನೀಡಿದ್ದರು. ಗಾಂಧಿಯವರ ಈ ನಡೆಯನ್ನು ನಾವು ಅನುಸರಿಸಿ, ಪ್ರಕೃತಿಯನ್ನು ರಕ್ಷಿಸಬೇಕು. ಜಾಗತಿಕ ತಾಪಮಾನ ಹೆಚ್ಚಳ ತಗ್ಗಿಸಬೇಕಿದೆ ಎಂದು ಮೋದಿ ಹೇಳಿದರು.

ಪ್ರಧಾನಿಯಾದ ಮೇಲೆ ಗಾಂಧಿವಾದಿಯಾಗಿಲ್ಲ

ಪ್ರಧಾನಿಯಾದ ಮೇಲೆ ಗಾಂಧಿವಾದಿಯಾಗಿಲ್ಲ

ನಾನು ಪ್ರಧಾನಿಯಾದ ಮೇಲೆ ಗಾಂಧಿವಾದಿಯಾಗಿಲ್ಲ, ನಾನು ಸಿಎಂ ಆಗುವುದಕ್ಕೂ ಮುಂಚಿತವಾಗಿ ಗಾಂಧಿ ತತ್ವಗಳನ್ನು ಅನುಸರಿಸುತ್ತಾ ಬಂದಿದ್ದೇನೆ, ಪ್ರಧಾನಿಯಾದ ಬಳಿಕ ಗಾಂಧಿ ಪರ ಚಿಂತನೆ ಆರಂಭಿಸಿಲ್ಲ ಎಂದರು. ಮೊದಲೇ ಹೇಳಿದಂತೆ ಜಾಗತಿಕ ತಾಪಮಾನ ನಿಯಂತ್ರಣ, ಭಯೋತ್ಪಾದನೆ ದಮನಕ್ಕೆ ಗಾಂಧಿ ವಿಚಾರಧಾರೆ ನಮಗೆ ಮಾರ್ಗದರ್ಶನ ನೀಡಬಲ್ಲದು

ಮೋದಿ ಕನಸು ನನಸಾಗಿದೆ

ಮೋದಿ ಕನಸು ನನಸಾಗಿದೆ

1999ರಲ್ಲಿ ಮೋದಿ ಅವರು ಬಿಜೆಪಿ ಕಾರ್ಯಕರ್ತರಾಗಿದ್ದಾಗ ಆಸ್ಟ್ರೇಲಿಯಾದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಬೇಕು ಎಂಬ ಆಶಯ ವ್ಯಕ್ತಪಡಿಸಿದ್ದರು. ಇಂದು ಆ ಕನಸು ನನಸಾಗಿದೆ ಎಂದು ಸ್ಥಳೀಯ ಮೇಯರ್ ಹೇಳಿದ್ದಾರೆ

ಮೋದಿ ಅವರಿಗೆ ಸಿಕ್ಕ ಸ್ವಾಗತ

ಮೋದಿ ಅವರಿಗೆ ಸಿಕ್ಕ ಸ್ವಾಗತ

ಬ್ರಿಸ್ಬೇನ್ ಗೆ ಆಗಮಿಸಿದ ಪ್ರಧನಿ ಮೋದಿ ಅವರಿಗೆ ಸಿಕ್ಕ ಸ್ವಾಗತದ ಪರಿ ಹೀಗಿತ್ತು

ಆಸ್ಟ್ರೇಲಿಯಾದ ಸಾಂಪ್ರದಾಯಿಕ ನೃತ್ಯ ವೀಕ್ಷಣೆ

ಆಸ್ಟ್ರೇಲಿಯಾದ ಸಾಂಪ್ರದಾಯಿಕ ನೃತ್ಯ ವೀಕ್ಷಣೆ

ಬ್ರಿಸ್ಬೇನ್ ನ ಸಿಟಿ ಹಾಲ್ ನಲ್ಲಿ ಆಸ್ಟ್ರೇಲಿಯಾದ ಸಾಂಪ್ರದಾಯಿಕ ನೃತ್ಯ ವೀಕ್ಷಿಸಿದ ಪ್ರಧಾನಿ ಮೋದಿ, ಕ್ಯಾಂಪ್ ಬೆಲ್ ನ್ಯೂಮನ್, ಮೇಯರ್ ಆಫ್ ಬ್ರಿಸ್ಬೇನ್ ಹಾಗೂ ಗ್ರಹಾಂ ಕ್ವಿರ್ಕ್PTI Photo by Kamal Singh

ಸಿಟಿ ಹಾಲ್ ನಲ್ಲಿ ಸಾಂಸ್ಕೃತಿಕ ಕಲೆ ಅನಾವರಣ

ಮೋದಿ ಅವರ ಸಮ್ಮುಖದಲ್ಲಿ ಸಿಟಿ ಹಾಲ್ ನಲ್ಲಿ ಸಾಂಸ್ಕೃತಿಕ ಕಲೆಗಳು ಅನಾವರಣಗೊಂಡಿತು

ತ್ರಿವರ್ಣ ಧ್ವಜ ಹಿಡಿದು ಮೋದಿ ಜಪ

ತ್ರಿವರ್ಣ ಧ್ವಜ ಹಿಡಿದು ಮೋದಿ ಜಪ

ಬ್ರಿಸ್ಬೇನ್ ನಲ್ಲಿ ಭಾರತದ ತ್ರಿವರ್ಣ ಧ್ವಜ ಹಿಡಿದು ಮೋದಿ ಜಪ ಮಾಡಿದ ಆಸ್ಟ್ರೇಲಿಯಾದ ಅನಿವಾಸಿ ಭಾರತೀಯರು

ಸಿವಿಕ್ ರಿಷಪ್ಶನ್, ಸಿಟಿ ಹಾಲ್ ನಲ್ಲಿ

ಸಿವಿಕ್ ರಿಷಪ್ಶನ್, ಸಿಟಿ ಹಾಲ್ ನಲ್ಲಿ

ಬ್ರಿಸ್ಬೇನ್ ನ ಸಿವಿಕ್ ರಿಷಪ್ಶನ್, ಸಿಟಿ ಹಾಲ್ ನಲ್ಲಿ ಮೋದಿ ಅವರ ಭಾಷಣದ ಮೋಡಿ ನಂತರದ ದೃಶ್ಯ. PTI Photo / PIB

ಜಿ 20 ಶೃಂಗಸಭೆಯಲ್ಲಿ ಗಮನ ಸೆಳೆದ ಚಿತ್ರ

ಜಿ 20 ಶೃಂಗಸಭೆಯಲ್ಲಿ ಗಮನ ಸೆಳೆದ ಚಿತ್ರ

ಜಿ 20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಯುಎಸ್ ಅಧ್ಯಕ್ಷ ಬರಾಕ್ ಒಬಾಮಾ ಒಟ್ಟಿಗೆ ಇರುವ ಚಿತ್ರPTI Photo / Twitter

English summary
Highlighting that India and Australia share a "special bond", Prime Minister Narendra Modi on Sunday said relations between countries can prosper fully if states and cities are involved in international engagements.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X