ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಲವೇ ಗಂಟೆಗಳಲ್ಲಿ ಒಡೆಯಲಿದೆಯೇ ಕ್ಯಾಲಿಫೋರ್ನಿಯಾ ಅಣೆಕಟ್ಟು?

ಮಿತಿಮೀರಿದ ಪ್ರವಾಹದ ಹಿನ್ನೆಲೆಯಲ್ಲಿ ಯಾವುದೇ ಕ್ಷಣದಲ್ಲಿ ಅಣೆಕಟ್ಟು ಒಡೆಯುವ ಸಾಧ್ಯತೆ ಇರುವುದರಿಂದ ಸರ್ಕಾರ ಸುತ್ತಲಿನ ನಾಗರಿಕರನ್ನು ಬೇರೆಡೆಗೆ ಸ್ಥಳಾಂತರಗೊಳ್ಳಲು ಸೂಚಿಸಿದೆ.

|
Google Oneindia Kannada News

ಕ್ಯಾಲಿಫೋರ್ನಿಯಾ, ಫೆಬ್ರವರಿ 13: ಅಮೆರಿಕದ ಅತಿ ದೊಡ್ಡ ಅಣೆಕಟ್ಟು ಎಂದೇ ಖ್ಯಾತಿಗಳಿಸಿರುವ ಉತ್ತರ ಕ್ಯಾಲಿಫೋರ್ನಿಯಾದ ಒರೊವಿಲ್ಲೆ ಅಣೆಕಟ್ಟು ಒಡೆಯುವ ಹಂತಕ್ಕೆ ತಲುಪಿದ್ದು, ಸುತ್ತಮುತ್ತಲಿನ ಪ್ರದೇಶಗಳ ಜನರನ್ನು ಸುರಕ್ಷಾ ಸ್ಥಳಗಳಿಗೆ ಸಾಗಿಸುವ ಕೆಲಸ ಭರದಿಂದ ಸಾಗಿದೆ.

ಕ್ಯಾಲಿಫೋರ್ನಿಯಾ ಜಲ ಸಂಪನ್ಮೂಲ ಇಲಾಖೆಯ ಪ್ರಕಾರ, ಇನ್ನು ಕೆಲವೇ ಗಂಟೆಗಳಲ್ಲಿ ಅಣೆಕಟ್ಟು ಒಡೆಯುವ ಸಂಭವ ಹೆಚ್ಚು ಎಂದು ಹೇಳಿರುವುದು ಜನರನ್ನು ಭಯಭೀತರನ್ನಾಗಿಸಿದೆ.[ಕ್ಯಾಲಿಫೋರ್ನಿಯಾದಲ್ಲಿ ತೆಲಂಗಾಣ ಯುವಕನ ಹತ್ಯೆ]

Thousands asked to evacuate their homes as tallest dam in US suffers damage

ಮಿತಿಮೀರಿದ ಪ್ರವಾಹದಿಂದಾಗಿ, ಅಣೆಕಟ್ಟೆಯ ಮೇಲೆ ಒತ್ತಡ ಹೆಚ್ಚಾಗಿರುವುದರಿಂದ ಅಣೆಕಟ್ಟು ಕೆಳಭಾಗದ ಅಲ್ಲಲ್ಲಿ ಬಿರುಕುಬಿಟ್ಟಿದ್ದು, ಯಾವುದೇ ಕ್ಷಣದಲ್ಲಿ ಅಣೆಕಟ್ಟು ಕುಸಿದುಬೀಳಬಹುದಾದ ಭೀತಿ ಸಂಭವಿಸಿದೆ. ಹಾಗಾಗಿ, ಕ್ಯಾಲಿಫೋರ್ನಿಯಾ ಸರ್ಕಾರದ ಜಲ ಸಂಪನ್ಮೂಲ ಇಲಾಖೆಯು ಸುತ್ತಲಿನ ಪ್ರದೇಶದ ಜನರಿಗೆ ಕೂಡಲೇ ಸ್ಥಳ ತೆರವುಗೊಳಿಸುವಂತೆ ತಾಕೀತು ಮಾಡಿದೆ.

ಯಾವುದೀ ಅಣೆಕಟ್ಟು?: ಒರೊವಿಲ್ಲೆ ಅಣೆಕಟ್ಟನ್ನು ಉತ್ತರ ಕ್ಯಾಲಿಫೋರ್ನಿಯಾದ ಫೆದರ್ ನದಿಗೆ ಕಟ್ಟಲಾಗಿದೆ. ಇತರ ಎತ್ತರ 770 ಅಡಿ (225 ಮೀಟರ್) ಎತ್ತರವಿದೆ. 1961ರಲ್ಲಿ ಈ ಅಣೆಕಟ್ಟಿನ ನಿರ್ಮಾಣ ಆರಂಭವಾಗಿತ್ತು. 1968ರಲ್ಲಿ ಇದರ ನಿರ್ಮಾಣ ಪೂರ್ಣಗೊಂಡು ಉದ್ಘಾಟನೆಗೊಂಡಿತ್ತು.

English summary
Thousands of residents in northern California were asked to evacuate their homes on Sunday evening Oroville Dam suffered damage posing threat of due to flood waters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X