ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ವಾರಕ್ಕೆ 'ನಮಸ್ತೆ ಒಬಾಮ' ಎಂದ ಶ್ವೇತ ಭವನ

By Kiran B Hegde
|
Google Oneindia Kannada News

ವಾಷಿಂಗ್ಟನ್, ಜ. 31: ಬರಾಕ್ ಒಬಾಮ ಭಾರತಕ್ಕೆ ನೀಡಿದ ಮೂರು ದಿನಗಳ ಭೇಟಿಯ ಪ್ರತಿ ಕ್ಷಣವನ್ನು ಸಮಸ್ತ ಭಾರತೀಯರು ಕುತೂಹಲ ಹಾಗೂ ನಿರೀಕ್ಷೆಯಿಂದ ಗಮನಿಸಿದ್ದರು. ಮೂರನೇ ದಿನ ಟಾಟಾ ಹೇಳುವಾಗ ಅತಿಥಿ ಸತ್ಕಾರವನ್ನು ಒಬಾಮ ಕೊಂಡಾಡಿದ್ದರು. ಈಗ ಅಮೆರಿಕ ಅಧ್ಯಕ್ಷರ ಅಧಿಕೃತ ಗೃಹ ಕಚೇರಿ ಶ್ವೇತ ಭವನ ಕೂಡ ಬರಾಕ್ ಪ್ರವಾಸಕ್ಕೆ ಬಹುಪರಾಕ್ ಎಂದಿದೆ.

ಬರಾಕ್ ಒಬಾಮ ಅವರು ಜ. 23ರಿಂದ 29ರ ವರೆಗೆ ಹಲವು ಪ್ರಮುಖ ಕಾರ್ಯಗಳನ್ನು ನಿರ್ವಹಿಸಿದ್ದಾರೆ. ಆದ್ದರಿಂದ ಈ ವಾರಕ್ಕೆ 'ನಮಸ್ತೆ ಒಬಾಮ' ಎಂಬ ಹೆಸರಿಟ್ಟು ಶ್ವೇತ ಭವನ ಶ್ಲಾಘಿಸಿದೆ.

obama

ಈ ಕುರಿತು ಶ್ವೇತ ಭವನದ ಅಧಿಕೃತ ಬ್ಲಾಗ್ ನಲ್ಲಿ ಪ್ರಕಟಿಸಿರುವ ವಿಡಿಯೋದಲ್ಲಿ ಹೇಳಲಾಗಿದೆ. 5.28 ನಿಮಿಷಗಳ ಈ ವಿಡಿಯೋದಲ್ಲಿ ಮಾತನಾಡಿರುವುದು ಶ್ವೇತ ಭವನದ ಅಧಿಕಾರಿ ಆಡಮ್ ಗಾರ್ಬರ್, "ಜ. 23ರಿಂದ ಜ. 29ರ ವರೆಗಿನ ದಿನವನ್ನು ನಮಸ್ತೆ ಒಬಾಮ ಎಂದು ಘೋಷಿಸಿದ್ದೇವೆ" ಎಂದು ಹೇಳಿದ್ದಾರೆ.

ಈ ವಿಡಿಯೋದಲ್ಲಿ ಒಬಾಮ ಅವರು ಭಾರತದಲ್ಲಿ ಪ್ರೇಕ್ಷಕರಿಗೆ 'ನಮಸ್ತೆ' ಎಂದು ಹೇಳಿದ್ದನ್ನು ದಾಖಲಿಸಲಾಗಿದೆ. ನಂತರ ವಿದೇಶಿ ವಕ್ತಾರ ಕಲ್ ಪೆನ್ ಅವರು ಒಬಾಮ ಅವರ ಭಾರತ ಪ್ರವಾಸದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ಈ ವಾರ ಬರಾಕ್ ಒಬಾಮ ಅವರು ಭಾರತಕ್ಕೆ ಅಧಿಕಾರಾವಧಿಯಲ್ಲಿ ಎರಡನೇ ಬಾರಿ ಭೇಟಿ ನೀಡಿದ ಅಮೆರಿಕದ ಪ್ರಥಮ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನಂತರ ಒಬಾಮ ಮತ್ತು ಅವರ ಪತ್ನಿ ಸೌದಿ ಅರೇಬಿಯಾಕ್ಕೆ ತೆರಳಿ ದಿವಂಗತ ರಾಜನಿಗೆ ಗೌರವ ಸಮರ್ಪಿಸಿದ್ದಾರೆ. ವಾಪಸ್ ಬಂದು ಅಮೆರಿಕದ ಮೇಯರ್‌ಗಳ ಸಭೆ ನಡೆಸಿದರು. ಜೊತೆಗೆ ಸೇವೆಯಿಂದ ನಿವೃತ್ತರಾದ ರಕ್ಷಣಾ ಕಾರ್ಯದರ್ಶಿ ಚುಕ್ ಹೇಗಲ್ ಅವರನ್ನು ಸನ್ಮಾನಿಸಿದರು" ಎಂದು ಗಾರ್ಬರ್ ವಿಡಿಯೋದಲ್ಲಿ ಹೇಳಿದ್ದಾರೆ.

English summary
The White House has described this week as "Namaste Obama" for the successful visit of President Barack Obama to India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X