ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊನೆಗೂ ಪತ್ತೆಯಾಯ್ತು ಏಲಿಯನ್ಸ್ ಪುರಾವೆ: NASA ಹೊಸ ಡಿಸ್ಕವರಿ

ಈವರೆಗೆ ಅನ್ಯಗ್ರಹ ಜೀವಿಯನ್ನು ಕೇವಲ ತನ್ನ ಊಹಾತ್ಮಕ ದೃಷ್ಟಿಕೋನದಲ್ಲೇ ರಚನೆ ಮಾಡಿಕೊಂಡಿದ್ದ ಮನುಷ್ಯ ಇನ್ನು ಕೆಲವೇ ವರ್ಷಗಳಲ್ಲಿ ಅವುಗಳ ವಾಸಸ್ಥಾನಕ್ಕೂ ಹೋಗಿಬರುವಂತಾಗುತ್ತದೇನೋ... ಕಾದು ನೋಡಬೇಕು.

|
Google Oneindia Kannada News

ಅನ್ಯಗ್ರಹ ಜೀವಿಗಳ ಹುಡುಕಾಟ ಕೇವಲ ಇಂದು ನೆನ್ನೆಯದಲ್ಲ. ಅದು ಮನುಷ್ಯನ ಮನೋವಿಕಾಸದಷ್ಟೇ ಹಳೆಯ ಥಿಯರಿ ಅಥವಾ ಪರಿಕಲ್ಪನೆ.

ಆದರೆ, ಈ ಪರಿಕಲ್ಪನೆಗಳಿಗೆ ಈಗ ಜೀವ ಬಂದಿದೆ. ಶನಿಗ್ರಹದ ಚಂದ್ರನಲ್ಲಿ ಜೀವಿಗಳ ಇರುವಿಕೆಯನ್ನು ನಾಸಾ (ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಪತ್ತೆ ಹಚ್ಚಿದೆ. ಈ ಬಗ್ಗೆ ಶೀಘ್ರದಲ್ಲೇ ಮತ್ತಷ್ಟು ಸಿಗಬಹುದೆಂದು ನಾಸಾ ಹೇಳಿದೆ.

ಅದೇನೇ ಇರಲಿ. ಈವರೆಗೆ ಅನ್ಯಗ್ರಹ ಜೀವಿಯನ್ನು ಕೇವಲ ತನ್ನ ಊಹಾತ್ಮಕ ದೃಷ್ಟಿಕೋನದಲ್ಲೇ ರಚನೆ ಮಾಡಿಕೊಂಡಿದ್ದ ಮನುಷ್ಯ ಇನ್ನು ಕೆಲವೇ ವರ್ಷಗಳಲ್ಲಿ ಅವುಗಳ ವಾಸಸ್ಥಾನಕ್ಕೂ ಹೋಗಿಬರುವಂತಾಗುತ್ತದೇನೋ... ಕಾದು ನೋಡಬೇಕು.

ಆದರೆ, ಈವರೆಗೆ ಮನುಷ್ಯ ಕಲ್ಪಿಸಿಕೊಂಡಿದ್ದ ಏಲಿಯನ್ಸ್ ಪರಿಕಲ್ಪನೆ ಮಾತ್ರ ವರ್ಣನಾತೀತ. ಕೇವಲ ಹಾರುವ ತಟ್ಟೆಗಳು, ವಿಚಿತ್ರ ಬೆಳಕು, ಆಗಸದಲ್ಲಿ ಅರೆಕ್ಷಣದಲ್ಲಿ ಕಂಡು ಮಾಯವಾದ ಭೌತಿಕ ವಸ್ತು- ಇಂಥ ಮಾಹಿತಿಗಳನ್ನು ಕಲೆ ಹಾಕಿ ಈ ಭೂಮಂಡಲದ ಆಚೆಗೆ, ಅತಿ ಆಚೆಗೆ, ಲಕ್ಷೋಪಲಕ್ಷ ಜ್ಯೋತಿವರ್ಷಗಳಷ್ಟು ದೂರದಲ್ಲಿ ಮಾನವನಿಗೇ ಸವಾಲೆಸೆಯುವ ಜೀವಿಗಳಿದ್ದಾರೆ ಎಂಬ ನಿರ್ಧಾರಕ್ಕೆ ಬಂದಿದ್ದ.

ತನ್ನ ಮನಸ್ಸಿನಲ್ಲೇ ಹಾಗಿರಬಹುದು, ಹೀಗಿರಬಹುದು ಎಂದೆಲ್ಲಾ ಏಲಿಯನ್ಸ್ ಗಳ ಭಾವಚಿತ್ರವನ್ನು ತನ್ನ ಮನಸ್ಸಿನ ಗೋಡೆಯ ಮೇಲೆ ಗೀಚಿಕೊಂಡಿದ್ದ.

ಆ ಅನ್ಯಗ್ರಹ ಜೀವಿಗಳು ನೋಡಲು ಮನುಷ್ಯನಂತಿರದೆ ಮತ್ಯಾವುದೋ ಆಕಾರದಲ್ಲಿರಬಹುದು. ಮನುಷ್ಯನನ್ನು ಕಂಡು ಚಕಿತಗೊಂಡಿರಬಹುದು. ಹಾಗಾಗಿಯೇ, ಮನುಷ್ಯನನ್ನು, ಭೂಮಿಯನ್ನು ಅಭ್ಯಸಿಸಲು ಆಗಾಗ ಭೂಮಿಗೆ ಬರುತ್ತಿರಬಹುದು. ಇವೇ ಮುಂತಾದ ಕಪೋಲಕಲ್ಪಿತ ಊಹಾಲೋಕದಲ್ಲೇ ತಿರುಗಾಡುತ್ತಿದ್ದ ಮಾನವನ ಹುಡುಕಾಟಕ್ಕೆ ಈಗ ಸ್ಪಷ್ಟತೆ ಸಿಕ್ಕಂತಾಗಿದೆ.

ಹಾಗಾಗರೆ, ಆ ಪುರಾವೆ ಏನು? ಈ ಪರಾವೆ ನಾಸಾಕ್ಕೆ ಹೇಗೆ ಸಿಕ್ಕಿತು? ಪುರಾವೆ ಹಿಂದೆ ಬಿದ್ದಿರುವ ವಿಜ್ಞಾನಿಗಳ ಮುಂದಿರುವ ಹಾದಿ ಯಾವುದು? ಇವೇ ಮುಂತಾದ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.(ಚಿತ್ರ ಕೃಪೆ: ಅಂತರ್ಜಾಲ)

ಶನಿಗ್ರಹದ ಉಪಗ್ರಹದಲ್ಲಿ ಸಿಕ್ಕಿದ ಕುರುಹು

ಶನಿಗ್ರಹದ ಉಪಗ್ರಹದಲ್ಲಿ ಸಿಕ್ಕಿದ ಕುರುಹು

ಕೆಲವಾರು ವರ್ಷಗಳ ಹಿಂದಿನಿಂದಲೂ ಖಗೋಳ ವಿಜ್ಞಾನಿಗಳು ಶನಿಗ್ರಹದ ಹಿಂದೆ ಬಿದ್ದಿರುವುದು ನಮಗೆಲ್ಲಾ ಗೊತ್ತಿದೆ. ಈ ಶನಿಗ್ರಹದ ಅಧ್ಯಯನಕ್ಕಾಗಿಯೇ ನಾಸಾ ಸಂಸ್ಥೆಯು ಕ್ಯಾಸಿನಿ ಎಂಬ ಉಪಗ್ರಹವನ್ನು ಕೆಲ ವರ್ಷಗಳ ಹಿಂದಷ್ಟೇ ಹಾರಿಬಿಟ್ಟಿದ್ದು ನಿಮಗೂ ಗೊತ್ತಿದೆ. ಈಗ, ಇದೇ ಉಪಗ್ರಹವು, ಶನಿಗ್ರಹದ ಚಂದ್ರನಲ್ಲಿ ಜೀವಿಗಳಿರುವ ಕುರುಹನ್ನು ಪತ್ತೆ ಹಚ್ಚಿದೆ.

ನೀರಿನ ಕುರುಹು

ನೀರಿನ ಕುರುಹು

ನಾಸಾ ಹೇಳುವ ಪ್ರಕಾರ, ಕ್ಯಾಸಿನಿಯು ಕೆಲ ತಿಂಗಳುಗಳಿಂದೀಚೆಗೆ ಶನಿಗ್ರಹದ ಚಂದ್ರನಾಗಿರುವ ಎನ್ಸಿಲಾಡಸ್ ನನ್ನು ಪರಿಭ್ರಮಿಸುತ್ತಾ ಪರೀಕ್ಷೆ ನಡೆಸುತ್ತಿತ್ತು. ಹಿಮದ ಗಡ್ಡೆಯಂತಿರುವ ಎನ್ಸಿಲಾಡಸ್ ನ ಮೇಲ್ಮೈ ಮೇಲೆ ಕೆಲವು ಅತೀ ಉದ್ದದ, ಅಂದರೆ, ವಿರುದ್ಧ ದೃವಗಳನ್ನು ಬೆಸೆಯುಷ್ಟು ದೂರದ ಕಾಲುವೆಗಳನ್ನು ಕಂಡಿದೆ. ಈ ಕಾಲುವೆಗಳೂ ಮಂಜಿನಿಂದ ಆವರಿಸಿದ್ದು ಅವುಗಳಲ್ಲಿ ಹಿಂದೊಮ್ಮೆ ನೀರು ಹರಿದಿರಬಹುದಾದ ಶಂಕೆಯನ್ನು ಕ್ಯಾಸಿನಿ ಪರೀಕ್ಷೆ ಹುಟ್ಟುಹಾಕಿತ್ತು.

ಫಲಿತಾಂಶ ತಂದ ಅಚ್ಚರಿ

ಫಲಿತಾಂಶ ತಂದ ಅಚ್ಚರಿ

ಈ ವಿಚಾರವು ಕ್ಯಾಸಿನಿಯಿಂದ ತಿಳಿಯುತ್ತಲೇ ನಾಸಾದಲ್ಲಿರುವ ವಿಜ್ಞಾನಿಗಳ ಗುಂಪು ಮತ್ತೊಂದನ್ನು ಯೋಚಿಸತೊಡಗಿತು. ಹಾಗಾಗಿ, ಕ್ಯಾಸಿನಿಗೆ ಎನ್ಸಿಲಾಡಸ್ ನ ಮೇಲ್ಮೈ ಮೇಲಿಳಿದು ಅದರಲ್ಲಿನ ಕಾಲುವೆಗಳ ಬಳಿ ತೆರಳಿ ಅದರ ಸ್ಯಾಂಪಲ್ ಗಳನ್ನು ಪರೀಕ್ಷಿಸಲು ಸೂಚಿಸಲಾಯಿತು. ಅದರಂತೆ, ಕ್ಯಾನಿಸಿ ಆ ಚಂದ್ರನ ಮೇಲಿಳಿದು ಕಾಲುವೆಗಳೊಳಗಿನ ಮಂಜಿನ ಒಂದು ಸ್ಯಾಂಪಲ್ ತೆಗೆದುಕೊಂಡು ಅದನ್ನು ತನ್ನಲ್ಲೇ ಪರೀಕ್ಷೆಗೊಳಪಸಿಡಿಸಿ, ಅದರ ಫಲಿತಾಂಶವನ್ನು ನಾಸಾಕ್ಕೆ ಕಳುಹಿಸಿತು.

ಶೇ. 98ರಷ್ಟು ನೀರು

ಶೇ. 98ರಷ್ಟು ನೀರು

ಕ್ಯಾಸಿನಿ ಕಳುಹಿಸಿದ್ದ ಪರೀಕ್ಷಾ ಫಲಿತಾಂಶವನ್ನು ನೋಡಿ, ಖುದ್ದು ನಾಸಾ ವಿಜ್ಞಾನಿಗಳೇ ಅಚ್ಚರಿಗೊಳಗಾದರು. ಏಕೆಂದರೆ, ದಶಕಗಳಿಂದ ಅವರು ಹುಡುಕಾಡುತ್ತಿದ್ದ ಎಲಿಮೆಂಟ್ ಒಂದು ಇವರಿಗೆ ಈ ಬಾರಿ ನಿಖರವಾಗಿ ಸಿಕ್ಕಿತ್ತು. ಅಷ್ಟಕ್ಕೂ ವಿಜ್ಞಾನಿಗಳ ಕುತೂಹಲ ಕೆರಳಿಸಿದ, ಕ್ಯಾಸಿನಿ ಕಳುಹಿಸಿದ್ದ ಆ ಫಲಿತಾಂಶವೇನು ಎಂಬುದಕ್ಕೆ ಇಲ್ಲಿದೆ ಉತ್ತರ.

ಎನ್ಸಿಲಾಡಸ್ ನಲ್ಲಿ ಕ್ಯಾಸಿನಿ ಪಡೆದಿದ್ದ ಸ್ಯಾಂಪಲ್ ಗಳಲ್ಲಿ ಶೇ. 98ರಷ್ಟು ನೀರು ಹಾಗೂ ಶೇ. 2ರಷ್ಟು ದ್ರವರೂಪದ ಜಲಜನಕ, ಇಂಗಾಲದ ಡೈ ಆಕ್ಸೈಡ್, ಮಿಥೇನ್ ಹಾಗೂ ಇಂಗಾಲದ ನಾನಾ ರೂಪಗಳು ಸಿಕ್ಕಿವೆ. ಇವುಗಳೇ ಆ ಚಂದ್ರನಲ್ಲಿ ಜೀವಿಗಳಿರುವ ಕುರುಹನ್ನು ಎತ್ತಿ ತೋರಿಸಿದೆ.

ಆ ಜೀವಿ ಪ್ರಾಣಿಯೇ ಆಗಿರಬೇಕೆಂದಿಲ್ಲ

ಆ ಜೀವಿ ಪ್ರಾಣಿಯೇ ಆಗಿರಬೇಕೆಂದಿಲ್ಲ

ನಮಗೆಲ್ಲಾ ಗೊತ್ತಿರುವಂತೆ ಜೀವಿಗಳು ಮಿಥೇನ್ ಅಂಶಗಳಿರುವ ಆಹಾರವನ್ನು ತಿನ್ನುತ್ತವೆ. ಜೀರ್ಣವಾದ ನಂತರ ಕಾರ್ಬನ್ ಡೈ ಆಕ್ಸೈಡ್ ಅನ್ನು ಬಿಡುಗಡೆ ಮಾಡುತ್ತವೆ. ಇಂಗಾಲದ ಮೂಲ ಸ್ವರೂಪವು ಡೈ ಆಕ್ಸೈಡ್ ಹಾಗೂ ಇನ್ನಿತರ ನಾನಾ ಸ್ವರೂಪಗಳಿಗೆ ಬದಲಾಗಬೇಕೆಂದರೆ ಅಲ್ಲಿ ಜೀವಿಗಳ (ಪ್ರಾಣಿ ಅಥವಾ ಸಸ್ಯಗಳನ್ನು ಹೋಲುವ ಯಾವುದೇ ಜೀವಿ) ಇರುವಿಕೆ ಇದ್ದರೆ ಮಾತ್ರ ಸಾಧ್ಯ ಎಂಬುದು ಈಗಾಗಲೇ ವೈಜ್ಞಾನಿಕವಾಗಿ ನಿರೂಪಿತವಾಗಿರುವ ಸತ್ಯ.

ಹಾಗಾಗಿ, ಈಗ ಕ್ಯಾಸಿನಿ ಮಾಡಿರುವ ಪರೀಕ್ಷೆಯಲ್ಲಿ ಲಭ್ಯವಾಗಿರುವ ಇಂಗಾಲದ ಇತರೆ ಅಂಶಗಳು ಜೀವಿಗಳ ಪಚನಕ್ರಿಯೆಯಿಂದ ಉತ್ಪನ್ನವಾಗುವ ವಸ್ತುಗಳಲ್ಲದೆ ಮತ್ತೇನೂ ಇಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ನಾಸಾ ವಿಜ್ಞಾನಿಗಳು.

ಸಿಕ್ಕಿದೆ ಹೊಸ ದಾರಿ

ಸಿಕ್ಕಿದೆ ಹೊಸ ದಾರಿ

ಅದೇನೇ ಇರಲಿ. ಸದ್ಯಕ್ಕಂತೂ ಏಲಿಯನ್ಸ್ ಹುಡುಕಾಟಕ್ಕೆ ಹೊಸ ತಿರುವು ಸಿಕ್ಕಂತಾಗಿದೆ. ದಶಕಗಳ ಈ ಹುಡುಕಾಟದಲ್ಲಿ ಬಾಹ್ಯಾಕಾಶದಲ್ಲಿ ಅಲೆಮಾರಿಗಳಂತೆ ತಮ್ಮ ಆಲೋಚನಾ ಲಹರಿಗಳನ್ನು ಹರಿಯಬಿಟ್ಟಿದ್ದ ವಿಜ್ಞಾನಿಗಳಿಗೆ ಈಗ ನಿರ್ದಿಷ್ಟ ಗುರಿಯತ್ತ ಸಾಗುವ ಒಂದು ಮಹಾನ್ ಹೆದ್ದಾರಿ ಸಿಕ್ಕಿದೆ. ಇದರ ಮುಂದಿನ ಪರಿಣಾಮವೇನು ಎಂಬುದು ಇನ್ನು ಶೀಘ್ರದಲ್ಲೇ ಗೊತ್ತಾಗಲಿದೆ.

English summary
In a first confirmation of its kind, the National Aeronautics and Space Administration (NASA) has confirmed the possibility of life inhabiting Enceladus, the watery moon of Saturn. A moon of Saturn, Enceladus is a "water world," covered by oceans of liquid water trapped under a layer of ice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X