ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಅತೀ ಕುಳ್ಳ ಚಂದ್ರ ಬಹದ್ದೂರ ಡಾಂಗಿ ನಿಧನ

By Vanitha
|
Google Oneindia Kannada News

ನೇಪಾಳ, ಸೆಪ್ಟೆಂಬರ್, 05 : ಜಗತ್ತಿನಲ್ಲಿಯೇ ಅತಿ ಕುಳ್ಳ ವ್ಯಕ್ತಿ ಎನಿಸಿಕೊಂಡು ಲೋಕ ವಿಖ್ಯಾತಿ ಪಡೆದ ಚಂದ್ರ ಬಹದ್ದೂರ ಡಾಂಗಿ ಅವರು ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು, ಗುರುವಾರ ಸಂಜೆ ವಿಧಿವಶವಾಗಿದ್ದಾರೆ.

ಕಳೆದ ಹಲವು ದಿನಗಳಿಂದ ನ್ಯೂಮೋನಿಯಾ ಖಾಯಿಲೆಯಿಂದ ಬಳಲುತ್ತಿದ್ದ ನೇಪಾಳ ಚಂದ್ರ ಸುಮಾರು ದಿನಗಳಿಂದ ಅಮೆರಿಕಾದ ಸಮೋವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿಮಿತ್ತ ದಾಖಲಾಗಿದ್ದರು. ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ಇತ್ತೀಚೆಗೆ ಅಮೆರಿಕಾಕ್ಕೆ ತೆರಳಿದ್ದು, ಅಲ್ಲಿಯೇ ಅವರ ಆರೋಗ್ಯ ಸಂಪೂರ್ಣ ಹದಗೆಟ್ಟಿತ್ತು.[ನೇಪಾಳದಲ್ಲಿ ಭಾರತದ ಕರೆನ್ಸಿ ಧೈರ್ಯವಾಗಿ ಬಳಸಿ]

The World’s Shortest Man Chandra Bahadur Dangi Died

ಬಹದ್ದೂರ ಅವರಿಗೆ 75 ವರ್ಷ ವಯಸ್ಸಾಗಿದ್ದು, ಇವರು ಕೇವಲ 21.5 ಇಂಚು ಎತ್ತರ ಮತ್ತು 14 ಕೆಜಿ ದೇಹ ತೂಕ ಹೊಂದಿದ್ದು, ವಿಶ್ವದ ಕುಳ್ಳರ ಸಾಲಿನಲ್ಲಿ ಅಗ್ರಮಾನ್ಯ ಸ್ಥಾನ ಪಡೆದಿದ್ದರು. ಕಳೆದ ವರ್ಷವಷ್ಟೇ ಲಂಡನ್‌ನಲ್ಲಿ ವಿಶ್ವದ ಅತೀ ಎತ್ತರದ ಮನುಷ್ಯ ಸುಮಾರು 8 ಅಡಿ 3 ಇಂಚು ಎತ್ತರವಿರುವ ಸುಲ್ತಾನ ಕೌಸೇನ್ ರನ್ನು ಭೇಟಿಯಾಗಿದ್ದರು.

ಮೂರು ವರ್ಷಗಳ ಹಿಂದೆ ಅಂದರೆ 2012 ರ ಫೆಬ್ರವರಿ ತಿಂಗಳಿನಲ್ಲಿ ಚಂದ್ರ ಬಹದ್ದೂರ ಡಾಂಗೆ ಅವರಿಗೆ ವಿಶ್ವದ ಅತೀ ಚಿಕ್ಕ ಮನುಷ್ಯ ಎಂದು ಘೋಷಿಸಲಾಗಿತ್ತು. ಮೊದಲು ಭಾರತದ ಗುಲ್ ಮಹಮ್ಮದ್ ಅವರು ಅತಿ ಚಿಕ್ಕ ವ್ಯಕ್ತಿಯಾಗಿದ್ದು, ಇವರ ಎತ್ತರ 22.5 ಇಂಚುಗಳಾಗಿತ್ತು.

English summary
The World’s Shortest Man Chandra Bahadur Dangi Died on Thursday, America Samoa Hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X