ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೌತ ವಿಜ್ಞಾನದ 2 ಸಂಶೋಧಕರಿಗೆ ನೊಬೆಲ್ ಪ್ರಶಸ್ತಿ

By Vanitha
|
Google Oneindia Kannada News

ಲಂಡನ್, ಅಕ್ಟೋಬರ್, 06 : ಜಪಾನಿನ ಭೌತ ವಿಜ್ಞಾನಿ ತಟಾಕಿ ಕಜಿತಾ ಮತ್ತು ಕೆನಡಾದ ಆರ್ಥೂರ್ ಬಿ ಮೆಕ್ ಡೊನಾಲ್ಡ್ ಅವರು 2015ನೇ ಸಾಲಿನ ಭೌತವಿಜ್ಞಾನ ಕ್ಷೇತ್ರದ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜಪಾನ್ ಹಾಗೂ ಕೆನಡಾದ ಈ ಇಬ್ಬರು ಭೌತವಿಜ್ಞಾನಿಗಳು 'ನ್ಯೂಟ್ರಿನೋ ಆಸ್ಕಿಲೇಷನ್' ಎಂಬ ವಿಚಾರದಲ್ಲಿ ಸಾಧನೆ ಮಾಡಿದ ಪ್ರಯುಕ್ತ ನೊಬೆಲ್ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ನೊಬೆಲ್ ಪ್ರಶಸ್ತಿಯ ಸೃಷ್ಟಿಕರ್ತರಾಗಿರುವ ಆಲ್ ಫ್ರೆಡ್ ನೊಬೆಲ್ ಅವರ ಸ್ಮರಣೆ ದಿನವಾದ ಡಿಸೆಂಬರ್ 10ರ ಗುರುವಾರದಂದು 2015ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ಪ್ರದಾನ ಸಮಾರಂಭವು ಜರುಗಲಿದೆ.[ನೊಬೆಲ್ ಪ್ರಶಸ್ತಿ ಹಂಚಿಕೊಂಡ 3 ಸಂಶೋಧಕರು]

Takaaki Kajita, Arthur McDonald win Nobel in physics

ಐರ್ಲೆಂಡ್ ಮೂಲದ ವಿಲಿಯನ್ ಕ್ಯಾಂಪ್ ಬೆಲ್, ಜಪಾನ್ ನ ಸತೋಷಿ ಒಮುರಾ, ಚೀನಾದ ಯುಯುತು ಅವರು ವೈದ್ಯಕೀಯ ಶಾಸ್ತ್ರದಲ್ಲಿ 6.20 ನಗದನ್ನು ಹೊಂದಿರುವ 2015ನೇ ನೊಬೆಲ್ ಪ್ರಶಸ್ತಿಗೆ ಅರ್ಹರಾಗಿದ್ದಾರೆ.

ರಸಾಯನಶಾಸ್ತ್ರದ ನೊಬೆಲ್ ಪರಸ್ಕೃತರನ್ನು ಬುಧವಾರ ಘೋಷಿಸಿದರೆ, ಸಾಹಿತ್ಯ ನೊಬೆಲ್ ವಿಜೇತರನ್ನು ಗುರುವಾರ ಘೋಷಿಸಲಾಗುವುದು. ನೊಬೆಲ್ ಶಾಂತಿ ಪ್ರಶಸ್ತಿಯನ್ನು ಶುಕ್ರವಾರ ಮತ್ತು ಅರ್ಥಶಾಸ್ತ್ರ ಕ್ಷೇತ್ರದ ನೊಬೆಲ್ ಪ್ರಶಸ್ತಿಯನ್ನು ಅಕ್ಟೋಬರ್ 12ರ ಸೋಮವಾರದಂದು ಘೋಷಿಸಲಾಗುವುದೆಂದು ಮೂಲಗಳು ತಿಳಿಸಿವೆ.

English summary
Japanese scientist Takaaki Kajita and Canadian physicist Arthur B McDonald have won the Nobel prize in Physics 2015 "for the discovery of neutrino oscillations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X