ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಪೊಲೀಸರ ಮೇಲೆ ಉಗ್ರರ ಆತ್ಮಾಹುತಿ ಬಾಂಬ್ ದಾಳಿ

By Kiran B Hegde
|
Google Oneindia Kannada News

ಲಾಹೋರ್, ಫೆ. 17: ಉಗ್ರರನ್ನು ಸಾಕಿ ಸಲಹಿದ್ದ ಪಾಕಿಸ್ತಾನಕ್ಕೆ ಅವರ ಕುತಂತ್ರವೇ ತಿರುಗುಬಾಣವಾಗಿದೆ. ಅತ್ತ ಉಗ್ರರ ವಿರುದ್ಧವೂ ಹೋರಾಡಬೇಕು, ಇತ್ತ ಧಾರ್ಮಿಕ ಮೂಲಭೂತವಾದಿಗಳನ್ನೂ ಸಮಾಧಾನಪಡಿಸಬೇಕು. ಆದರೆ, ಇದಕ್ಕೆ ಪೊಲೀಸರು ಹಾಗೂ ಅವರ ಕುಟುಂಬ ಬಲಿಯಾಗುತ್ತಿದೆ.

ಈಚೆಗಷ್ಟೇ ಉಗ್ರರು ಪೇಶಾವರದಲ್ಲಿರುವ ಪೊಲೀಸರು ಹಾಗೂ ಸೈನಿಕರ ಮಕ್ಕಳ ಶಾಲೆ ಮೇಲೆ ದಾಳಿ ನಡೆಸಿ 130ಕ್ಕೂ ಹೆಚ್ಚು ವಿದ್ಯಾರ್ಥಿಗಳ ಹತ್ಯಾಕಾಂಡ ನಡೆಸಿದ್ದರು. ಈಗ ಪೊಲೀಸರನ್ನೇ ಗುರಿಯಾಗಿಸಿಕೊಂಡು ಮಂಗಳವಾರ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದಾರೆ. [ತಂದೆಯ ಶವಕ್ಕೆ ಮಗಳ ಸೆಲ್ಯೂಟ್]

ಲಾಹೋರ್‌ನ ಪೊಲೀಸ್ ಲೇನ್ ಬಳಿಯ ಹೋಟೆಲ್ ಒಂದರ ಹೊರಗೆ ಆತ್ಮಾಹುತಿ ದಾಳಿಕೋರನೋರ್ವ ತನ್ನನ್ನು ಸ್ಫೋಟಿಸಿಕೊಂಡಿದ್ದಾನೆ. ಘಟನೆಯಲ್ಲಿ ಇಬ್ಬರು ಪೊಲೀಸರು ಸೇರಿ ಎಂಟು ಜನ ಬಲಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಸುತ್ತಲೂ ಇದ್ದ ಆರು ಕಟ್ಟಡಗಳು ಸಂಪೂರ್ಣ ಹಾಳಾಗಿವೆ. [ಶಿಕ್ಷಕರಿಗೆ ಪೆನ್ ಜೊತೆ ಗನ್]

ಗಾಯಗೊಂಡವರನ್ನು ಹತ್ತಿರದ ಮಾಯೊ ಹಾಗೂ ಶ್ರೀಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚುವ ಭೀತಿಯಿದೆ. ವಿಷಯ ತಿಳಿದ ತಕ್ಷಣ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ದೌಡಾಯಿಸಿದ್ದಾರೆ. ಗಾಯಾಳುಗಳನ್ನು ರಕ್ಷಿಸಲು ತೊಡಗಿದ್ದಾರೆ. [ಪಾಕಿಸ್ತಾನ ಉಗ್ರರ ಸುರಕ್ಷಿತ ಸ್ವರ್ಗ]

ತಾಲಿಬಾನ್ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ. ಈಚೆಗಷ್ಟೇ ತಾಲಿಬಾನ್ ಸಂಘಟನೆಯ ಹಲವು ಉಗ್ರರನ್ನು ಪಾಕಿಸ್ತಾನ ನೇಣಿಗೇರಿಸಿತ್ತು. ಈ ಹಿನ್ನೆಲೆಯಲ್ಲಿ ಸೇಡು ತೀರಿಸಿಕೊಳ್ಳಲು ದಾಳಿ ನಡೆಸಿರುವುದಾಗಿ ತಾಲಿಬಾನ್ ತಿಳಿಸಿದೆ. ಭಾರತದ ಮೇಲೆ ಉಗ್ರರ ದಾಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿರುವ ಪಾಕಿಸ್ತಾನ ತಾನು ಹೆಣೆದ ಬಲೆಯಲ್ಲಿ ತಾನೇ ಸಿಕ್ಕಿಬಿದ್ದು ಒದ್ದಾಡುತ್ತಿದೆ.

ಗಾಯಾಳುಗಳು

ಗಾಯಾಳುಗಳು

ಪಾಕಿಸ್ತಾನದಲ್ಲಿ ತಾಲಿಬಾನ್ ಉಗ್ರರು ಪೊಲೀಸರ ಮೇಲೆ ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಗಾಯಗೊಂಡವರನ್ನು ಸಾಗಿಸುತ್ತಿರುವುದು.

ಜೀವ ಭಯ

ಜೀವ ಭಯ

ತಾಲಿಬಾನ್ ಉಗ್ರ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ ನಂತರ ಭಯದಿಂದ ಓಡುತ್ತಿರುವ ಮಹಿಳೆಯರು

ಛಿದ್ರ ಛಿದ್ರ

ಛಿದ್ರ ಛಿದ್ರ

ತಾಲಿಬಾನ್ ಉಗ್ರ ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಬೈಕ್ ಹಾಗೂ ಸ್ಥಳೀಯ ವಾಹನಗಳು ಛಿದ್ರಗೊಂಡವು.

ದಾಳಿಯ ಪರಿಣಾಮ

ದಾಳಿಯ ಪರಿಣಾಮ

ತಾಲಿಬಾನ್ ಉಗ್ರ ಸ್ವಯಂ ಸ್ಫೋಟಿಸಿಕೊಂಡ ನಂತರ ಎದ್ದಿರುವ ದಟ್ಟ ಹೊಗೆ. ಸ್ಥಳಕ್ಕೆ ಬಂದಿರುವ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದರು.

ಪುಡಿ ಪುಡಿ

ಪುಡಿ ಪುಡಿ

ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ಸುತ್ತಲಿನ ಆರು ಕಟ್ಟಡಗಳು ಹಾನಿಗೊಳಗಾಗಿವೆ. ಕಟ್ಟಡವೊಂದರ ಗಾಜುಗಳು ನಾಶಗೊಂಡಿರುವುದನ್ನು ಇಲ್ಲಿ ಕಾಣಬಹುದು.

English summary
A suicide bomber blew himself up near the police headquarters of Pakistan on Tuesday. At least 8 people, including two policemen, were killed and many injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X