ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಪತ್ತೆಯಾಗಿದ್ದ ವಿಮಾನ ಪತ್ತೆ, 23 ಜನ ದುರಂತ ಸಾವು

By Mahesh
|
Google Oneindia Kannada News

ಕಠ್ಮಂಡು, ಫೆ. 24: ಸುಮಾರು 23 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಲಘು ವಿಮಾನವೊಂದು ಬುಧವಾರ ಬೆಳಗ್ಗೆ ನಾಪತ್ತೆಯಾಗಿದ್ದು, ಪರ್ವತ ಪ್ರದೇಶದಲ್ಲಿ ವಿಮಾನ ಧ್ವಂಸವಾಗಿರುವ ಸುದ್ದಿಯೂ ಬಂದಿದೆ.

ವಿಮಾನದಲ್ಲಿ ಇಬ್ಬರು ವಿದೇಶಿ ಪ್ರಯಾಣಿಕರು ಸೇರಿದಂತೆ 21 ಜನ ಪ್ರಯಾಣಿಸುತ್ತಿದ್ದರು. ತಾರಾ ಏರ್ ಲೈನ್ಸ್ ಗೆ ಸೇರಿದ ವಿಮಾನ ಕಠ್ಮಂಡುವಿನಿಂದ ಸುಮಾರು 250 ಕಿ.ಮೀ ದೂರದಲ್ಲಿರುವ ಗುಡ್ಡಗಾಡು ನಗರ ಪೋಖರಾದಿಂದ ಜೋಮ್ ಸಮ್ ಗೆ ತೆರಳುತ್ತಿತ್ತು.

ಪೋಖರಾ ವಿಮಾನ ನಿಲ್ದಾಣದಿಂದ ಟೇಕಾಫ್ ಆದ 18 ನಿಮಿಷಗಳಲ್ಲಿ ವಿಮಾನ ಸಂಪರ್ಕಕ್ಕೆ ಸಿಕ್ಕಿಲ್ಲ. ಎರಡು ಕಡೆ ವಿಮಾನ ನಿಲ್ದಾಣಗಳಿಂದ ಕಳಿಸಲಾದ ಸಂದೇಶಕ್ಕೆ ಬದಲಿ ಉತ್ತರ ಬಂದಿಲ್ಲ. ಹೆಲಿಕಾಪ್ಟರ್ ಗಳನ್ನು ಬಳಸಿಕೊಂಡು ಕಳೆದ ಎರಡು ಗಂಟೆಗಳಿಂದ ಹುಡುಕಾಟ ನಡೆಸಲಾಗುತ್ತಿದೆ. ಆದರೆ, ಪ್ರತಿಕೂಲ ಹವಾಮಾನದ ಹಿನ್ನಲೆಯಲ್ಲಿ ರಕ್ಷಣಾ ಕಾರ್ಯ ವಿಳಂಬದಿಂದ ಸಾಗಿದೆ.

Small plane with 23 people on board missing in Nepal

ಪ್ರಯಾಣಿಕರ ಪೈಕಿ ಒಬ್ಬರು ಚೀನಾದವರು ಮತ್ತೊಬ್ಬರು ಕುವೈತಿನವರಿದ್ದರು. ಮಿಕ್ಕವರೆಲ್ಲ ನೇಪಾಳಿಗಳಾಗಿದ್ದು, ಇಬ್ಬರು ಮಕ್ಕಳು ಪ್ರಯಾಣಿಸುತ್ತಿದ್ದರು.

ಜೋಮ್ ಸಮ್ ನ ಸ್ಥಳೀಯ ನಿವಾಸಿಗಳ ಪ್ರಕಾರ ಭಾರಿ ಸ್ಫೋಟದ ಸದ್ದು ಕೇಳಿ ಬಂದಿದ್ದು, ಪರ್ವತಕ್ಕೆ ಡಿಕ್ಕಿ ಹೊಡೆದು ವಿಮಾನ ಪತನವಾಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ಜೋಮ್ ಸಮ್ ನ ಪೊಲೀಸ್ ಅಧಿಕಾರಿ ಹರಿಹರಿ ಯೋಗಿ ಹೇಳಿದ್ದಾರೆ.

ಅನ್ನಪೂರ್ಣ ಶಿಖರ ಟ್ರೆಕ್ಕಿಂಗ್, ಮುಸ್ತಾಂಗ್ ಪ್ರದೇಶಕ್ಕೆ ತೆರಳಲು ಇದೇ ಮಾರ್ಗ ಬಳಸಲಾಗುತ್ತದೆ. ಮುಕ್ತಿನಾಥ ದೇಗುಲಕ್ಕೆ ಹೋಗುವ ಹಿಂದೂ ಯಾತ್ರಾರ್ಥಿಗಳು, ವಿದೇಶಿ ಟ್ರೆಕ್ಕರ್ಸ್ ಗಳು ಹೆಚ್ಚಾಗಿ ಈ ಭಾಗಕ್ಕೆ ಭೇಟಿ ನೀಡುತ್ತಾರೆ. (ಎಪಿ)

English summary
A small plane with 23 people including two foreigners on board and flying in poor visibility over mountainous terrain in Nepal on Wednesday is missing and officials fear it has crashed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X