ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌದಿಗೆ ಆಧುನಿಕ ಟಚ್ ನೀಡಿದ್ದ ದೊರೆ ಅಬ್ದುಲ್ಲಾ ಇನ್ನಿಲ್ಲ

By Mahesh
|
Google Oneindia Kannada News

ರಿಯಾದ್, ಜ.23: ಆಧುನಿಕ ಸೌದಿ ಅರೇಬಿಯಾ ನಿರ್ಮಾತೃ, ಮುಸ್ಲಿಂ ಸಾಮ್ರಾಜ್ಯಕ್ಕೆ ಹೊಸ ಮಾದರಿ ಆಡಳಿತ ಪರಿಚಯಿಸಿದ್ದ ಭಯೋತ್ಪಾದನೆ ವಿರುದ್ಧ ಸಮರ ಸಾರಿದ್ದ ದೊರೆ ಅಬ್ದುಲ್ಲಾ ಕೊನೆಯುಸಿರೆಳೆದಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಕಿಂಗ್ ಅಬ್ದುಲ್ಲಾ ಅವರ ಸಾವಿನ ಸುದ್ದಿಯನ್ನು ಸೌದಿ ಸ್ಟೇಟ್ ಟಿವಿ ಪ್ರಸಾರ ಮಾಡಿದೆ.

ಸೌದಿ ದೊರೆ ಅಬ್ದುಲ್ಲಾ ಬಿನ್‌ ಅಬ್ದುಲ್ಲಾ ಅಝೀಝ್ ಅವರು ನಿಧನದ ನಂತರ 79 ವರ್ಷ ಪ್ರಾಯದ ಯುವರಾಜ ಸಲ್ಮಾನ್‌ ಅವರು ಸೌದಿಯ ನೂತನ ಅಧಿಪತಿಯಾಗಿದ್ದಾರೆ. ಇಸ್ರೇಲ್ -ಪ್ಯಾಲೆಸ್ಟೈನ್ ನಡುವಿನ ಸಂಧಾನ ಮಾತುಕತೆಗೆ ವಾಷಿಂಗ್ಟನ್ ನ ಬೆಂಬಲ ಕೋರಿದ್ದ ಸುನ್ನಿ ಸಮುದಾಯದ ರಾಜನಿಗೆ ಸಹಜವಾಗಿ ಶಿಯಾ ಪಂಗಡ ವಿರೋಧ ಕಟ್ಟಿಕೊಂಡಿದ್ದರು.

ಸಾಂಪ್ರದಾಯಿಕ ಮುಸ್ಲಿಂ ರಾಷ್ಟ್ರವನ್ನು ಆಧುನಿಕತೆಯತ್ತ ಕೊಂಡೊಯ್ಯುವ ಮತ್ತು ಮಹಿಳೆಯರಿಗೆ ಹೆಚ್ಚಿನ ಸಮಾನತೆ, ಸಾಮಾಜಿಕ, ರಾಜಕೀಯ ಅವಕಾಶಗಳನ್ನು ಕಲ್ಪಿಸುವಲ್ಲಿ ಅಬ್ದುಲ್ಲಾ ಪ್ರಮುಖ ಪಾತ್ರವಹಿಸಿದ್ದರು.

Saudi King Abdullah dies, new ruler is Salman

1924ರಲ್ಲಿ ಜನಿಸಿದ ಅಬ್ದುಲ್ಲಾ ಅವರು ಸೌದಿ ಅರೇಬಿಯಾ ಸ್ಥಾಪಕ ದೊರೆ ಅಬುದ್ಲ್ ಅಜೀಜ್ ಅಲ್ ಸೌದ್ ಅವರ 12 ಮಕ್ಕಳ ಪೈಕಿ ಒಬ್ಬರಾಗಿದ್ದರು. ಅಬ್ದುಲ್ಲಾ ಅವರ ಪುತ್ರ ಸಲ್ಮಾನ್‌ ಅವರನ್ನು 2012ರಲ್ಲಿ ಯುವರಾಜ ಪಟ್ಟಕ್ಕೇರಿಸಲಾಗಿತ್ತು. ಅಬ್ದುಲ್ಲಾ ಅವರ ಮಲ ಸಹೋದರ ಮೊಕ್ರೆನ್‌ ಅವರು ನೂತನ ಯುವರಾಜರಾಗಲಿದ್ದಾರೆ.

ವಿಶ್ವದ ಪ್ರಮುಖ ತೈಲ ಉತ್ಪಾದಕ ರಾಷ್ಟ್ರದ ಭವಿಷ್ಯದ ನಾಯಕನ ಕುರಿತಾಗಿ ಕಳೆದ ಕೆಲವು ವರ್ಷಗಳಿಂದ ಚರ್ಚೆ ನಡೆಯುತ್ತಲೇ ಇದೆ. ಕಳೆದ ಡಿಸೆಂಬರ್ ನಲ್ಲಿ ಚಳಿಜ್ವರಕ್ಕೆ ತುತ್ತಾಗಿ ಅಬ್ದುಲ್ಲಾ ಅವರು ಅಸ್ಪತ್ರೆ ಸೇರಿದ ಮೇಲೆ ಸಲ್ಮಾನ್ ಅವರು ವ್ಯವಹಾರ ನೋಡಿಕೊಳ್ಳುತ್ತಿದ್ದರು. ಸಲ್ಮಾನ್ ಅವರು ಈಗ ಮಧ್ಯಪ್ರಾಚ್ಯ ಅಲ್ಲದೆ, ಇತರೆ ದೇಶಗಳ ಜೊತೆ ಯಾವ ರೀತಿ ವ್ಯವಹರಿಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. (ಪಿಟಿಐ)

English summary
Saudi Arabia's King Abdullah, the powerful US ally who joined Washington's fight against al-Qaeda and sought to modernize the ultraconservative Muslim kingdom with incremental but significant reforms, including nudging open greater opportunities for women, has died, according to Saudi state TV. He was 90.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X