ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌದಿ ದೊರೆಗೆ ಬಂತು ದಾನ ಮಾಡುವ ಬುದ್ಧಿ

|
Google Oneindia Kannada News

ರಿಯಾದ್‌, ಜು. 02: ಸೌದಿಯ ದೊರೆಗಳೆಂದರೆ ಚಿನ್ನದ ಕಾರಿನಲ್ಲಿ ಓಡಾಡುವವರು, ಐಷಾರಾಮಿ ಬದುಕಿನಲ್ಲೇ ಜೀವನ ಕಳೆಯುವವರು ಎಂಬ ಕಲ್ಪನೆ ಎಲ್ಲರಲ್ಲೂ ಇದೆ. ಚಿನ್ನದ ಕಾರು, ಚಿನ್ನದ ಟಾಯ್ಲೆಟ್ ಬಳಕೆ ಮಾಡುವರನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ದೊರೆಗೆ ಜೀವನದಲ್ಲಿ ವೈರಾಗ್ಯ ಬಂದಿದ್ದು ತನ್ನ ಎಲ್ಲ ಆಸ್ತಿಯನ್ನು ದಾನ ಮಾಡುತ್ತೇನೆ ಎಂದು ಹೇಳಿದ್ದಾನೆ.

ಆತ ದಾನ ಮಾಡಲು ಮುಂದಾಗಿರುವುದು ಲಕ್ಷಗಳಲ್ಲಿ ಅಲ್ಲ. ತನ್ನ ಸಂಪೂರ್ಣ ಆಸ್ತಿ ಅಂದರೆ ಬರೋಬ್ಬರಿ 2,04,800 ಕೋಟಿ ಹಣದ ವಿವಿಧ ಚರಾಚರ ಆಸ್ತಿಯನ್ನು ದಾನಮಾಡಲು ಸಿದ್ಧವಾಗಿದ್ದಾನೆ. ಸೌದಿ ಅರೇಬಿಯಾದ ಅಲ್ವಲೀದ್‌ ಬಿನ್‌ ತಲಾಲ್ ತಮ್ಮ ಎಲ್ಲ ಆಸ್ತಿಯನ್ನು ದೇಶದ ಅಭಿವೃದ್ಧಿ ಯೋಜನೆಗಳಿಗೆ ದಾನ ನೀಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ.[ಭಾರತದ ಮೆಣಸಿನಕಾಯಿಗೆ ನಿಷೇಧ ಹೇರಿದ ಸೌದಿ ಅರೇಬಿಯಾ]

charity

ಸಮಾಜದಲ್ಲಿ ಬದಲಾವಣೆ ತರಬಲ್ಲ ಯೋಜನೆಗಳಿಗೆ, ಮಹಿಳಾ ಸಬಲೀಕರಣಕ್ಕೆ, ಯುವ ಜನರ ಏಳಿಗೆ, ವಿಪತ್ತು ನಿರ್ವಹಣೆ ಉದ್ದೇಶಕ್ಕೆ ಹಣ ಬಳಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.[ಸೌದಿಗೆ ಆಧುನಿಕ ಟಚ್ ನೀಡಿದ್ದ ದೊರೆ ಅಬ್ದುಲ್ಲಾ ಇನ್ನಿಲ್ಲ]

ಹಣವನ್ನು ವ್ಯವಸ್ಥಿತವಾಗಿ ಬಳಕೆ ಮಾಡಲು ಧರ್ಮದರ್ಶಿ ಮಂಡಳಿ ನಿಯೋಜಿಸಲಾಗುವುದು. ನಾನು ಸಾವನ್ನಪ್ಪಿದ ನಂತರವೂ ಸಮಾಜ ಸೇವೆ ಕೆಲಸ ಮುಂದುವರಿಯಬೇಕು. ಈ ಬಗ್ಗೆ ಟ್ರಸ್ಟ್ ವೊಂದನ್ನು ಸ್ಥಾಪನೆ ಮಾಡಲಾಗುವುದು ಎಂದು ತಲಾಲ್ ತಿಳಿಸಿದ್ದಾರೆ.

English summary
A Saudi billionaire has announced one of the biggest philanthropic gestures in history, promising to donate all his $32bn wealth to charity over the coming years.Prince Alwaleed bin Talal, a 60-year-old magnate who is a nephew of the late King Abdullah, said he would channel the money through his own Alwaleed Philanthropies organisation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X