ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌದಿ ಅರೇಬಿಯಾದ ಯುವರಾಜನಿಗೆ ಗಲ್ಲು ಶಿಕ್ಷೆ

By Mahesh
|
Google Oneindia Kannada News

ರಿಯಾದ್, ಅಕ್ಟೋಬರ್ 20: ವ್ಯಕ್ತಿಯೊಬ್ಬನನ್ನು ಗುಂಡಿಟ್ಟು ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದ ರಾಜ ಮನೆತನದ ಯುವರಾಜನನ್ನು ನೇಣಿಗೇರಿಸಲಾಗಿದೆ.

ಆದೆಲ್ ಅಲ್ ಮಹೆಮಿದೆ ಎಂಬ ಸೌದಿ ನಾಗರಿಕನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಕ್ಕಾಗಿ ಯುವರಾಜ ತುರ್ಕಿ ಬಿನ್ ಸೌದ್ ಅಲ್ ಕಬೀರ್ ಅವರಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿತ್ತು. ಈ ವಿಧಿ ವಿಧಾನ ಪೂರ್ಣಗೊಂಡಿದೆ ಎಂದು ಸೌದಿ ಅರೇಬಿಯಾದ ಆಂತರಿಕ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Saudi Arabia executes Prince Turki bin Saud bin Turki bin Saud Al-Kabeer

ಸೌದಿಯ ಯುವರಾಜ ತನ್ನ ಸ್ನೇಹಿತನನ್ನು ಹತ್ಯೆ ಮಾಡಿದ ಆರೋಪ ಸಾಬೀತಾಗಿದೆ ಎಂದು ಯುವರಾಜನ ಹೆಸರನ್ನು ನಮೂದಿಸದೆ ನವೆಂಬರ್ 2014ರಲ್ಲಿ ಅರಬ್ ​ನ ಪತ್ರಿಕೆಯೊಂದು ವರದಿ ಮಾಡಿತ್ತು. ನಂತರ ಈ ಬಗ್ಗೆ ತನಿಖೆ ನಡೆಸಿದಾಗ ಯುವರಾಜ ತಪ್ಪು ಎಸಗಿಸುರುವುದು ಸಾಬೀತಾಗಿತ್ತು,

2012ರ ಡಿಸೆಂಬರ್​ನಲ್ಲಿ ಸಮೀಪದ ಕ್ಯಾಂಪ್​ನಲ್ಲಿ ಯುವರಾಜ ಮತ್ತು ಆತನ ಸ್ನೇಹಿತನ ನಡುವೆ ವಾಗ್ವಾದ ನಡೆದಿತ್ತು. ಆ ನಂತರ ಯುವರಾಜ ಆತನಿಗೆ ಗುಂಡಿಟ್ಟು ಹತ್ಯೆ ಮಾಡಿದ್ದ ಮತ್ತು ಮತ್ತೋರ್ವನಿಗೆ ಗುಂಡೇಟು ತಗುಲಿತ್ತು. ನಂತರ ಹತ್ಯೆಗೀಡಾದ ವ್ಯಕ್ತಿ ತನ್ನ ಸ್ನೇಹಿತ ಎಂದು ಪೊಲೀಸ ಮುಂದೆ ಯುವರಾಜ ಹೇಳಿಕೊಂಡಿದ್ದ.

ಸೌದಿ ಅರೇಬಿಯಾದಲ್ಲಿ ನ್ಯಾಯಾಂಗ ವ್ಯವಸ್ಥೆ ಕಟ್ಟುನಿಟ್ಟಾಗಿದ್ದು, 2015ರಲ್ಲಿ 158 ಜನರಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿತ್ತು. ಈ ವರ್ಷ ಇದುವರೆಗೂ 134 ಜನರಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ. ಕೊಲೆ, ಮಾದಕ ವಸ್ತು ಕಳ್ಳ ಸಾಗಣೆ, ದರೋಡೆ, ಅತ್ಯಾಚರ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗುತ್ತದೆ.

English summary
Saudi Arabia executes Prince Turki bin Saud bin Turki bin Saud Al-Kabeer . Prince Turki bin Saud bin Turki bin Saud Al-Kabeer was convicted in the shooting death of a man during a "group quarrel," the statement according to the state-run Saudi Press Agency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X