ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾರದೋ ಕರುಣೆಯಲ್ಲಿ ಬದುಕುವ ಅನಿವಾರ್ಯ ನನಗಿಲ್ಲ: ವಿಜಯ್ ಮಲ್ಯ

ಚುನಾವಣೆ ಇದೆ ಅನ್ನೋ ಕಾರಣಕ್ಕೆ ಭಾರತದ ಎರಡು ಪ್ರಮುಖ ಪಕ್ಷಗಳು ನನ್ನನ್ನು ಫುಟ್ ಬಾಲ್ ನಂತೆ ಮಾಡಿಕೊಂಡಿವೆ. ಅವರ ಬಳಿ ಸಾಕ್ಷ್ಯಗಳಿದ್ದರೆ ತರಲಿ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ ಲಂಡನ್ ನಲ್ಲಿರುವ ಮದ್ಯದ ದೊರೆ ವಿಜಯ್ ಮಲ್ಯ

By ವಿಕಾಸ್ ನಂಜಪ್ಪ
|
Google Oneindia Kannada News

ಲಂಡನ್, ಫೆಬ್ರವರಿ 23: "ನಾನು ರಾಜಕಾರಣಿಗಳ ಪಾಲಿನ ಫುಟ್ ಬಾಲ್ ಆಗಿದ್ದೀನಿ"- ಇದು ಮದ್ಯದ ದೊರೆ ವಿಜಯ್ ಮಲ್ಯ ಹೇಳಿಕೆ. ಮಲ್ಯನನ್ನು ಹಸ್ತಾಂತರಿಸುವಂತೆ ಭಾರತವು ಯುನೈಟೆಡ್ ಕಿಂಗ್ ಡಮ್ ನನ್ನು ಮನವಿ ಮಾಡಿದೆ. ಚುನಾವಣೆ ನಡೆಯುತ್ತಿರುವುದರಿಂದ ಭಾರತದ ಎರಡು ರಾಜಕೀಯ ಪಕ್ಷಗಳ ಪಾಲಿಗೆ ನಾನು ಫುಟ್ ಬಾಲ್ ನಂತೆ ಆಗಿದ್ದೇನೆ ಎಂದು ಮಲ್ಯ ಹೇಳಿದ್ದಾರೆ.

ನನ್ನ ವಿರುದ್ಧ ಏನೆಲ್ಲ ಸಾಕ್ಷ್ಯಗಳಿವೆಯೋ ಅವುಗಳನ್ನು ತರಲಿ. ಅವರ ಬಳಿ ಯಾವುದೇ ಸಾಕ್ಷ್ಯಗಳಿರುವುದೇ ನನಗೆ ಅನುಮಾನ ಎಂದು ಮಲ್ಯ ಹೇಳಿರುವುದಾಗಿ ಎಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅವರ ಬಳಿ ಸಾಕ್ಷ್ಯಗಳಿದ್ದರೆ ಕಾನೂನು ಅದರ ರೀತಿಯಲ್ಲೇ ಕ್ರಮ ಕೈಗೊಳ್ಳುತ್ತದೆ. ಯುಕೆ ಕಾನೂನಿನಡಿ ನಾನು ಸುರಕ್ಷಿತವಾಗಿದ್ದೇನೆ ಎಂದು ಕೂಡ ಹೇಳಿದ್ದಾರೆ.[ಮಲ್ಯ, ಲಲಿತ್ ಮೋದಿ, ಟೈಗರ್ ಮೆನನ್ ಹಸ್ತಾಂತರಕ್ಕೆ ಬ್ರಿಟನ್ ಸಮ್ಮತಿ?]

Safe in UK, don't want to be at the mercy of a maverick says Vijay Mallya

ಕ್ಷಮೆ ಕೇಳುವಂಥ ಪರಿಸ್ಥಿತಿ ಎದುರಿಸುವುದಕ್ಕಿಂತ ಸುರಕ್ಷಿತವಾಗಿರಲು ಬಯಸುತ್ತೇನೆ. ಜತೆಗೆ ಯಾರದೋ ಕರುಣೆಯಲ್ಲಿ ಬದುಕುವ ಅನಿವಾರ್ಯ ನನಗಿಲ್ಲ ಎಂದು ಮಲ್ಯ ಹೇಳಿದ್ದಾರೆ. ಭಾರತ ಹಾಗೂ ಯುಕೆ ಅಧಿಕಾರಿಗಳ ಮಧ್ಯೆ ಮಲ್ಯ ಹಸ್ತಾಂತರದ ಬಗ್ಗೆ ಮಾತುಕತೆ ನಡೆದ ಎರಡು ದಿನಗಳ ನಂತರ ಮದ್ಯದ ದೊರೆ ಈ ಹೇಳಿಕೆ ನೀಡಿದ್ದಾರೆ.[ಮಲ್ಯ-ಯುಕೆಯಿಂದ ಕೋರ್ಟಿನ ಕಟಕಟೆಗೆ ಈಗ ಸಾಧ್ಯ!]

ವಿಜಯ್ ಮಲ್ಯ ವಿಚಾರವಾಗಿಯೇ ಮಾತುಕತೆ ನಡೆಯಿತೇ ಎಂದು ಒನ್ಇಂಡಿಯಾ ವಿಚಾರಿಸಿದಾಗ, ಯಾವುದೇ ಪ್ರತಿಕ್ರಿಯೆ ನೀಡಲು ಅಧಿಕಾರಿಗಳು ನಿರಾಕರಿಸಿದರು. ಯುಕೆಯಲ್ಲಿರುವ ಭಾರತಕ್ಕೆ ಬೇಕಾದ ಶಂಕಿತರ ಹಸ್ತಾಂತರಕ್ಕೆ ಬೇಕಾದ ಕಾನೂನು ಪ್ರಕ್ರಿಯೆ ಸರಳಗೊಳಿಸಲು ಮಾತುಕತೆ ನಡೆದಿದೆ ಮತ್ತು ಅದು ಫಲಪ್ರದವಾಗಿದೆ ಎಂದು ತಿಳಿದುಬಂದಿದೆ.

English summary
I have become a political football said liquor baron Vijay Mallya whose extradition from the United Kingdom, India has sought. Mallya said that the election rhetoric by the two major Indian parties is evident that he has become a political football.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X