ವೈರಲ್ ಆದ ರಷ್ಯಾ ಅಧ್ಯಕ್ಷರ ಬೇಸಿಗೆ ಮೋಜಿನ 'ಮೀನು ಬೇಟೆ'

Subscribe to Oneindia Kannada

ಮಾಸ್ಕೊ, ಆಗಸ್ಟ್ 6: ಸಾಮಾನ್ಯವಾಗಿ ಪ್ರಧಾನ ಮಂತ್ರಿ, ಅಧ್ಯಕ್ಷರುಗಳು ಒತ್ತಡದಲ್ಲಿ, ಬಿಡುವಿಲ್ಲದ ಕೆಲಸದಲ್ಲಿ ನಿರತವಾಗಿರುವುದೇ ಹೆಚ್ಚು. ಅದರಲ್ಲೂ ಭಾರತದಂಥ ದೇಶದಲ್ಲಿ ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳು ಮೋಜು ಮಸ್ತಿ ಮಾಡುವುದನ್ನು, ವಿರಾಮ ತೆಗೆದುಕೊಳ್ಳುವುದನ್ನು ಕಲ್ಪಿಸಿಕೊಳ್ಳುವುದೇ ಕಷ್ಟ.

ಆದರೆ ಪಾಶ್ಚಿಮಾತ್ಯ ದೇಶಗಳು ಸ್ವಲ್ಪ ಭಿನ್ನ. ಇಲ್ಲಿ ಅಧ್ಯಕ್ಷರು, ಪ್ರಧಾನಮಂತ್ರಿಗಳು ಕುಟುಂಬ ಸಮೇತರಾಗಿ ರಜೆ ತೆಗೆದುಕೊಂಡು ಪ್ರವಾಸ ಮಾಡುತ್ತಾರೆ. ಒತ್ತಡದ ಜೀವನದಿಂದ ಒಂದಷ್ಟು ವಿರಾಮಕ್ಕೆ ಜಾರುತ್ತಾರೆ.

ಈ ರೀತಿ ಪ್ರವಾಸ ಹೋಗಿ ಬರಾಕ್ ಒಬಾಮ ಹಲವು ಬಾರಿ ಸುದ್ದಿಯಾಗಿದ್ದಿದೆ. ಆದರೆ ಇವರನ್ನೆಲ್ಲಾ ಮೀರಿಸಿ ರಷ್ಯಾ ಅಧ್ಯಕ್ಷ ವ್ಲಾದಿಮೀರ್ ಪುಟಿನ್ ರ ರಜಾ ಮೋಜು ಈಗ ಸದ್ದು ಮಾಡುತ್ತಿದೆ. ಸಿನಿಮಾ ಹೀರೋಗಳ ರೀತಿ ಬರಿಮೈಯಲ್ಲಿ ರಷ್ಯಾ ಅಧ್ಯಕ್ಷರು ಮೀನಿಗೆ ಗಾಳ ಹಾಕುತ್ತಿರುವ, ನೀರಿನಾಳದಲ್ಲಿ ಈಜುತ್ತಿರುವ ವಿಡಿಯೋ ವೈರಲ್ ಆಗಿದೆ.

ಬೈಕಲ್ ನಲ್ಲಿ ಮೋಜು

ಬೈಕಲ್ ನಲ್ಲಿ ಮೋಜು

ಬೇಸಿಗೆ ಮೋಜಿನಲ್ಲಿದ್ದ ಻ಅಧ್ಯಕ್ಷರು ತಮ್ಮ ಸಮಯ ಕಳೆಯಲು ಆಯ್ಕೆ ಮಾಡಿಕೊಂಡಿದ್ದು ಸೈಬೀರಿಯಾದಲ್ಲಿರುವ ವಿಶ್ವದ ಅತ್ಯಂತ ಆಳದ 1700 ಮೀಟರ್ ಆಳವಿರುವ ಸಿಹಿ ನೀರಿನ ಸರೋವರ 'ಬೈಕಲ್'.

ಗಾಳ ಹಾಕಿದ ಅಧ್ಯಕ್ಷ

ಹಲವು ದೇಶಗಳ ಸಮಸ್ಯೆ ಮಧ್ಯೆ ಮೂಗು ತೂರಿಸುವ ರಷ್ಯಾ ಅಧ್ಯಕ್ಷರು ಮೀನಿಗೆ ಗಾಳ ಹಾಕುವುದರಲ್ಲೂ ನಿಸ್ಸೀಮರು ಎಂಬುದನ್ನು ತೋರಿಸಿದ್ದಾರೆ. ಸ್ವತಃ ತಾವೇ ಮೀನು ಬೇಟೆಗೆ ಇಳಿದ ಅಧ್ಯಕ್ಷರು ಗಾಳ ಹಾಕಿ ಮೀನು ಹಿಡಿದೇ ಬಿಟ್ಟರು; ಅದು ಒಂದೆರಡಲ್ಲ ಹಲವು ಮೀನುಗಳನ್ನು ಹಿಡಿದರು.

ಡೈವಿಂಗ್

ಬೋಟ್ ನಲ್ಲಿ ನಿಂತು ಗಾಳ ಹಾಕಿದ್ದು ಮಾತ್ರವಲ್ಲ ನೀರಿನಾಳದ ಈಜು, 'ಡೈವಿಂಗ್' ಕೂಡಾ ಮಾಡಿದ್ದಾರೆ. ಹಾಗೆ ಡೈವಿಂಗ್ ನಿಂದ ವಾಪಾಸಾದ ಻ಅಧ್ಯಕ್ಷರು ಯುನೆಸ್ಕೋ ವಿಶ್ವ ಪಾರಂಪರಿಕ ತಾಣ 'ಬೈಕಲ್' ಸರೋವರ ಮಾಲಿನವಾಗುತ್ತಿದೆ ಎಂಬ ಎಚ್ಚರಿಕೆಯ ಭಾಷಣ ಬೇರೆ ಬಿಗಿದಿದ್ದಾರೆ.

ರಕ್ಷಣಾ ಸಚಿವರು ಸಾಥ್

ರಕ್ಷಣಾ ಸಚಿವರು ಸಾಥ್

ಅಧ್ಯಕ್ಷರ ಪ್ರವಾಸಕ್ಕೆ ಜತೆಯಾದವರು ಸೆರ್ಗೈ ಕೆ ಶೋಯ್ಗು. ಅವರೂ ಅಧ್ಯಕ್ಷರ ಜತೆ ಶರ್ಟ್ ಬಿಚ್ಚಿ ಫೋಟೋಗಳಿಗೆ ಪೋಸ್ ನೀಡುತ್ತಾ ಮೀನು ಬೇಟೆಯಾಡಿದರು.

ಹವ್ಯಾಸಗಳ ಹೊತ್ತ ಅಧ್ಯಕ್ಷ

ಹವ್ಯಾಸಗಳ ಹೊತ್ತ ಅಧ್ಯಕ್ಷ

ರಷ್ಯಾ ಅಧ್ಯಕ್ಷರಿಗೀಗ 64 ವರ್ಷ ವಯಸ್ಸು. ಆದರೆ ಅವರು ಮಾಡುವ ಕಸರತ್ತುಗಳನ್ನುನೋಡಿದರೆ ಯಾರಾದರೂ ಬೆರಗಾಗುತ್ತಾರೆ. ಇಂದಿಗೂ ಏನೇ ಪ್ರವಾಸಗಳಿದ್ದರೂ ದೈಹಿಕ ಕಸರತ್ತುಗಳನ್ನು ಮಾಡಿಯೇ ತಮ್ಮ ದಿನಚರಿ ಆರಂಭಿಸುತ್ತಾರೆ ಪುಟಿನ್. ಹಾಗಾಗಿ ಈಗಲೂ ಕಟ್ಟುಮಸ್ತಾದ ದೇಹವನ್ನು ಹೊಂದಿದ್ದಾರೆ.

ಆಗಾಗ ಜೂಡೋ ಆಡುತ್ತಾರೆ; ಇವತ್ತಿಗೂ ಬಾಕ್ಸಿಂಗ್ ರಿಂಗ್ ನಲ್ಲಿ ಕಾಣಿಸಿಕೊಳ್ಳುತ್ತಾರೆ; ಹಾಗೇ ಒಮ್ಮೆಮ್ಮೆ ಗನ್ ಹಿಡಿದು ಬೇಟೆಗೂ ತೆರಳುವುದು ಅಧ್ಯಕ್ಷರ ಹವ್ಯಾಸಗಳಲ್ಲಿ ಸೇರಿವೆ.

Blue Whale Challenge Game: 14 Year Old Boy Suicide | Oneindia Kannada

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Russia president Vladimir Putin went fishing and diving at Lake Baikal in Siberia on his summer vacation with defense minister, Sergei K. Shoigu.
Please Wait while comments are loading...