ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದಲ್ಲಿ ಭೀಕರ ಭೂಕಂಪ, ಸುನಾಮಿ ಭೀತಿ

ರಷ್ಯಾದ ಪೂರ್ವ ಕರಾವಳಿಯಲ್ಲಿ ಭೀಕರ ಭೂಕಂಪ ಸಂಭವಿಸಿದ್ದು, ರಿಕ್ಚರ್ ಮಾಪಕದಲ್ಲಿ 6.6 ರಷ್ಟು ಪ್ರಮಾಣ ಕಂಡು ಬಂದಿದೆ. ಸುನಾಮಿ ಮುನ್ಸೂಚನೆ ನೀಡಲಾಗಿದ್ದು, ಲಕ್ಷಾಂತರ ಜನರು ಭೀತಿಯಲ್ಲಿದ್ದಾರೆ.

By Mahesh
|
Google Oneindia Kannada News

ಮಾಸ್ಕೋ, ಮಾರ್ಚ್ 29: ರಷ್ಯಾದ ಪೂರ್ವ ಕರಾವಳಿಯಲ್ಲಿ ಭೀಕರ ಭೂಕಂಪ ಸಂಭವಿಸಿದ್ದು, ರಿಕ್ಚರ್ ಮಾಪಕದಲ್ಲಿ 6.6 ರಷ್ಟು ಪ್ರಮಾಣ ಕಂಡು ಬಂದಿದೆ. ಸುನಾಮಿ ಮುನ್ಸೂಚನೆ ನೀಡಲಾಗಿದ್ದು, ಬೇರಿಂಗ್ ಸಮುದ್ರದಿಂದ ಸುನಾಮಿ ವಲಯ ಎನ್ನಲಾಗುವ ರಿಂಗ್ ಆಫ್ ಫೈರ್ ವಲಯದಲ್ಲಿ ಲಕ್ಷಾಂತರ ಜನರು ಭೀತಿಯಲ್ಲಿದ್ದಾರೆ.

ರಷ್ಯಾದ ಪೂರ್ವ ಕರಾವಳಿಯ ಪೆಟ್ರೊಪಾವ್ಲೊವ್ಸ್ಕ್ ಕಾಮ್ಚಾಟ್ ಸ್ಕಿ ಪ್ರದೇಶದಲ್ಲಿ ಸರಿ ಸುಮಾರು 187,000 ಮಂದಿ ನೆಲೆಸಿದ್ದಾರೆ.

Russia earthquake: Tsunami warning after 6.6-magnitude quake strikes eastern coast

ಆದರೆ, ಹವಾಯಿ ಮೂಲದ ಸುನಾಮಿ ಮುನ್ಸೂಚನೆ ಕೇಂದ್ರದ ಪ್ರಕಾರ ಸದ್ಯಕ್ಕೆ ಸುನಾಮಿ ಭೀತಿಯಿಲ್ಲ. ಆದರೆ, 1.5 ಮೀಟರ್ ಎತ್ತರದ ದೈತ್ಯ ಅಲೆಗಳನ್ನು ಮುಂದೆ ನಿರೀಕ್ಷಿಸಬಹುದು ಹೇಳಿದೆ. ಭೂಮಿಯ ಮೇಲ್ಪದರ 22.8 ಕಿ.ಮೀ ಆಳದಲ್ಲಿ ಕಂಪನದ ತೀವ್ರತೆ ಕಂಡು ಬಂದಿದೆ.

ಕಂಬಲ್ನಿ ಅಗ್ನಿಪರ್ವತ ಕೂಡಾ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸಕ್ರಿಯವಾಗಿ ಬೆಂಕಿಯುಗುಳುತ್ತಿದ್ದು, ಕಾಮ್ಚಾಟ್ ಸ್ಕಿ ಪ್ರದೇಶದ ಜನತೆಗೆ ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ.

English summary
A powerful 6.6-magnitude earthquake has stuck off Russia's eastern coast, at the Kamchatka peninsula
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X