ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾಳಿ ಮಾಡಲು ವಾಹನಗಳ ಬಳಕೆ, ಉಗ್ರರ ಹೊಸ ತಂತ್ರ?

By ವಿಕಾಸ್ ನಂಜಪ್ಪ
|
Google Oneindia Kannada News

ಪ್ಯಾರೀಸ್, ಜುಲೈ 14 : ವಾಹನಗಳನ್ನು ಅಸ್ತ್ರಗಳಾಗಿ ಬಳಕೆ ಮಾಡಿಕೊಂಡು ದಾಳಿ ನಡೆಸಬೇಕು ಎಂಬುದು ಉಗ್ರರ ಹೊಸ ತಂತ್ರವಲ್ಲ. 2014ರಲ್ಲಿಯೇ ಐಎಸ್‌ಐಎಸ್ ಉಗ್ರ ಸಂಘಟನೆ ಈ ಕುರಿತು ಸಾಮಾಜಿಕ ಜಾಲ ತಾಣದಲ್ಲಿ ಸಂದೇಶವನ್ನು ಹಾಕಿತ್ತು.

ಫ್ರಾನ್ಸ್ ಮತ್ತು ಅಮೆರಿಕಗಳ ಮೇಲೆ ವಾಹನಗಳ ಮೂಲಕ ದಾಳಿ ಮಾಡಿ, ಜನರ ಮೇಲೆ ವಾಹನಗಳನ್ನು ಹತ್ತಿಸಿ ಅವರನ್ನು ಹತ್ಯೆ ಮಾಡಿ ಎಂದು ಐಎಸ್‌ಐಎಸ್ 2014ರಲ್ಲಿಯೇ ಕರೆ ಕೊಟ್ಟಿತ್ತು. ಗುರುವಾರ ನೀಸ್ ನಗರದ ಮೇಲೆ ನಡೆದ ದಾಳಿ ಇದೇ ಮಾದರಿಯದ್ದು ಎಂದು ಶಂಕಿಸಲಾಗಿದೆ. [ಫ್ರಾನ್ಸ್ ಮೇಲೆ ದಾಳಿ ಮಾಡಿದ್ದು ISIS]

Run them over with your cars, ISIS had said in a 2014 video

ನೀಸ್ ನಗರದಲ್ಲಿ ಲಾರಿ ಹತ್ತಿಸಿ 80 ಜನರನ್ನು ಹತ್ಯೆ ಮಾಡಲಾಗಿದೆ. ಈ ದಾಳಿಯ ಹಿಂದೆ ಉಗ್ರರ ಕೈವಾಡವಿದೆ? ಎಂದು ಶಂಕಿಸಲಾಗಿದೆ. 31 ವರ್ಷ ವಯಸ್ಸಿನ ಲಾರಿ ಚಾಲಕ ಗುರುವಾರ ನೈಸ್ ನಗರದಲ್ಲಿಯೂ ಇದೇ ತಂತ್ರ ಅನುಸರಿಸಿ ಹತ್ಯಾಕಾಂಡ ಮಾಡಿದ್ದಾನೆ.[ಫ್ರಾನ್ಸ್ ನಲ್ಲಿ ಲಾರಿ ಹರಿಸಿ 77 ಜನರ ಭೀಕರ ಹತ್ಯೆ]

ಐಎಸ್‌ಐಎಸ್ ಮಾತ್ರವಲ್ಲ ಅಲ್‌ಖೈದಾ ಸಂಘಟನೆ ಸಹ ವಾಹನಗಳನ್ನು ಬಳಸಿಕೊಂಡು ವಿದೇಶಿಯರ ಮೇಲೆ ದಾಳಿ ಮಾಡಿ ಎಂದು ಕರೆ ನೀಡಿತ್ತು. 2014ರಲ್ಲಿ ಅಲ್‌ಖೈದಾ ಈ ಕುರಿತ ವಿಡಿಯೋವನ್ನು ಬಿಡುಗಡೆ ಮಾಡಿತ್ತು.

English summary
There are weapons and cars available and targets ready to be hit. Kill them spit in their faces and run them over with your cars. This was a message put out in 2014 by an ISIS operative while making a call for all lone wolves to kill Americans and the French.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X