ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಯುಎಸ್ ರಾಯಭಾರಿ ರಾಹುಲ್ ವರ್ಮ

By Mahesh
|
Google Oneindia Kannada News

ವಾಷಿಂಗ್ಟನ್, ಡಿ.10 : ಅಮೆರಿಕದ ಮುಂದಿನ ಭಾರತೀಯ ರಾಯಭಾರಿಯಾಗಿ ರಿಚರ್ಡ್‌ ರಾಹುಲ್ ವರ್ಮ ಅವರು ನೇಮಕಗೊಂಡಿದ್ದಾರೆ. ಯುಎಸ್ ಸೆನೆಟ್ ನಲ್ಲಿ ಧ್ವನಿ ಮತದ ಮೂಲಕ ಮತದಾನದ ನಡೆದು ರಾಹುಲ್ ಅವರ ನೇಮಕಾತಿಗೆ ಸಮ್ಮತಿ ಸಿಕ್ಕಿದೆ.

ರಿಚರ್ಡ್ ರಾಹುಲ್ ವರ್ಮ ಭಾರತೀಯ ರಾಯಭಾರಿಯಾಗಿ ಮೊತ್ತಮೊದಲ ಅನಿವಾಸಿ ಭಾರತೀಯರಾಗಿದ್ದಾರೆ. ಸದ್ಯದಲ್ಲೇ ಅಧಿಕಾರಿ ವಹಿಸಿಕೊಳ್ಳಲಿದ್ದಾರೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ.

ಜನವರಿ 26ರ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಭಾರತಕ್ಕೆ ಅಗಮಿಸಲಿರುವ ಯುಎಸ್ ಅಧ್ಯಕ್ಷ ಬರಾಕ್ ಒಬಾಮಾ ಅವರೊಂದಿಗೆ 46ರ ಹರೆಯದ ರಾಹುಲ್ ವರ್ಮ ಕೂಡಾ ಭಾರತಕ್ಕೆ ಬರಲಿದ್ದಾರೆ.

Richard Rahul Verma confirmed as US ambassador to India

46 ವರ್ಷ ವಯಸ್ಸಿನ ರಾಹುಲ್ ವರ್ಮ ಅವರು ಅಮೆರಿಕದ ಸಂಸದೀಯ ವ್ಯವಹಾರಗಳ ಸಹಾಯಕ ಕಾರ್ಯದರ್ಶಿಯಾಗಿ 2009ರಿಂದ 2011ರ ವರೆಗೆ ಒಬಾಮಾ ಆಡಳಿತದಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಮಾಜಿ ಕಾರ್ಯದರ್ಶಿ ಹಿಲ್ಲರಿ ಕ್ಲಿಂಟನ್ ಅವರ ತಂಡದ ಪ್ರಮುಖ ಸದಸ್ಯರಾಗಿದ್ದರು.

ಕಳೆದ ಮಾರ್ಚ್ ನಲ್ಲಿ ನ್ಯಾನ್ಸಿ ಪೊವೆಲ್ ಅವರು ರಾಯಭಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ದೇವಯಾನಿ ಕೋಬ್ರಾಗಡೆ ಪ್ರಕರಣದಿಂದ ನ್ಯಾನ್ಸಿ ಅವರು ಭಾರಿ ಟೀಕೆ, ಮುಜುಗರಕ್ಕೆ ಒಳಗಾಗಿದ್ದರು. ನ್ಯಾನ್ಸಿ ಸ್ಥಾನವನ್ನು ಈಗ ಎನ್ನಾರೈ ರಾಹುಲ್ ವರ್ಮ ತುಂಬಲಿದ್ದಾರೆ(ಐಎಎನ್ಎಸ್)

English summary
The US Senate has confirmed Richard Rahul Verma, President Barack Obama's nominee to be the next American ambassador to India, making him the first Indian-American envoy in New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X