ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿನ್ನಾ ಮೀಸೆ ಬೋಳಿಸಿಕೊಂಡಿದ್ದೇಕೆ? ಪುಸ್ತಕ ಬಿಚ್ಚಿಟ್ಟ ಸತ್ಯ

ತಮ್ಮ 40ನೇ ವಯಸ್ಸಿನಲ್ಲಿ ಮಹಮ್ಮದ್ ಅಲಿ ಜಿನ್ನಾ ರುಟ್ಟೀ ಪೆಟಿಟ್ ಎಂಬಾಕೆ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಅವತ್ತು ಪೆಟಿಟ್ ಜಿನ್ನಾ ಮುಂದಿಟ್ಟ ಬೇಡಿಕೆ ಒಂದೇ; ನೀನು 'ಮೀಸೆ ತೆಗೆಯಬೇಕು’.

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಏಪ್ರಿಲ್ 19: ಪಾಕಿಸ್ತಾನದ ಜನಕ ಮಹಮ್ಮದ್ ಆಲಿ ಜಿನ್ನಾ ಯಾವತ್ತೂ ಕ್ಲೀನ್ ಶೇವ್ ನಲ್ಲೇ ಕಾಣಿಸಿಕೊಳ್ಳುತ್ತಿದ್ದರು. ಎಲ್ಲರೂ ಮೀಸೆ ತೆಗೆಯುತ್ತಾರೆ. ಆದರೆ ಜಿನ್ನಾ ಕ್ಲೀನ್ ಶೇವ್ ನಲ್ಲಿ ಕಾಣಿಸಿಕೊಳ್ಳುವುದರ ಹಿಂದೊಂದು ಕಥೆಯಿದೆ. ಅದೊಂದು ಪ್ರೇಮ ಕಥೆ.

ತಮ್ಮ 40ನೇ ವಯಸ್ಸಿನಲ್ಲಿ ಮಹಮ್ಮದ್ ಅಲಿ ಜಿನ್ನಾ ರುಟ್ಟೀ ಪೆಟಿಟ್ ಎಂಬಾಕೆ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಅವತ್ತು ಪೆಟಿಟ್ ಜಿನ್ನಾ ಮುಂದಿಟ್ಟ ಬೇಡಿಕೆ ಒಂದೇ; ನೀನು 'ಮೀಸೆ ತೆಗೆಯಬೇಕು'. ಆಗ ಜಿನ್ನಾ ಗಡ್ಡ ಮತ್ತು ಮೀಸೆ ತೆಗೆದಿದ್ದು ಮಾತ್ರವಲ್ಲ ಆಕೆಯನ್ನು ಮೆಚ್ಚಿಸಲು ತಮ್ಮ ಹೇರ್ ಸ್ಟೈಲ್ ಕೂಡಾ ಬದಲಾಯಿಸಿಕೊಂಡರು.[ಕ್ಯಾಮೆರಾ ಬದಿಗಿಟ್ಟು ಮಕ್ಕಳನ್ನು ರಕ್ಷಿಸಿದ ಪತ್ರಿಕಾ ಛಾಯಾಗ್ರಾಹಕ]

Revealed: The real reason why Jinnah shaved his moustache

ಈ ಎಲ್ಲಾ ವಿಚಾರಗಳನ್ನು ಹಿರಿಯ ಪತ್ರಕರ್ತೆ ಶೀಲಾ ರೆಡ್ಡಿ ತಮ್ಮ "ಮಿಸ್ಟರ್ ಆ್ಯಂಟ್ ಮಿಸೆಸ್ ಜಿನ್ನಾ - ದಿ ಮ್ಯಾರೇಜ್ ದ್ಯಾಟ್ ಶೂಕ್ ಇಂಡಿಯಾ," ಪುಸ್ತಕದಲ್ಲಿ ದಾಖಲಿಸಿದ್ದಾರೆ. ಇದರಲ್ಲಿ ತಮಗಿಂತ 24 ವರ್ಷ ಕಿರಿಯವಳಾದ ಪಾರ್ಸಿ ಯುವತಿ ಜೊತೆಗೆ ಜಿನ್ನಾ ಅಸಂತೋಷದಿಂದ ಕಳೆದ ವೈವಾಹಿಕ ಬದುಕಿನ ಬಗ್ಗೆಯೂ ರೆಡ್ಡಿ ಪ್ರಸ್ತಾಪಿಸಿದ್ದಾರೆ.

ತಮ್ಮ ಪುಸ್ತಕದ ಬಗ್ಗೆ ಮಾತನಾಡಿರುವ ಶೀಲಾ ರೆಡ್ಡಿ, "ಅವರು (ಜಿನ್ನಾ) ಪ್ರಪೋಸ್ ಮಾಡಿದಾಗ, ಆಕೆ ಮುಂದಿಟ್ಟ ಒಂದೇ ಷರತ್ತು ಏನೆಂದರೆ ನಿನ್ನ ಮೀಸೆಯನ್ನು ನೀಟಾಗಿ ಶೇವ್ ಮಾಡಿಕೊಳ್ಳಬೇಕು ಎಂಬುದಾಗಿತ್ತು. ಅದಕ್ಕೆ ಅವರು ಒಪ್ಪಿದರು. ಮೀಸೆಯಿಲ್ಲದೆ ಅವರ ಮದುವೆಯೂ ನಡೆಯಿತು. ಮಾತ್ರವಲ್ಲ ತಮ್ಮ ಕೇಶ ವಿನ್ಯಾಸವನ್ನೂ ಅವರು ಬದಲಿಸಿಕೊಂಡರು," ಎಂದು ಹೇಳಿದ್ದಾರೆ.[ಸಿರಿಯಾದಲ್ಲಿ ಕಾರ್ ಬಾಂಬ್ ದಾಳಿಗೆ 100ಕ್ಕೂ ಅಧಿಕ ಮಂದಿ ಬಲಿ]

ಇದೇ ಸಂದರ್ಭದಲ್ಲಿ ರುಟ್ಟೀ ತಂದೆ ದಿನ್ಶಾಹ್ ಮನೇಕ್ಜೀ ಪೆಟಿಟ್ ಜತೆಗೂ ಜಿನ್ನಾ ಸಂಭಾಷಣೆ ನಡೆಸಿರುವುದನ್ನು ಶೀಲಾ ರೆಡ್ಡಿ ವಿವರಿಸಿದ್ದಾರೆ. ಜಿನ್ನಾ ನೇರವಾಗಿ ಹೋಗಿ ರುಟ್ಟೀ ತಂದೆ ಬಳಿಯಲ್ಲಿ ಅಂತರ್ ಧರ್ಮೀಯ ವಿವಾಹದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದ್ದಾರೆ. ಆಗ ದಿನ್ಶಾಹ್, "ಇದು ದೇಶದ ಏಕತೆಗೆ ಬಹಳ ಒಳ್ಳೆಯ ಕೆಲಸ," ಎಂದಿದ್ದರು. ತಕ್ಷಣ ಜಿನ್ನಾ, "ನಾನು ನಿಮ್ಮ ಮಗಳನ್ನು ಮದುವೆಯಾಗಬೇಕೆಂದಿದ್ದೇನೆ," ಎಂದರಂತೆ. ಅಷ್ಟೊತ್ತಿಗೆ ದಿನ್ಶಾಹ್ ಜಿನ್ನಾಗೆ ಮನೆಯ ಬಾಗಿಲಿನ ದಾರಿ ತೋರಿಸಿದ್ದರು.

ಅವತ್ತಿಗೆ ರುಟ್ಟೀಗೆ ಕೇವಲ 16 ವರ್ಷ ವಯಸ್ಸು. ಜಿನ್ನಾ ಆಕೆಯನ್ನು ಮದುವೆಯಾಗಲು ಮತ್ತೆರಡು ವರ್ಷ ಕಾಯಬೇಕಾಯಿತು. ಕೊನೆಗೆ ಆಕೆಗೆ 18 ವರ್ಷವಾಗುತ್ತಿದ್ದಂತೆ ಜಿನ್ನಾ - ರುಟ್ಟೀ ಮದುವೆ ನಡೆಯಿತು. ಅವತ್ತಿನ ಬಾಂಬೆಯಲ್ಲಿದ್ದ ಜಿನ್ನಾ ಹೌಸ್ ನಲ್ಲಿ 1918ರಲ್ಲಿ ಈ ಮದುವೆ ನೆರವೇರಿತು. ವಿಚಿತ್ರವೆಂದರೆ ಕುಟುಂಬಸ್ಥರು ಯಾರೂ ಈ ಮದುವೆಯಲ್ಲಿ ಪಾಲ್ಗೊಳ್ಳಲಿಲ್ಲ.

English summary
The founder of Pakistan, Muhammad Ali Jinnah had no choice but to shave off his moustache. At the age of 40 he proposed to Ruttie Petit and the only condition put-forth by the bride-to-be was, " shave you moustache."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X