ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶನಿವಾರದಿಂದ ಕರಾವಳಿ, ಸೌದಿಯಲ್ಲಿ ರಂಜಾನ್ ಆರಂಭ; ಉಳಿದೆಡೆ ಭಾನುವಾರ

ಸೌದಿ ಅರೇಬಿಯಾದಲ್ಲಿ ಮೇ 27 ಅಂದರೆ ಶನಿವಾರದಿಂದ ರಂಜಾನ್ ತಿಂಗಳು ಆರಂಭವಾಗಲಿದೆ ಎಂದು ಅಲ್ಲಿನ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಭಾರತದಲ್ಲಿ ಇಂದೂ ಚಂದ್ರ ದರ್ಶನ ಸಿಕ್ಕಿಲ್ಲ, ಹಾಗಾಗಿ ಭಾನುವಾರದಿಂದ ರಂಜನ್ ಆರಂಭವಾಗುವ ಸಾಧ್ಯತೆ ಇದೆ.

By Sachhidananda Acharya
|
Google Oneindia Kannada News

ರಿಯಾದ್, ಮೇ 26: ಸೌದಿ ಅರೇಬಿಯಾದಲ್ಲಿ ಮೇ 27 ಅಂದರೆ ಶನಿವಾರದಿಂದ ರಂಜಾನ್ ತಿಂಗಳು ಆರಂಭವಾಗಲಿದೆ ಎಂದು ಅಲ್ಲಿನ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಗುರುವಾರ ರಂಜಾನ್ ಚಂದಿರ ಕಾಣಿಸಲು ಸಿಕ್ಕಿಲ್ಲ. ಹೀಗಾಗಿ ರಂಜಾನ್ ಶನಿವಾರದಿಂದ ಇಲ್ಲಿ ಆರಂಭವಾಗಲಿದೆ.

ಇನ್ನು ಸೌದಿ ಅರೇಬಿಯಾ, ಕುವೈತ್, ಲೆಬೆನಾನ್ ಹಾಗೂ ಘಾನಾ ಪಾಲಿಗೆ ರಂಜಾನ್ ಶುಕ್ರವಾರ ತಡರಾತ್ರಿಯಿಂದ ಅಂದರೆ ಮೇ 26 ರಿಂದ ಅಥವಾ ಮೇ 27ರಿಂದ ಆರಂಭವಾಗಲಿದೆ ಎಂದು 'ಅಲ್ ಜಝೀರಾ' ವಾಹಿನಿ ವರದಿ ಮಾಡಿದೆ.

 Ramzan start in Saudi Arabia from Saturday, in India likely to be on Sunday

ಕತಾರ್, ಯುಎಇ, ಇರಾಕ್ ಮತ್ತು ಲೆಬೆನಾನಿನಲ್ಲಿ ಕೂಡಾ ಗುರುವಾರ ಚಂದಿರನನ್ನು ನೋಡಲು ಸಾಧ್ಯವಾಗಿಲ್ಲ. ಹಾಗಾಗಿ ಶುಕ್ರವಾರ ಚಂದಿರನ ದರ್ಶನ ಸಿಗುವ ಸಾಧ್ಯತೆ ಇದೆ.

ಇದೇ ವೇಳೆ ಈಜಿಪ್ಟ್, ಜೋರ್ಡನ್, ಓಮನ್, ಟರ್ಕಿ, ದಕ್ಷಿಣ ಆಫ್ರಿಕಾ, ನೈಜೀರಿಯಾದಲ್ಲಿ ಶನಿವಾರ ಅಥವಾ ಭಾನುವಾರ ರಂಜಾನ್ ಆರಂಭವಾಗುವ ಸಾಧ್ಯತೆ ಇದೆ. ಆದರೆ ಎಲ್ಲದಕ್ಕೂ ಚಂದ್ರನ ದರ್ಶನ ಸಿಗಬೇಕು ಅಷ್ಟೆ.

ಪಾಕಿಸ್ತಾನದಲ್ಲಿ ಮಾತ್ರ ಅಲ್ಲಿನ ಹವಾಮಾನ ಇಲಾಖೆ ಶನಿವಾರ ರಂಜಾನ್ ಚಂದಿರ ಕಾಣಿಸಿಕೊಳ್ಳಬಹುದು ಎಂದು ಅಂದಾಜು ಮಾಡಿದ್ದು ಭಾನುವಾರ ಪವಿತ್ರ ಮಾಸದ ಮೊದಲ ತಿಂಗಳು ಆರಂಭವಾಗಲಿದೆ.

ಭಾರತದಲ್ಲಿ ಯಾವಾಗ?

ಭಾರತದಲ್ಲಿ ಇಂದು ಕೂಡಾ ಚಂದ್ರ ದರ್ಶನ ಸಿಕ್ಕಿಲ್ಲ ಎಂದು ಮರ್ಕಾಝಿ ಚಂದ್ ಸಮಿತಿಯ ಖಾಲಿದ್ ಫಿರಂಗಿ ಮಹಾಲಿ ಹೇಳಿದ್ದಾರೆ. ಹೀಗಾಗಿ ಭಾನುವಾರ ರಂಜಾನ್ ಆರಂಭವಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕದಲ್ಲಿ ರಂಜಾನ್

ಕೇರಳದ ಕಾಪಾಡ್ ಎಂಬಲ್ಲಿ ಶುಕ್ರವಾರ ಸಂಜೆ ಚಂದ್ರ ದರ್ಶನ ಆಗಿದೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಭಟ್ಕಳ ಭಾಗಗಳಲ್ಲಿ ಶನಿವಾರದಿಂದ ರಂಜಾನ್ ಉಪವಾಸ ಆರಂಭವಾಗಲಿದೆ. ಕರಾವಳಿ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಭಾನುವಾರದಿಂದ ಉಪವಾಸ ಆರಂಭವಾಗಲಿದೆ.

ಚಂದ್ರ ದರ್ಶನ ಆಗಿರುವುದರಿಂದ ಶನಿವಾರದಿಂದಲೇ ಈ ಭಾಗಗಳಲ್ಲಿ ಉಪವಾಸ ಆರಂಭಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್‌ ಮುಸ್ಲಿಯಾರ್‌ ಮತ್ತು ಉಡುಪಿ ಜಿಲ್ಲಾ ಖಾಝಿ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ತಿಳಿಸಿದ್ದಾರೆ.

English summary
Saudi Arabia’s Supreme Court announced that Saturday, May 27 will be the first day of Ramazan. In India Ramzan moon not sighted till now. As per current position May 28 will be the first day of the holy month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X